Breaking News

ಹೊಸ ಮೈಲಿಗಲ್ಲಿನತ್ತ ವಿರಾಟ್ ಕೊಹ್ಲಿ, ತನ್ನದೇ ದಾಖಲೆ ಅಳಿಸಿ ಹಾಕಲಿರುವ ರಿಷಭ್ ಪಂತ್

Spread the love

ಈ ವರ್ಷ 15 ಸಿಕ್ಸರ್ ಬಾರಿಸಿರುವ ಪಂತ್ ಇನ್ನೆರಡು ಸಿಕ್ಸರ್ ಬಾರಿಸಿದರೆ 2018ರಲ್ಲಿ ತಾನು ನಿರ್ಮಿಸಿದ ತನ್ನದೇ ದಾಖಲೆಯನ್ನು ಮುರಿದು ಹಾಕಲಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಮೂರನೇ ಟೆಸ್ಟ್ ಪಂದ್ಯ ನಾಳೆ ಆಗಸ್ಟ್ 15 ರಿಂದ ಲೀಡ್ಸ್​ನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಮೊದಲ ಟೆಸ್ಟ್ ಡ್ರಾನಲ್ಲಿ ಅಂತ್ಯಕಂಡಿದ್ದರೆ, ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ 151 ರನ್​ಗಳ ಭರ್ಜರಿ ಜಯ ಸಾಧಿಸಿ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಸದ್ಯ ಮೂರನೇ ಟೆಸ್ಟ್ ಉಭಯ ತಂಡಗಳಿಗೆ ಮುಖ್ಯವಾಗಿದೆ. ಇದರ ನಡುವೆ ನಾಯಕ ವಿರಾಟ್ ಕೊಹ್ಲಿ (Virat kohli) ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ರಿಷಭ್ ಪಂತ್ (Rishabh Pant) ನೂತನ ದಾಖಲೆಯ ಹೊಸ್ತಿಲಲ್ಲಿದ್ದಾರೆ.

ವಿರಾಟ್ ಕೊಹ್ಲಿ ಮೂರನೇ ಟೆಸ್ಟ್​ನಲ್ಲಿ 63 ರನ್ ಗಳಿಸಿದರೆ 23,000 ಅಂತರರಾಷ್ಟ್ರೀಯ ರನ್‌ಗಳನ್ನು ಪೂರೈಸಿದ ಸಾಧನೆ ಮಾಡಲಿದ್ದಾರೆ. ಒಟ್ಟು 437 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿರುವ ಕಿಂಗ್ ಕೊಹ್ಲಿ ಈವರೆಗೆ 22,937 ಅಂತರರಾಷ್ಟ್ರೀಯ ರನ್ ಬಾರಿಸಿದ್ದಾರೆ. ಈ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಭಾರತ ಪರ ಅತಿ ಹೆಚ್ಚು ರನ್ ಕಲೆಹಾಕಿದ ಮೂರನೇ ಬ್ಯಾಟ್ಸ್​ಮನ್​ ಕೊಹ್ಲಿ ಆಗಲಿದ್ದಾರೆ. ಸದ್ಯ ಈ ಸಾಲಿನಲ್ಲಿ ಮೊದಲನೆಯವರಾಗಿ ಸಚಿನ್ ತೆಂಡೂಲ್ಕರ್ (34,357) ಮತ್ತು ಎರಡನೇ ಸ್ಥಾನದಲ್ಲಿ ರಾಹುಲ್ ದ್ರಾವಿಡ್ (24,208) ಇದ್ದಾರೆ.

ಇನ್ನೂ ಸ್ಫೋಟಕ ಬ್ಯಾಟ್ಸ್​ಮನ್​ ರಿಷಭ್ ಪಂತ್ 2018ರಲ್ಲಿ 16 ಟೆಸ್ಟ್ ಸಿಕ್ಸರ್ ಬಾರಿಸುವ ಮೂಲಕ ನೂತನ ದಾಖಲೆಯನ್ನು ನಿರ್ಮಿಸಿದ್ದರು. ವರ್ಷವೊಂದರಲ್ಲಿ ಅತಿ ಹೆಚ್ಚು ಟೆಸ್ಟ್ ಸಿಕ್ಸರ್ ಬಾರಿಸಿದ ಭಾರತದ ವಿಕೆಟ್ ಕೀಪರ್ ಎಂಬ ಹೊಸ ಮೈಲಿಗಲ್ಲನ್ನು ರಿಷಭ್ ಪಂತ್ ನಿರ್ಮಿಸಿದ್ದರು. ಸದ್ಯ ಈ ವರ್ಷ 15 ಸಿಕ್ಸರ್ ಬಾರಿಸಿರುವ ಪಂತ್ ಇನ್ನೆರಡು ಸಿಕ್ಸರ್ ಬಾರಿಸಿದರೆ 2018ರಲ್ಲಿ ತಾನು ನಿರ್ಮಿಸಿದ ತನ್ನದೇ ದಾಖಲೆಯನ್ನು ಮುರಿದು ಹಾಕಲಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲೂ ಕೊಹ್ಲಿ ಹಾಗೂ ಪಂತ್ ಹೇಳಿಕೊಳ್ಳುವಂತಹ ಆಟ ಪ್ರದರ್ಶಿಸಿಲ್ಲ. ಇಬ್ಬರೂ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದಾರೆ.

ನಾಳೆಯಿಂದ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯ ಲೀಡ್ಸ್​ನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತದ ಕಾಲಮಾನದ ಪ್ರಕಾರ ಪಂದ್ಯ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ. ಹೆಡಿಂಗ್ಲೆ ಪಿಚ್ ಪಂದ್ಯದುದ್ದಕ್ಕೂ ವೇಗದ ಬೌಲರ್‌ಗಳಿಗೆ ಹೆಚ್ಚಿನ ಸಹಕಾರಿಯಾಗುವ ಸಾಧ್ಯತೆಯಿದೆ. ಇದರ ಜೊತೆಗೆ ಬ್ಯಾಟ್ಸ್‌ಮನ್‌ಗಳಿಗೂ ಪೂರಕವಾಗಿ ವರ್ತಿಸಲಿದೆ. ನಾಲ್ಕು ಮತ್ತು ಐದನೇ ದಿನದಲ್ಲಿ ಸ್ಪಿನ್ನರ್‌ಗಳು ಕೂಡ ಪಿಚ್‌ನ ಲಾಭವನ್ನು ಪಡೆಯುವ ಅವಕಾಶಗಳಿದೆ.

ಇನ್ನೂ ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ತುಂಬಾ ಕಡಿಮೆಯಿದೆ. ಐದು ದಿನಗಳ ಕಾಲವೂ ಪಂದ್ಯ ನಡೆಯಲು ಪೂರಕವಾದ ವಾತಾವರಣವಿರುವುದು ಕ್ರಿಕೆಟ್ ಪ್ರೇಮಿಗಳಿಗೆ ಸಂತಸದ ಸುದ್ದಿ. ಸರಾಸರಿ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ವರದಿಗಳು ಹೇಳುತ್ತಿದೆ. ಪಂದ್ಯ ನಡೆಯುವ ಐದು ದಿನಗಳಲ್ಲಿಯೂ ಮಳೆಯಾಗುವ ಸಾಧ್ಯತೆ ತುಂಬಾ ವಿರಳವಾಗಿದೆ.


Spread the love

About Laxminews 24x7

Check Also

ಚೇರಿಯಲ್ಲಿ ರಾಜ್ಯದ ಎಐಸಿಸಿ ಉಸ್ತುವಾರಿ ರಂದೀಪ್ ಸುರ್ಜೇವಾಲಾ (Randeep Surjewala) ಅವರನ್ನು ಭೇಟಿಯಾದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅಥಣಿ ಶಾಸಕ ಲಕ್ಷ್ಮಣ ಸವದಿ, ಪ್ರಮುಖವಾಗಿ ಪಕ್ಷದ ಸಂಘಟನೆ ವಿಷಯದಲ್ಲಿ ಚರ್ಚೆ

Spread the loveಬೆಂಗಳೂರು, ಜುಲೈ 7: ಕೆಪಿಸಿಸಿ ಕಚೇರಿಯಲ್ಲಿ ರಾಜ್ಯದ ಎಐಸಿಸಿ ಉಸ್ತುವಾರಿ ರಂದೀಪ್ ಸುರ್ಜೇವಾಲಾ (Randeep Surjewala) ಅವರನ್ನು ಭೇಟಿಯಾದ ನಂತರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ