ಹುಡುಗಿಯರಿಗೆ ಪಾನಿಪುರಿ ಅಂದ್ರೆ ಪಂಚಪ್ರಾಣ. ಮಹಿಳೆಯೊಬ್ಬಳು ಪಾನಿಪೂರಿ ವಿಚಾರಕ್ಕೆ ಪತಿಯೊಂದಿಗೆ ಜಗಳವಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಪುಣೆಯ ನಿವಾಸಿಯಾಗಿರುವ ಪ್ರತೀಕ್ಷಾ ಸರ್ವಾಡೆ ೨೦೧೯ ರಲ್ಲಿ ಗಹಿನಿನಾಥ್ ಸರ್ವಾಡೆ ಎಂಬವರನ್ನು ಮದುವೆಯಾಗಿದ್ದರು. ಗಹಿನಿನಾಥ್ ಸರ್ವಾಡೆ ಕೆಲಸದಿಂದ ಬರುವಾಗ ಪತ್ನಿಗೆ ತಿಳಿಸದೇ ಪಾನಿಪೂರಿಯನ್ನು ತಂದಿದ್ದರು. ಅಡುಗೆ ಮಾಡಿಟ್ಟಿದ್ದ ಪತ್ನಿ ಪ್ರತೀಕ್ಷಾ ಇದೇ ಕಾರಣಕ್ಕೆ ಕೋಪ ಮಾಡಿಕೊಂಡಿದ್ದಾಳೆ.
ಮರುದಿನ ಪತಿ ಮನೆಯಲ್ಲಿ ಇಲ್ಲದ ವೇಳೆಯಲ್ಲಿ ವಿಷ ಸೇವನೆ ಮಾಡಿ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾಳೆ. ಪ್ರತೀಕ್ಷಾಳನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.
ದಂಪತಿಗಳಿಗೆ ೧೮ ತಿಂಗಳ ಮಗು ಇದೆ. ಇದೀಗ ಪ್ರತೀಕ್ಷಾಆತ್ಮಹತ್ಯೆಗೆ ಪತಿಯೇ ಕಾರಣವೆಂದು ಪೋಷಕರು ಆರೋಪಿಸಿದ್ದಾರೆ. ಅಲ್ಲದೇ ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಘಟನೆಯ ಕುರಿತು ತನಿಖೆಯನ್ನು ನಡೆಸುತ್ತಿದ್ದಾರೆ.
Laxmi News 24×7