ಕೊಪ್ಪಳ : ಯಡಿಯೂರಪ್ಪ ನಂತ್ರ, ರಾಜ್ಯದ ಮುಖ್ಯಮಂತ್ರಿಯಾಗಿ ಮುರುಗೇಶ್ ನಿರಾಣಿ ಆಯ್ಕೆ ಆಗೇ ಬಿಟ್ಟರು ಎನ್ನುವಾಗ, ದಿಢೀರ್ ವಿದ್ಯಮಾನಗಳಲ್ಲಿ ಬಸವರಾಜ ಬೊಮ್ಮಾಯಿ ನೇಮಕ ಮಾಡಲಾಗಿತ್ತು. ಆದ್ರೇ.. ಹೀಗೆ ಮುರುಗೇಶ್ ನಿರಾಣಿಗೆ ಸಿಎಂ ಸ್ಥಾನ ತಪ್ಪಿದ್ದಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಅವರೇ ಕಾರಣ ಎಂಬುದಾಗಿ ಕೂಡಲಸಂಗಮ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಇಂದು ಕೊಪ್ಪಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ನಾನು ಮಂತ್ರಿಯಾಗಿಲ್ಲ ಎಂಬುದಕ್ಕೆ ಬೇಜಾರು ಆಗಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಮಂತ್ರಿಗಿರಿಗಿಂತ ಮೀಸಲಾತಿ ಮುಖ್ಯ ಎಂದೇ ತಿಳಿಸಿದ್ದಾರೆ ಎಂದರು.
ಇನ್ನೂ ಮುಂದುವರೆದು ಮಾತನಾಡಿದಂತ ಅವರು, ನಾವು ನಮ್ಮವರು ಮುಖ್ಯಮಂತ್ರಿಯಾಗಬೇಕು ಅಂತ ಪಾದಯಾತ್ರೆ ಮಾಡಿದ್ವಿ. ಆದ್ರೇ ಮುರುಗೇಶ್ ನಿರಾಣಿಗೆ ಸಿಎಂ ಸ್ಥಾನ ತಪ್ಪಿಸಿದ್ದು ಯಾರು ಎಂದು ಎಲ್ಲರಿಗೂ ಗೊತ್ತಿದೆ. ಅದಕ್ಕೆ ಕಾರಣವೇ ಯಡಿಯೂರಪ್ಪ ಎಂಬುದಾಗಿ ಆರೋಪಿಸಿದರು.
Laxmi News 24×7