ನವದೆಹಲಿ : ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಕೇಂದ್ರ ಹಣಕಾಸು ಸಚಿವಾಲಯ 6ನೇ ಕಂತಿನಲ್ಲಿ 135.92 ಕೋಟಿ ರೂ. ಅನುದಾನವನ್ನು ರಾಜ್ಯಕ್ಕೆ ನೀಡಿದೆ.
ಕೇಂದ್ರ ಸರ್ಕಾರವು ಕರ್ನಾಟಕ ಸೇರಿದಂತೆ 17 ರಾಜ್ಯಗಳಿಗೆ ಒಟ್ಟು 9,871 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ. ಸಂವಿಧಾನದ 27 ನೇ ವಿಧಿಯ ಅನುಸಾರ 15 ನೇ ಹಣಕಾಸು ಆಯೋಗದ ಶಿಫಾರಸಿನಂತೆ 2021-22 ನೇ ಸಾಲಿನ ಆರನೇ ಕಂತಿನ ಪಿಆರ್ ಡಿಪಿ ಅನುದಾನವನ್ನು ಹಣಕಾಸು ಆಯೋಗದ ವೆಚ್ಚ ವಿಭಾಗ ಬಿಡುಗಡೆ ಮಾಡಿದೆ. ಈ ಮೂಲಕ ಕರ್ನಾಟಕಕ್ಕೆ ಈ ವರ್ಷ 815.50 ಕೋಟಿ ರೂ. ಅನುದಾನ ನೀಡಿದಂತಾಗಿದೆ.