Breaking News
Home / ರಾಜಕೀಯ / ಗುರುವಾರ (ಆಗಸ್ಟ್ 26) ಮಲೆಮಹದೇಶ್ವರ ಬೆಟ್ಟದಿಂದ ಬೃಹತ್ ಪಾದಯಾತ್ರೆ ಆರಂಭವಾಗಲಿದೆ. ಶ್ರೀಗಳ ನೇತೃತ್ವದಲ್ಲಿ ವಿಧಾನಸೌಧದ ವರೆಗೆ ಪಾದಯಾತ್ರೆ ನಡೆಯಲಿದೆ.

ಗುರುವಾರ (ಆಗಸ್ಟ್ 26) ಮಲೆಮಹದೇಶ್ವರ ಬೆಟ್ಟದಿಂದ ಬೃಹತ್ ಪಾದಯಾತ್ರೆ ಆರಂಭವಾಗಲಿದೆ. ಶ್ರೀಗಳ ನೇತೃತ್ವದಲ್ಲಿ ವಿಧಾನಸೌಧದ ವರೆಗೆ ಪಾದಯಾತ್ರೆ ನಡೆಯಲಿದೆ.

Spread the love

ಮೈಸೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರವಾಗಿ ಮತ್ತೆ ಸಮುದಾಯದ ಸ್ವಾಮೀಜಿಗಳ ಕೂಗು ಕೇಳಿಬಂದಿದೆ. ಬಸವ ಜಯಮೃತ್ಯುಂಜಯಶ್ರೀ ನೇತೃತ್ವದಲ್ಲಿ ಮತ್ತೆ ಹೋರಾಟ ನಡೆಯಲಿದೆ. ಗುರುವಾರ (ಆಗಸ್ಟ್ 26) ಮಲೆಮಹದೇಶ್ವರ ಬೆಟ್ಟದಿಂದ ಬೃಹತ್ ಪಾದಯಾತ್ರೆ ಆರಂಭವಾಗಲಿದೆ. ಶ್ರೀಗಳ ನೇತೃತ್ವದಲ್ಲಿ ವಿಧಾನಸೌಧದ ವರೆಗೆ ಪಾದಯಾತ್ರೆ ನಡೆಯಲಿದೆ. ನಾಳೆಯಿಂದ ಅಕ್ಟೋಬರ್ 1 ರವರೆಗೆ ಹೋರಾಟ ನಡೆಯಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಬೇಡಿಕೆ ವಿಚಾರವಾಗಿ ಮೈಸೂರಿನಲ್ಲಿ ಬಸವ ಜಯಮೃತ್ಯುಂಜಯಶ್ರೀ ಆಗಸ್ಟ್ 23 ರಂದು ಸುದ್ದಿಗೋಷ್ಠಿ ನಡೆಸಿದ್ದರು. ಸರ್ಕಾರ ಕೊಟ್ಟ ಗಡುವು ಮುಗಿಯುತ್ತಿದೆ. ಹೀಗಾಗಿ ಸರ್ಕಾರಕ್ಕೆ ಎಚ್ಚರಿಸಲು ಬೃಹತ್ ರಾಜ್ಯ ಅಭಿಯಾನ ನಡೆಸುತ್ತೇವೆ. ಪ್ರತಿಜ್ಞಾ ಪಂಚಾಯತ್ ಘೋಷವಾಕ್ಯದೊಂದಿಗೆ ಅಭಿಯಾನ ನಡೆಸಲಿದ್ದೇವೆ. ಮಲೆಮಹದೇಶ್ವರ ಬೆಟ್ಟದಲ್ಲಿ ಅಭಿಯಾನ ಉದ್ಘಾಟಿಸಿ ಆರಂಭ ಆಗಲಿದೆ ಎಂದು ಬಸವ ಜಯಮೃತ್ಯುಂಜಯ ಶ್ರೀ ತಿಳಿಸಿದ್ದರು.

ಹೋರಾಟದಿಂದ ಹಿಂದೆ ಸರಿಯದಿರುವುದು ಇದರ ಉದ್ದೇಶ. ಯುವಕರನ್ನು ಹೆಚ್ಚಾಗಿ ಇದರಲ್ಲಿ ಅಳವಡಿಸಿಕೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ಈ ಬೇಡಿಕೆಯಿಂದ ಹೊರಗೆ ಬರಬಾರದು. ಆ ರೀತಿ ಈ ಪ್ರತಿಜ್ಞೆಯನ್ನ ತೆಗೆದುಕೊಳ್ಳುತ್ತೇವೆ. ನಮ್ಮಲ್ಲಿ ಸುಮಾರು 80 ಲಕ್ಷ ಹಿಂದುಳಿದ ವರ್ಗದ ಜನರಿದ್ದಾರೆ. ಹೀಗಾಗಿ ನಮಗೆ 2A ಮೀಸಲಾತಿಯನ್ನು ಕೊಡಲೇಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದರು. ನಮಗೆ 3A ಮೀಸಲಾತಿ ಕೊಟ್ಟಿದ್ದಾರೆ. ಬದಲಾಗಿ ನಮಗೆ 2A ಮೀಸಲಾತಿ ಕೊಡಲೇಬೇಕು. ಸರ್ಕಾರ ನಮ್ಮ ಲಿಂಗಾಯತ ಗೌಡ, ದೀಕ್ಷಾ ಲಿಂಗಾಯತ, ಪಂಚಮಸಾಲಿ, ಹೀಗೆ ಅನೇಕ‌ ಸಮಾಜ ಒಗ್ಗೂಡಿ ಎಲ್ಲರಿಗೂ 2A ಮೀಸಲಾತಿ‌ ಕೊಡಬೇಕು ಎಂದು ಸ್ವಾಮೀಜಿ ಕೇಳಿದ್ದರು.

ಈಗಾಗಲೇ ಬೆಂಗಳೂರಲ್ಲಿ ಬೃಹತ್ ಹೋರಾಟ ಮಾಡಿದ್ದೇವೆ. ಅದು ಮತ್ತೊಮ್ಮೆ ನಡೆಯದಂತೆ ಸರ್ಕಾರ‌ ನಡೆದುಕೊಳ್ಳುವ ವಿಶ್ವಾಸ ಇದೆ. ಈ ಹಿಂದೆ ಕಾನೂನು ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ನಮಗೆ ಮೀಸಲಾತಿ ಭರವಸೆ ನೀಡಿದ್ದರು. ಆದರೆ ಇಂದು ಅವರೇ ಸಿಎಂ ಆಗಿದ್ದಾರೆ. ಅವರು ನಮಗೆ 2A ಮೀಸಲಾತಿ ಕೊಡುವ ವಿಶ್ವಾಸ ಇದೆ. ಸುಪ್ರೀಂ ಕೋರ್ಟ್ ಅನ್ವಯ ಮೀಸಲಾತಿ ಶೇಕಡಾ 50 ಮೀರಬಾರದು. ಶೇಕಡಾ 50ರ ಒಳಗೆ ನಮಗೆ ಮೀಸಲಾತಿ ಕಲ್ಪಿಸಿಕೊಡಿ ಎಂದಷ್ಟೇ ನಾವು ಕೇಳುತ್ತಿದ್ದೇವೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದರು.


Spread the love

About Laxminews 24x7

Check Also

ಬುಧವಾರ ಮತ್ತೆ ಎರಡು ಅನಧಿಕೃತ ಆಸ್ಪತ್ರೆ ಸೀಜ್

Spread the loveಚನ್ನಮ್ಮನ ಕಿತ್ತೂರು : ಮಕ್ಕಳ ಮಾರಾಟ ಹಾಗೂ ಭ್ರೂಣ ಹತ್ಯೆ ಪ್ರಕರಣದ ಬೆನ್ನಲೇ ಕಿತ್ತೂರಿನಲ್ಲಿ ಬುಧವಾರ ಮತ್ತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ