Breaking News

ಭೀಕರ ರಸ್ತೆ ಅಪಘಾತ, ಶಾಸಕರ ಮಗ. 3 ಯುವತಿಯರು ಸೇರಿ ಏಳು ಜನ ಸ್ಥಳದಲ್ಲೆ ಸಾವು

Spread the love

ಬೆಂಗಳೂರಿನಲ್ಲಿ ತಡರಾತ್ರಿ ಭೀಕರ ರಸ್ತೆ ಅಪಘಾತವಾಗಿದೆ. ಕೋರಮಂಗಲದ ಮಂಗಳ ಕಲ್ಯಾಣಮಂಟಪದ ರಾತ್ರಿ 1:30ರ ಸುಮಾರಿಗೆ ಘಟನೆ ನಡೆದಿದೆ. ವೇಗವಾಗಿ ಬಂದ ಆಡಿ ಕ್ಯೂ3 ಕಾರ್ ಫುಟ್ ಪಾತ್ ಮೇಲಿದ್ದ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ 7 ಜನ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಈ ಕಾರಿನಲ್ಲಿ ಮೂವರು ಯುವತಿಯರು ನಾಲ್ಕು ಯುವಕರು ಪ್ರಯಾಣ ಮಾಡುತ್ತಿದ್ದರು. ಕಾರಿನ ಮುಂಬದಿ ಸೀಟಿನಲ್ಲಿ ಮೂವರು ಹಿಂದೆ ನಾಲ್ವರು ಕುಳಿತಿದ್ದರು‌. ಎಲ್ಲರೂ 25-30ರ ವಯೋಮಾನದವರಾಗಿದ್ದಾರೆ. ಕರುಣಾಸಾಗರ, ಬಿಂದು , ಇಶಿತಾ, ಡಾ.ಧನುಶಾ. ಅಕ್ಷಯ್ ಗೋಯಲ್, ಉತ್ಸವ್, ರೋಹಿತ್ ಮೃತ ವ್ಯಕ್ತಿಗಳಾಗಿದ್ದಾರೆ.

 

ಅಕ್ಷಯ್ ಗೋಯಲ್ ಕೇರಳಾ ಮೂಲದವನು, ಉತ್ಸವ್ – ಹರ್ಯಾಣ, ರೋಹಿತ್ – ಹುಬ್ಬಳ್ಳಿ. ಕರುಣಾ ಸಾಗರ್- ಹೊಸೂರು ಮೂಲದವರಾಗಿದ್ದಾರೆ.

ಉಳಿದವರು ಕೋರಮಂಗಲದ ಜೋಲೋ ಸ್ಟೇ ಪಿ.ಜಿಯಲ್ಲಿ ವಾಸವಿದ್ದರಂತೆ. ಸಂಜೀವಿನಿ ಬ್ಲೂ ಮೆಟಲ್ ಕಂಪನಿ ಹೆಸರಲ್ಲಿರುವ ಕಾರು ನೊಂದಣಿಯಾಗಿದ್ದು, ಅಪಘಾತ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದೆ. ಕಾರಿನ ಒಳಗೆಲ್ಲ ಬರೀ ರಕ್ತದ ಕಲೆಗಳಿಂದ ತುಂಬಿದ್ದು, ಮುಂಬದಿ ಹಿಂಬದಿ ಸೀಟ್ ನಲ್ಲಿ ಬರೀ ರಕ್ತದಿಂದ ಕೂಡಿದೆ. ಅಪಘಾತ ರಭಸಕ್ಕೆ ಎಡಭಾಗದ ಎರಡು ಟೈರ್ ಪೀಸ್ ಪೀಸ್ ಆಗಿವೆ. ಬ್ಯಾನೆಟ್ ಸಂಪೂರ್ಣ ನಜ್ಜು ಗುಜ್ಜಾಗಿದೆ. ಅಪಘಾತದಲ್ಲಿ ಹೊಸೂರು ಎಂಎಲ್ ಎ ವೈ ಪ್ರಕಾಶ್ ಪುತ್ರ ಕೂಡ ಸಾವನ್ನಪ್ಪಿದ್ದಾರೆ. ಆಡುಗೋಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ.


Spread the love

About Laxminews 24x7

Check Also

ಸಂಧ್ಯಾ ಸುರಕ್ಷಾ ಯೋಜನೆಯಿಂದ ಹಿರಿಯ ನಾಗರಿಕರಿಗೆ ಅನುಕೂಲಗಳು ಏನೇನು?

Spread the love ಬೆಂಗಳೂರು: ವಯಸ್ಸಾದ ವೃದ್ಧರಿಗೆ ಮಕ್ಕಳೇ ಆಸರೆ. ಆದರೂ, ಹಿರಿಯ ಜೀವಗಳಿಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಪ್ರತಿಯೊಂದಕ್ಕೂ ಮಕ್ಕಳನ್ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ