Breaking News

ಇಬ್ಬರು ವಿದ್ಯಾರ್ಥಿನಿಯರು ಸೇರಿ ಮೂವರು ಡಿಬಾರ್

Spread the love

ಕಲಬುರಗಿ, ; ಗುಲಬರ್ಗಾ ವಿಶ್ವವಿದ್ಯಾಲಯವು ಜರುಗಿಸುತ್ತಿರುವ ಸ್ನಾತಕ ಪದವಿ ಕೋರ್ಸಿನ ಒಂದು ಮತ್ತು ಮೂರನೇ ಸೆಮೆಸ್ಟರ್‍ನ ಮುಂದೂಡಲಾದ ಪರೀಕ್ಷೆಗಳು ಪ್ರಾರಂಭಗೊಂಡಿದ್ದು, ಈ ಪ್ರಯುಕ್ತ ಕುಲಪತಿಗಳು ಪದವಿ ಪರೀಕ್ಷೆಗಳ ಪರಿವೀಕ್ಷಣೆಗಾಗಿ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಸರಕಾರಿ ಪ್ರಥಮ ದರ್ಜೆ ಕಾಲೇಜು, ಮಹಾಗಾಂವ ಕ್ರಾಸ್ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಮಲಾಪೂರನ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ ಕುಲಪತಿಗಳು ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಒಬ್ಬೊಬ್ಬ ವಿದ್ಯಾರ್ಥಿನಿಯರನ್ನು ಪರೀಕ್ಷೆಯಿಂದ ಡಿಬಾರ್ ಮಾಡಿದ್ದಾರೆ.ಈ ಸಂದರ್ಭದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಮಲಾಪೂರನ ಪ್ರಾಂಶುಪಾಲರು ಹಾಗೂ ಆಂತರಿಕ ಹಿರಿಯ ಮೇಲ್ವಿಚಾರಕರು ಗೈರು ಹಾಜರಾಗಿರುವುದನ್ನು ಗಂಭೀರವಾಗಿ ಪರಿಗಣಿಸಿ ಅವರನ್ನು ತಕ್ಷಣದಿಂದ ಆಂತರಿಕ ಹಿರಿಯ ಮೇಲ್ವಿಚಾರಕರ ಜವಾಬ್ದಾರಿಯಿಂದ ವಜಾಗೊಳಿಸಿ ಅದೇ ಮಹಾವಿದ್ಯಾಲಯದ ಇನ್ನೋರ್ವ ಹಿರಿಯ ಪ್ರಾಧ್ಯಾಪಕರನ್ನು ಆಂತರಿಕ ಹಿರಿಯ ಮೇಲ್ವಿಚಾರಕರಾಗಿ ಮುಂದಿನ ಎಲ್ಲಾ ಪರೀಕ್ಷೆಗಳನ್ನು ನಡೆಸುವಂತೆ ಸೂಚಿಸಿ ನೇಮಕಮಾಡುವಂತೆ ಹಾಗೂ ವಿವರಣೆ ಕೇಳಿ ನೋಟಿಸ್ ನೀಡುವಂತೆ ನಿರ್ದೇಶಿಸಿದ್ದಾರೆ.

ಅದೇ ರೀತಿ ಕಲಬುರಗಿಯ ನ್ಯಾಷನಲ್ ಪದವಿ ಮಹಾವಿದ್ಯಾಲಯದ ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಬಳಸಿ ನಕಲು ಮಾಡುತ್ತಿದ್ದ ಒಬ್ಬ ವಿದ್ಯಾರ್ಥಿಯನ್ನು ಪರೀಕ್ಷೆಯಿಂದ ಡಿಬಾರ್ ಮಾಡಲಾಗಿದೆ.ಈ ಸಂದರ್ಭದಲ್ಲಿ ಬಾಹ್ಯ ಹಿರಿಯ ಮೇಲ್ವಿಚಾರಕರು ಗೈರು ಹಾಜರಿರುವ ಕುರಿತು ನೋಟಿಸ್ ನೀಡಲು ಸೂಚಿಸಲಾಯಿತು.ಶ್ರೀ ಸಾಯಿ ಪ್ರಸಾದ ಪದವಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಗುಂಪಾಗಿ ಪರೀಕ್ಷೆ ಬರೆಯುತ್ತಿರುವುದು ಕಂಡು ಬಂದಿದ್ದು, ಪರೀಕ್ಷಾ ಕೇಂದ್ರಕ್ಕೆ ಬಾಹ್ಯ ಹಿರಿಯ ಮೇಲ್ವಿಚಾರಕರು ಗೈರು ಹಾಜರಿದ್ದ ಬಗ್ಗೆ ನೋಟಿಸ್ ನೀಡಲು ಸೂಚಿಸಲಾಯಿತು.ಅಲ್ಲದೆ ಎಲ್ಲಾ ನಾಲ್ಕೂ ಮಹಾವಿದ್ಯಾಲಯಗಳ ಆಂತರಿಕ ಹಿರಿಯ ಮೇಲ್ವಿಚಾರಕರಿಗೆ ಕಾರಣ ಕೇಳಿ ನೋಟಿಸ್ ನೀಡಲು ಮಾನ್ಯ ಕುಲಪತಿಗಳು ನಿರ್ದೇಶಿಸಿದರು.


Spread the love

About Laxminews 24x7

Check Also

ವಿಶೇಷ ಚೇತನರು ಸುಲಭವಾಗಿ ವಿಮಾನ ಏರಲು “ಮೊಬಿಲಿಟಿ ಅಸಿಸ್ಟ್‌” ಪರಿಚಯಿಸಿದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

Spread the loveಬೆಂಗಳೂರು : ವಿಶೇಷ ಚೇತನರಿಗೆ ಸುಲಭವಾಗಿ ವಿಮಾನ ಏರಲು ಸಹಕಾರಿಯಾಗಲು “ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಭಾರತದಲ್ಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ