Breaking News

ಕುಂದಾನಗರಿಯಲ್ಲಿ ಗಣೇಶ ವಿಸರ್ಜನೆ ವೇಳೆ ಲಾಠಿ ಚಾರ್ಜ್

Spread the love

ಬೆಳಗಾವಿ: ನಗರದಲ್ಲಿ ನಡೆಯುತ್ತಿರುವ ಶ್ರೀ ಗಣೇಶೋತ್ಸವ ಮೆರವಣಿಗೆ ವೇಳೆ ಗಣಪತಿ ವಿಸರ್ಜನೆ ಮಾಡಲು ಗಣೇಶ ಮಂಡಳಿಯವರು ವಿಳಂಬ ಮಾಡಿದ್ದಕ್ಕೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ ಘಟನೆ ರವಿವಾರ ರಾತ್ರಿ ಕಪಿಲೇಶ್ವರ ಬ್ರಿಡ್ಜ್ ಬಳಿ ನಡೆದಿದೆ.

ರಾತ್ರಿ 9 ಗಂಟೆ ನಂತರ ಕರ್ಫ್ಯೂ ಆದೇಶಿಸಿದ್ದರೂ ಸಾರ್ವಜನಿಕ ಗಣೇಶ ಮಂಡಳಿಯವರು ಮೆರವಣಿಗೆ ಮಾಡುತ್ತಿದ್ದರು. ಈ ವೇಳೆ ಪೊಲೀಸರು ಗುಂಪು ಚದುರಿಸಲು ಲಾಠಿ ಚಾರ್ಜ್ ನಡೆಸಿದರು.

ರಾತ್ರಿ 12 ಗಂಟೆವರೆಗೂ ಕಪಿಲೇಶ್ವರ್ ಹೊಂಡದ ಸುತ್ತಲೂ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ರಾತ್ರಿ ಆಗುತ್ತಿದ್ದಂತೆ ಈ ಪ್ರದೇಶದಲ್ಲಿ ಜನಸಾಗರವೇ ಹರಿದು ಬಂದಿತ್ತು. ಗಣೇಶ ಮೂರ್ತಿ ನೋಡಲು ಜನ ಆಗಮಿಸಿದ್ದರು. ರಾತ್ರಿ 12:30ರ ಬಳಿಕ ಖಡಕ್ ಗಲ್ಲಿಯ ಗಣಪತಿ ವಿಸರ್ಜನೆ ಆಯಿತು. ಹಲವು ವರ್ಷಗಳಿಂದ ಈ ಗಣಪತಿಯೇ ಕಿನೆಯದಾಗಿ ವಿಸರ್ಜನೆ ಆಗುತ್ತಿತ್ತು. ಮರು‌ಉನ ಮಧ್ಯಾಹ್ನ ವಿಸರ್ಜನೆ ಆಗುತ್ತಿತ್ತು.‌ ಈ ಸಲ ಅತಿ ಬೇಗವಾಗಿದೆ.‌ ಇನ್ನೂ 15ಕ್ಕೂ ಹೆಚ್ಚು ಮೂರ್ತಿಗಳು ವಿಸರ್ಜನೆ ಆಗಬೇಕಿವೆ. ಪೊಲೀಸರು ಬೇಗ ಮುಗಿಸುವಂತೆ ಮಂಡಳಿಯವರಿಗೆ ಹೇಳುತ್ತಿದ್ದಾರೆ.


Spread the love

About Laxminews 24x7

Check Also

8 ನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಹೋರಾಟ, ಸರ್ಕಾರಕ್ಕೆ ಸಂಜೆ 7 ಗಂಟೆಯ ಡೆಡ್‌ಲೈನ್‌

Spread the loveಬೆಳಗಾವಿ, ನವೆಂಬರ್ 6: ಬೆಲೆ ನಿಗದಿಗೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆ (Farmers Protest), ಹೋರಾಟದ ಕಾವು ದಿನದಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ