Breaking News

ಮಾಧುಸ್ವಾಮಿ ಕೊಟ್ಟ CD ನೋಡಿ ಗಾಬರಿಯಾದೆ -ಪರಿಷತ್ ಕಲಾಪ

Spread the love

ಬೆಂಗಳೂರು: ಪರಿಷತ್ ಕಲಾಪದ ವೇಳೆ ಇಂದು CD ವಿಚಾರ ಪ್ರಸ್ತಾಪವಾಯಿತು. ಕಲಾಪದ ವೇಳೆ ಹಾಸ್ಯ ಚಟಾಕಿ ಹಾರಿಸಿದ ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ, ‘CD ನೋಡಿ ಗಾಬರಿಯಾದೆ’ ಅನ್ನೋ ಮೂಲಕ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು.

ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿಗೆ ಶ್ರೀಕಂಠೇಗೌಡ ಪ್ರಶ್ನೆ ಕೇಳಿದ್ದರು. ಪ್ರಶ್ನೆಗೆ ಸಂಬಂಧಿಸಿದ ಮಾಹಿತಿಯನ್ನ ಸಚಿವರು ಸಿಡಿಯಲ್ಲಿ ನೀಡಿದ್ದರು. ಈ ಸಿಡಿ ನೋಡಿ ನನಗೆ ಗಾಬರಿ ಆಯ್ತು ಅಂತಾ ಶ್ರೀಕಂಠೇಗೌಡ ಹಾಸ್ಯ ಚಟಾಕಿ ಹಾರಿಸಿ, ಆ ಸಿಡಿಯನ್ನ ಎತ್ತಿ ತೋರಿಸಿದ್ರು. ಈ ವೇಳೆ ಮಧ್ಯಪ್ರವೇಶಿಸಿದ ಸಭಾಪತಿ ‘ಏನ್ರಿ ಇದೆಲ್ಲ ಸುಮ್ನಿರಿ’ ಅಂದ್ರು.

ನಂತರ ಮಾಧುಸ್ವಾಮಿ ಉತ್ತರಿಸಿ, ಮಾಹಿತಿ ಇಷ್ಟೊಂದು ಕೇಳಿದಾಗ ನಾವು ಸಿಡಿನೂ ಕೊಡಬೇಕಾಗುತ್ತದೆ. ಎನ್​ಸೈಕ್ಲೋಪಿಡಿಯಾನೂ ಕೊಡಬೇಕಾಗುತ್ತದೆ. ಮಾಹಿತಿ ಕೊಟ್ಟರೂ ವ್ಯಂಗ್ಯ ಮಾಡ್ತಾರೆ. ಕೊಡದೇ ಇದ್ದರೂ ವ್ಯಂಗ್ಯ ಮಾಡ್ತಾರೆ, ಏನ್ ಮಾಡೋದು ಅಂತಾ ಮಾಧುಸ್ವಾಮಿ ಹೇಳಿದರು.


Spread the love

About Laxminews 24x7

Check Also

ದಾವಣಗೆರೆ, ಬಾಗಲಕೋಟೆ ವಿಧಾನಸಭೆ ಬೈಎಲೆಕ್ಷನ್: ಉಸ್ತುವಾರಿ ಸಮಿತಿ ರಚನೆ; 31 ಜನರಿಗೆ ಜವಾಬ್ದಾರಿ

Spread the loveಬೆಂಗಳೂರು: ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆ  ಹಿನ್ನೆಲೆ  ಎರಡೂ ಕ್ಷೇತ್ರಕ್ಕೆ ಕಾಂಗ್ರೆಸ್ ಉಸ್ತುವಾರಿ ವೀಕ್ಷಕರ ನೇಮಿಸಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ