Breaking News

ಯೂಟ್ಯೂಬ್ ಚಾಟ್ ಶೋನಲ್ಲಿ ಬಿದ್ದು ಬಿದ್ದು ನಕ್ಕ ನಟಿ ಶಿಲ್ಪಾ ಶೆಟ್ಟಿ..!

Spread the love

ಅಶ್ಲೀಲ ಪ್ರಕರಣದಲ್ಲಿ ಉದ್ಯಮಿ ರಾಜ್ ಕುಂದ್ರಾ ಬಂಧಿಸಿದಾಗಿನಿಂದಲೂ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ. ಒಂದು ತಿಂಗಳಿನಿಂದ ತನ್ನ ಕುಟುಂಬದೊಂದಿಗೆ ಸಮಯ ಕಳೆದ ಶಿಲ್ಪಾ, ಡ್ಯಾನ್ಸ್ ಶೋ, ಸೂಪರ್ ಡ್ಯಾನ್ಸರ್ 4ಗೆ ಗೈರುಹಾಜರಾಗಿದ್ದರು. ಸದ್ಯ, ಮತ್ತೆ ಕಾರ್ಯಕ್ರಮದತ್ತ ಮುಖಮಾಡಿರುವ ಶಿಲ್ಪಾ, ಎಲ್ಲರನ್ನೂ ರೋಮಾಂಚನಗೊಳಿಸಿದ್ದಾರೆ.

ಹಾಸ್ಯ ನಟ ನಿಕ್ ಜೊತೆ ಚಾಟ್ ಶೋ ಸೋಷಿಯಲ್ ಮೀಡಿಯಾ ಸ್ಟಾರ್ ವಿತ್ ಜಾನಿಸ್ ಕಾರ್ಯಕ್ರಮದ ಪ್ರೋಮೋದಲ್ಲಿ ಶಿಲ್ಪಾ ಶೆಟ್ಟಿ ತನ್ನ ಬಿದ್ದು ಬಿದ್ದು ನಗುವುದರ ಮುಖಾಂತರ ಹಲವರ ಹೃದಯ ಗೆದ್ದಿದ್ದಾರೆ. ಜಾನಿಸ್ ಸಿಕ್ವೇರಾ ಹಂಚಿಕೊಂಡ ವಿಡಿಯೋದಲ್ಲಿ ‘ಧಡ್ಕನ್’ ನಟಿ ಹಾಸ್ಯದಿಂದ ಬಿದ್ದು ಬಿದ್ದು ನಗುವುದನ್ನು ಕಾಣಬಹುದು. ಅಷ್ಟೇ ಅಲ್ಲ ಇವರಿಬ್ಬರು ಜನಪ್ರಿಯ ‘ಚುರಾ ಕೆ ದಿಲ್ ಮೇರಾ’ ಹಾಡನ್ನು ಕೂಡ ಹಾಡಿದರು.

ಇನ್ನು ಪ್ರೋಮೋವನ್ನು ಹಂಚಿಕೊಂಡಿರುವ ಜಾನಿಸ್, “ಶಿಲ್ಪಾಶೆಟ್ಟಿ ಹಾಗೂ ನಿಕ್ ಏನು ನಗುತ್ತಿದ್ದಾರೆ ಎಂದು ಆಶ್ಚರ್ಯ ಪಡುತ್ತಿದ್ದೀರಾ? ನಾಳೆ ಸೋಷಿಯಲ್ ಮೀಡಿಯಾ ಸ್ಟಾರ್ ವಿತ್ ಜಾನಿಸ್ ನ 5ನೇ ಸಂಚಿಕೆಯಲ್ಲಿ ನನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಮಾತ್ರ ತಿಳಿಯಿರಿ ! ಈ ಸಂಚಿಕೆಯನ್ನು 2021ರ ಜುಲೈನಲ್ಲಿ ಚಿತ್ರೀಕರಿಸಲಾಗಿದೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ” ಎಂದು ಬರೆದಿದ್ದಾರೆ.


Spread the love

About Laxminews 24x7

Check Also

ಶಾಂತಾಯಿ ವೃದ್ಧಾಶ್ರಮದಲ್ಲಿ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಪಿಂಕ್ ವಾರಿಯರ್ಸ್ ತಂಡದಿಂದ ಜಾಗೃತಿಪರ ನಾಟಕ ಪ್ರದರ್ಶನ

Spread the love ಶಾಂತಾಯಿ ವೃದ್ಧಾಶ್ರಮದಲ್ಲಿ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಪಿಂಕ್ ವಾರಿಯರ್ಸ್ ತಂಡದಿಂದ ಜಾಗೃತಿಪರ ನಾಟಕ ಪ್ರದರ್ಶನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ