ತುಮಕೂರು: ಅಂಗನವಾಡಿ ಆಹಾರ ಸಾಮಾಗ್ರಿಗಳ ಕಳ್ಳಸಾಗಾಟ ಮಾಡುತ್ತಿದ್ದ ಅಂಗನವಾಡಿ ಸಹಾಯಕಿ ಪತಿ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ.
ತಿಪಟೂರು ತಾಲ್ಲೂಕಿನ ಹುಚ್ಚನಹಳ್ಳಿ ಗ್ರಾಮ ಅಂಗನವಾಡಿ ಸಹಾಯಕಿ ಚೈತ್ರಾ ಪತಿ ಅಶೋಕ್ ಆಹಾರ ಧಾನ್ಯಗಳ ಕಳವು ಮಾಡುತ್ತಿದ್ದ. ಇಂದು ಆಹಾರ ಧಾನ್ಯಗಳನ್ನು ಕಳವು ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ಮಕ್ಕಳಿಗಾಗಿ ನೀಡಿದ್ದ ತೊಗರಿಬೇಳೆ, ಕಡ್ಲೆಬೀಜ, ಕಡ್ಲೆಬೇಳೆ, ಹಾಲಿನ ಪಾಕೇಟ್, ಸಕ್ಕರೆಯನ್ನು ಬೈಕ್ ನಲ್ಲಿ ಸಾಗಿಸುವಾಗ ಗ್ರಾಮಸ್ಥರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ.
Laxmi News 24×7