Breaking News

ಆಕ್ಷನ್ ಪ್ರಿನ್ಸ್’ಗೆ ಜೋಗಿ `ಪ್ರೇಮ್ ಆಕ್ಷನ್ ಕಟ್’..!

Spread the love

 

ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ನಿರ್ದೇಶಕ ಜೋಗಿ ಪ್ರೇಮ್ ಆಕ್ಷನ್ ಕಟ್ ಹೇಳೋದು ಪಕ್ಕಾ ಆಗಿದೆ.

ಧ್ರುವ ಸರ್ಜಾ ಜೊತೆ ಪ್ರೇಮ್ ಸಿನಿಮಾ ಮಾಡಲಿದ್ದಾರೆ ಎಂದು ಗಾಂಧಿನಗರದ ಗಲ್ಲಿಗಳಲ್ಲಿ ಹರಿದಾಡುತ್ತಿದ್ದ ಗಾಳಿ ಸುದ್ದಿ ಇದೀಗ ಅಧಿಕೃತವಾಗಿದೆ.

ಹೌದು..! ನಿನ್ನೆ ಮೊನ್ನೆಯಷ್ಟೆ ಪ್ಯಾನ್ ಇಂಡಿಯಾ ಸಿನಿಮಾ ಮಾರ್ಟಿನ್ ಘೋಷಣೆ ಮಾಡಿದ ಧ್ರುವ ಇದೀಗ, ಪ್ರೇಮ್ ಜೊತೆ ಸಿನಿಮಾ ಮಾಡುತ್ತಿರುವ ಬಗ್ಗೆ ಇನ್ಸ್ ಸ್ಟಾಗ್ರಾಮ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಸದ್ಯ ಧ್ರುವ ಹಂಚಿಕೊಂಡಿರುವ ವಿಡಿಯೋ ಪ್ರಕಾರ ಸಿನಿಮಾ ಕೆವಿಎನ್ ಪ್ರೋಡಕ್ಷನ್ ಬ್ಯಾನರ್ ನಡಿ ಮೂಡಿ ಬರಲಿದೆ. ಸಿನಿಮಾಗೆ ಇನ್ನೂ ಟೈಟಲ್ ಫಿಕ್ಸ್ ಮಾಡಿಲ್ಲ. ಸದ್ಯದಲ್ಲೇ ಟೈಟಲ್ ಲಾಂಚ್ ಆಗಲಿದೆ.

ಅಂದಹಾಗೆ ಪ್ರೇಮ್ ಆಗಸ್ಟ್ 24ರಂದೇ ಹೊಸ ಸಿನಿಮಾ ಪ್ರಕಟಿಸುವ ಸಾಧ್ಯತೆ ಇದೆ ಎಂದಿದ್ದರು. ಹೀಗಾಗಿ ಪಕ್ಕಾ ಧ್ರುವ ಹಾಗೂ ಪ್ರೇಮ್ ಅವರೇ ಮುಂದಿನ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ ಎಂದು ಅಂದಾಜಿಸಲಾಗಿತ್ತು.

ಇದೀಗ ಅಧಿಕೃತವಾಗಿದೆ. ಪ್ರೇಮ್ ಅವರು ಆಗಸ್ಟ್ 9 ರಂದು ತಮ್ಮ ಹೊಸ ಸಿನಿಮಾದ ಸ್ಕ್ರಿಪ್ಟ್ ಪೂಜೆ ಮುಗಿಸಿದ್ದರು. ಇದು ಪ್ರೇಮ್ ನಿರ್ದೇಶನದಲ್ಲಿ ಮೂಡಿಬರಲಿರುವ 9ನೇ ಚಿತ್ರವಾಗಿದೆ.


Spread the love

About Laxminews 24x7

Check Also

ಸ್ನಾನದ ಕೋಣೆಯಲ್ಲಿ ಕಾಲು ಜಾರಿ ಬಿದ್ದು ಹಿರಿಯ ನಟ ಉಮೇಶ್ ಅಸ್ವಸ್ಥ, ಆಸ್ಪತ್ರೆಗೆ ದಾಖಲು

Spread the loveಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಎಂ.ಎಸ್‌.ಉಮೇಶ್‌ ಅವರು ಮನೆಯ ಸ್ನಾನದ ಕೋಣೆಯಲ್ಲಿ ಕಾಲು ಜಾರಿ ಬಿದ್ದು ಗಾಯಗೊಂಡಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ