ದಾವಣಗೆರೆ: ವಿಷ ಆಹಾರ ಸೇವಿಸಿ 100ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿರುವ ದುರ್ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಬೆಣ್ಣೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಅದೃಷ್ಟವಷಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಬೆಣ್ಣೆಹಳ್ಳಿ ಗ್ರಾಮದ ಮನೆ ಒಂದರಲ್ಲಿ ಸೀಮಂತ ಕಾರ್ಯ ನಡೆದಿತ್ತು. ಈ ವೇಳೆ ನೂರಾರು ಜನರಿಗೆ ಸಿಹಿಯೂಟ ಹಾಕಲಾಗಿತ್ತು. ಊಟ ಸೇವಿಸಿದ 100ಕ್ಕೂ ಹೆಚ್ಚು ಮಂದಿಯಲ್ಲಿ ವಾಂತಿ-ಭೇದಿ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸದ್ಯ ಅಸ್ವಸ್ಥರೆಲ್ಲರನ್ನೂ ಬೆಣ್ಣೆಹಳ್ಳಿ ಪಿಎಚ್‌ಸಿ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಲವರು ಗುಣಮುಖರಾಗಿ ಈಗಾಗಲೇ ಮನೆಗೆ ಹೋಗಿದ್ದಾರೆ. ಇನ್ನೂ 20ಕ್ಕೂ ಹೆಚ್ಚು ಮಂದಿಯನ್ನ ಜಗಳೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಗಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ.
Laxmi News 24×7