Breaking News

ವಿಧಾನಸಭೆ ಅಧಿವೇಶನ : ಹಲವು ವಿಶೇಷತೆಗಳಿಗೆ ಕಾರಣವಾದ ಸದನ

Spread the love

ಬೆಂಗಳೂರು, ಸೆ.13- ವಿಧಾನಸಭೆ ಅಧಿವೇಶನದ ಮೊದಲ ದಿನವಾದ ಇಂದು ಹೊಸ ಸಚಿವರ ಸಂಭ್ರಮ ಸೇರಿದಂತೆ ಹಲವು ವಿಶೇಷತೆಗಳಿಗೆ ಸದನ ಸಾಕ್ಷಿಯಾಯಿತು.ಕಳೆದ ಅಧಿವೇಶನದಲ್ಲಿ ಮುಖ್ಯಮಂತ್ರಿಯಾಗಿ ಪಾಲ್ಗೊಂಡಿದ್ದ ಬಿ.ಎಸ್.ಯಡಿಯೂರಪ್ಪ ಅವರು ಇಂದು ಮಾಜಿ ಮುಖ್ಯಮಂತ್ರಿಯಾಗಿ ಮುಖ್ಯ ಸಚೇತಕರ ಪಕ್ಕದ ಆಸನದಲ್ಲಿ ಕುಳಿತಿದ್ದರು.

ಕಳೆದ ಅಧಿವೇಶನದಲ್ಲಿ ಸಚಿವರಾಗಿದ್ದ ಜಗದೀಶ್ ಶೆಟ್ಟರ್, ಸುರೇಶ್‍ಕುಮಾರ್ ಅವರು ಈ ಅಧಿವೇಶನದಲ್ಲಿ ಹಿಂದಿನ ಸಾಲಿಗೆ ಸ್ಥಳಾಂತರಗೊಂಡಿದ್ದದ್ದು ಕಂಡು ಬಂದಿತು.ನೂತನ ಸಚಿವರಾದ ಮುನಿರತ್ನ ಹಾಗೂ ಶಂಕರಪಾಟೀಲ್ ಮುನೇನ ಕೊಪ್ಪ ಸದನದಲ್ಲಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಮುಖ್ಯಮಂತ್ರಿ ರೇಸ್‍ನಲ್ಲಿದ್ದ ಶಾಸಕ ಅರವಿಂದ ಬೆಲ್ಲದ್ ಇಂದು ಸದನದ ಕೇಂದ್ರ ಬಿಂದುವಾಗಿ ಎಲ್ಲರ ಗಮನ ಸೆಳೆದರು.ಆಡಳಿತ ಪಕ್ಷದ ಶಾಸಕರನ್ನು ಮಾತನಾಡಿಸುತ್ತಾ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು. ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಆಡಳಿತ ಪಕ್ಷದ ಮೊದಲ ಸಾಲಿನ ಮೂರನೆಯ ಆಸನದ ಬದಲಿಗೆ ಐದನೆಯ ಆಸನಕ್ಕೆ ಸ್ಥಳಾಂತರಗೊಂಡಿದ್ದರು.

ಬೆಳಗಾವಿಯ ಮಹಾನಗರ ಪಾಲಿಕೆಯ ನೂತನ ಸದಸ್ಯರು ಕೇಸರಿ ಪೇಟ ಹಾಕಿಕೊಂಡು ಗ್ಯಾಲರಿಯಲ್ಲಿ ಸದನದ ಕಲಾಪವನ್ನು ವೀಕ್ಷಣೆ ಮಾಡಿದರು.


Spread the love

About Laxminews 24x7

Check Also

ಅಪಘಾತದ ಕಥೆ ಕಟ್ಟಿ ಹಣ ಸುಲಿಗೆ; ವಯೋವೃದ್ಧ ಕಾರು ಚಾಲಕರೇ ಈತನ ಟಾರ್ಗೆಟ್!

Spread the loveಅಪಘಾತದ ಕಥೆ ಕಟ್ಟಿ ಹಣ ಸುಲಿಗೆ; ವಯೋವೃದ್ಧ ಕಾರು ಚಾಲಕರೇ ಈತನ ಟಾರ್ಗೆಟ್! ಬೆಂಗಳೂರು: ವಯೋವೃದ್ಧ ಕಾರು ಚಾಲಕರನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ