Breaking News

ಅಡುಗೆ ಎಣ್ಣೆ ಸುಂಕ ಇಳಿಕೆ:4ರೂಪಾಯಿ ಇಳಿಸಿದ್ದೇ ಕೇಂದ್ರದ ಮಹಾನ್ ಸಾಧನೆ: ಗುಂಡೂರಾವ್ ವ್ಯಂಗ್ಯ

Spread the love

ಬೆಂಗಳೂರು : ಹಬ್ಬಗಳ ಋತುವಿನಲ್ಲಿ ಅಡುಗೆ ಎಣ್ಣೆಗಳ ಬೆಲೆಯನ್ನು ನಿಯಂತ್ರಣದಲ್ಲಿ ಇರಿಸುವುದಕ್ಕಾಗಿ ಕೇಂದ್ರ ಸರಕಾರವು ತಾಳೆ, ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆಗಳ ಆಮದು ಸುಂಕವನ್ನು ಶೇ. 2.11ರಷ್ಟು ಕಡಿಮೆ ಮಾಡಿದ ಬೆನ್ನಿಗೆ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್, ಮೋದಿ ಸರ್ಕಾರ ಹಬ್ಬಕ್ಕೆ ಜನಸಾಮಾನ್ಯರಿಗೆ ಕೊಟ್ಟ ಬಹುದೊಡ್ಡ ಕೊಡುಗೆಯಿದು ಎಂದು ಹೇಳಿದ್ದಾರೆ.

ತಮ್ಮ ಅಧಿಕೃತ ಟ್ವೀಟರ್ ಖಾತೆಯ ಮೂಲಕ ಕೇಂದ್ರ ಸರ್ಕಾರವನ್ನು ವ್ಯಂಗ್ಯ ಧ್ವನಿಯಲ್ಲಿ ಟೀಕೆ ಮಾಡಿದ ಗುಂಡೂರಾವ್, ಕೇಂದ್ರ ಸರ್ಕಾರ ಅಡುಗೆ ಎಣ್ಣೆಗಳ ಆಮದು ಸುಂಕವನ್ನು ಶೇಕಡಾ 2.11 ರಷ್ಟು ಇಳಿಸಿ, ಲೀಟರ್ ಎಣ್ಣೆಗೆ 4 ರೂಪಾಯಿ ಕಡಿಮೆ ಮಾಡಿದೆ. ಜನಸಾಮಾನ್ಯರಿಗೆ ಮೋದಿ ಸರ್ಕಾರ ಹಬ್ಬಕ್ಕೆ ಕೊಟ್ಟ ಬಹುದೊಡ್ಡ ಕೊಡುಗೆಯಿದು. 80 ರೂಪಾಯಿ ಇದ್ದ ಅಡುಗೆ ಎಣ್ಣೆ ದರವನ್ನು 160 ರೂಪಾಯಿಗೆ ಏರಿಸಿದ್ದು ಇದೇ ಕೇಂದ್ರ ಸರ್ಕಾರ. ಈಗ 4 ರೂಪಾಯಿ ಇಳಿಸಿದ್ದೇ ಕೇಂದ್ರದ ಮಹಾನ್ ಸಾಧನೆ ಎಂದು ಟೀಕಿಸಿದ್ದಾರೆ.

ಇನ್ನು, ಕೇಂದ್ರ ಸರ್ಕಾರದ ಸುಂಕ ಇಳಿಕೆಯಿಂದಾಗಿ ಪ್ರತೀ ಲೀಟರ್‌ ಅಡುಗೆ ಎಣ್ಣೆಯ ಬೆಲೆ 4 ರೂ.ಗಳಿಂದ 5 ರೂ.ಗಳ ವರೆಗೆ ಕಡಿಮೆಯಾಗಲಿದೆ.

ಇದರಿಂದ ಕೇಂದ್ರಕ್ಕೆ 1,100 ಕೋಟಿ ರೂ. ಆದಾಯ ನಷ್ಟವಾಗಲಿದೆ ಎಂದು ಕೇಂದ್ರ ಆಹಾರ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ವಿತ್ತ ಸಚಿವಾಲಯದ ಪ್ರಕಟನೆಯ ಪ್ರಕಾರ ಕಚ್ಚಾ ತಾಳೆ ಎಣ್ಣೆಯ ಆಮದು ಸುಂಕವನ್ನು ಶೇ. 10 ರಿಂದ ಶೇ. 2.5ಕ್ಕೆ, ಕಚ್ಚಾ ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆಗಳ ಆಮದು ಸುಂಕವನ್ನು ಶೇ. 7.5 ರಿಂದ ಶೇ. 2.5ಕ್ಕೆ ಇಳಿಕೆ ಮಾಡಲಾಗಿದೆ.

 

https://twitter.com/dineshgrao?ref_src=twsrc%5Etfw%7Ctwcamp%5Etweetembed%7Ctwterm%5E1436927243410817025%7Ctwgr%5E%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fkannada%2Fudayavani-epaper-udayavani%2Fadugeennesunkailike4rupaayiilisiddekendradhamahaansaadhanegunduraavvyangya-newsid-n314758548


Spread the love

About Laxminews 24x7

Check Also

2 ವರ್ಷಗಳಿಂದ ಆರಂಭವಾಗದ ಶುದ್ಧ ನೀರಿನ ಘಟಕಗಳು

Spread the loveಹಾವೇರಿ: ನಗರದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಸಿಗಲಿ ಎಂದು ಶಾಸಕರ ಅನುದಾನದಲ್ಲಿ ಆರು ಶುದ್ಧ ಕುಡಿಯುವ ನೀರಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ