ಧಾರವಾಡ): ಧಾರವಾಡದ ಹೆಬ್ಬಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಶುಶೂಷಕಿ ಆಸ್ಪತ್ರೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಕಮಲಾ ನಾಗೇಶ್ವರರಾವ್, ಆತ್ಮಹತ್ಯೆಗೆ ಯತ್ನಿಸಿದ ಶುಶ್ರೂಷಕಿಯಾಗಿದ್ದಾರೆ. ಇವರು ಹಿರಿಯ ಆರೋಗ್ಯ ಶುಶ್ರೂಷಕಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೇಲಾಧಿಕಾರಿಗಳ ಕಿರುಕುಳ ನೀಡುತ್ತಿರುವುದಾಗಿ ಹೇಳಿದ ಇವರು ತಾವು ಸಾಯಬೇಕು, ನನ್ನನ್ನು ಬದುಕಿಸಬೇಡಿ ಎಂದು ಹೇಳುತ್ತಲೇ ಆಸ್ಪತ್ರೆ ಕೊಠಡಿಯಲ್ಲೇ ನೇಣು ಬಿಗಿದುಕೊಂಡಿದ್ದಾರೆ.
ಕೂಡಲೇ ಇವರನ್ನು ಇತರೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ನೇರವಾಗಿ ಡಿಎಚ್‌ಒ ಮೇಲೆ ಆರೋಪ ಮಾಡಿರೋ ಕಮಲಾ ಅವರು, ಅವರ ಕಿರುಕುಳದಿಂದಲೇ ತಾವು ಸಾಯಲು ಹೊರಟಿದ್ದು, ತಮ್ಮನ್ನು ಬದುಕಿಸಬೇಡಿ ಎಂದಿದ್ದಾರೆ. ಧಾರವಾಡ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತನಿಖೆ ಕೈಗೊಳ್ಳಲಾಗಿದೆ.
Laxmi News 24×7