ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪುತ್ರಿಯ ವಿವಾಹ ಕಾರ್ಯಕ್ರಮ ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ನಡೆಯುತ್ತಿದ್ದು, ಅನೇಕ ಗಣ್ಯರು ಭಾಗಿಯಾಗಿ ನವ ವಧು-ವರರನ್ನು ಹಾರೈಸಿದರು.

ಜೋಶಿ ಪುತ್ರಿ ಅರ್ಪಿತಾ ಮತ್ತು ಹೃಷಿಕೇಶ ಮದುವೆ ಸಭಾರಂಭ ನಡೆಯುತ್ತಿದ್ದು, ಗೋಧೂಳಿ ಮುಹೂರ್ತದಲ್ಲಿ ನವಜೋಡಿ ಹಸೆಮಣೆ ಏರಿದೆ. ಜೋಶಿ ಪುತ್ರಿಯ ಮದುವೆ ಸಮಾರಂಭದಲ್ಲಿ ರಾಜ್ಯಪಾಲ ಥಾವರಚೆಂದ್ ಗೆಹ್ಲೋಟ್ ಹಾಗೂ ಕೇಂದ್ರ ಸಚಿವ ಮೇಘವಾಲ್ ಸೇರಿದಂತೆ ರಾಜ್ಯದ ಬಿಜೆಪಿ ನಾಯಕರು ಭಾಗಿಯಾಗಿ ಶುಭ ಹಾರೈಸಿದ್ದಾರೆ.

ನಾಳೆ ಸಂಜೆ ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು, ಕೇಂದ್ರ ಹಾಗೂ ರಾಜ್ಯ ನಾಯಕರ ದಂಡು ಹುಬ್ಬಳ್ಳಿಗೆ ಆಗಮಿಸಲಿದೆ.
Laxmi News 24×7