Breaking News

ಬೆಳಗಾವಿ :ಇಸ್ಪೀಟ್ ಅಡ್ಡೆಗಳ ಮೇಲೆ ಪೊಲೀಸರು ದಾಳಿ 28 ಜನರ ಬಂಧನ ನಗದು ಜಪ್ತಿ: ಡಿಸಿಪಿ ವಿಕ್ರಂ ಅಮಟೆ

Spread the love

ಬೆಳಗಾವಿ–  ಮೂರು ಕಡೆಗಳಲ್ಲಿ ಇಸ್ಪೀಟ್ ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದು, 28 ಜನರನ್ನು ಬಂಧಿಸಿದ್ದಾರೆ.
ಈ ಕುರಿತು ಡಿಸಿಪಿ ವಿಕ್ರಂ ಅಮಟೆ ಮಾಹಿತಿ ನೀಡಿದ್ದಾ್ರೆ.
ದಿ. 21/08/2021 ರಂದು ರಾತ್ರಿ  ಅಂಬೇಡ್ಕರ ನಗರದ ಸಾವ೯ಜನಿಕ ಸ್ಥಳದಲ್ಲಿ ಕುಳಿತುಕೊಂಡು  ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಣಕ್ಕೆ ಕಟ್ಟಿ ಅಂದರ ಬಾಹರ್ ಅನ್ನುವ ಜುಗಾರ ಆಟ ಆಡುತ್ತಿರುವವರ ದಾಳಿ ಮಾಡಿದ್ದು, ದಾಳಿ ಕಾಲಕ್ಕೆ 10 ಜನ ಆರೋಪಿತರನ್ನು ವಶಕ್ಕೆ ಪಡೆಯಲಾಗಿದೆ.
 ಅವರಿಂದ  ನಗದು ಹಣ ರೂ. 9050/ ಜಪ್ತಿ ಮಾಡಲಾಗಿದ್ದು  ಈ ಕುರಿತು  ಎ ಪಿ ಎಮ್ ಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 ಕೆದನೂರ ಗ್ರಾಮದಲ್ಲಿ ಪ್ರಭು ದೇವರ ದೇವಸ್ಥಾನದ ಹೊರವಲಯದ ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಣಕ್ಕೆ ಕಟ್ಟಿ ಅಂದರ ಬಾಹರ ಅನ್ನುವ ಜುಗಾರ ಆಟ ಆಡುವಾಗ ಖಚಿತ ಮಾಹಿತಿ ಬಂದ ಮೇರೆಗೆ ದಾಳಿ ಮಾಡಿದ್ದು 8 ಜನ ಆರೋಪಿತರ ಮೇಲೆ ಕಾಕತಿ ಪೋಲಿಸ್ ಠಾಣೆಯಲ್ಲಿ ಪ್ರಕಾರಣ ದಾಖಲಾಗಿದೆ.  4820 ರೂ,  ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ.
 ಮಣ್ಣೂರ ಗ್ರಾಮದ ಹೊರವಲಯದ ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಣಕ್ಕೆ ಕಟ್ಟಿ ಅಂದರ ಬಾಹರ್ ಅನ್ನುವ  ಜುಗಾರ ಆಟ ಆಡುವಾಗ ಖಚಿತ ಮಾಹಿತಿ ಬಂದ ಮೇರೆಗೆ ದಾಳಿ ಮಾಡಿದ್ದು 10 ಜನ ಆರೋಪಿತರ ಮೇಲೆ ಕಾಕತಿ ಪೋಲಿಸ್ ಠಾಣೆಯಲ್ಲಿ ಪ್ರಕಾರಣ ದಾಖಲಾಗಿದೆ. 7170 ರೂ ವಶಕ್ಕೆ ಪಡೆಯಲಾಗಿದೆ

Spread the love

About Laxminews 24x7

Check Also

ಚೈನ್ನೈನ 16ನೇ ಐ.ಎ.ಪಿ.ಎಚ್.ಡಿ ಸ್ನಾತಕೋತ್ತರ ಸಮಾವೇಶದಲ್ಲಿ ಬೆಳಗಾವಿಯ ಕೆಎಲ್‌ಇ ವಿಕೆ ದಂತ ವಿಜ್ಞಾನ ವಿಭಾಗದ ಉತ್ತಮ ಪ್ರದರ್ಶನ

Spread the love ಚೈನ್ನೈನ 16ನೇ ಐ.ಎ.ಪಿ.ಎಚ್.ಡಿ ಸ್ನಾತಕೋತ್ತರ ಸಮಾವೇಶದಲ್ಲಿ ಬೆಳಗಾವಿಯ ಕೆಎಲ್‌ಇ ವಿಕೆ ದಂತ ವಿಜ್ಞಾನ ವಿಭಾಗದ ಉತ್ತಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ