Breaking News

ಲಸಿಕೆ ವಾಪಸ್ ಖರೀದಿಸಿ – ಖಾಸಗಿ ಆಸ್ಪತ್ರೆಗಳಿಂದ ಮನವಿ

Spread the love

ಬೆಂಗಳೂರು: ಎರಡನೇ ಅಲೆಯ ಸಂದರ್ಭದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಸರ್ಕಾರಿ ಸೇರಿದಂತೆ ಖಾಸಗಿ ಆಸ್ಪತ್ರೆಗಳ ಮುಂದೆ ಉದ್ದುದ್ದ ಸಾಲುಗಳು ಸಾಮಾನ್ಯವಾಗಿತ್ತು. ಬಳಿಕ ಸರ್ಕಾರ ಎಲ್ಲರಿಗೂ ಲಸಿಕೆ ಉಚಿತ ಎಂದು ಘೋಷಿಸಿಕೊಂಡಿತೋ ಆಗ ಖಾಸಗಿ ಆಸ್ಪತ್ರೆಗಳ ಮುಂದೆ ಇದ್ದ ಕ್ಯೂ ಇದ್ದಕ್ಕಿದ್ದ ಹಾಗೆ ಮಾಯವಾಗಲು ಶುರುವಾಯ್ತು. ಎಲ್ಲರೂ ಸರ್ಕಾರಿ ಆಸ್ಪತ್ರೆಗಳಲ್ಲೇ ಉಚಿತ ಲಸಿಕೆ ಹಾಕಿಸಿಕೊಳ್ಳಲು ಮುಂದಾದರು. ಪರಿಣಾಮ ಸದ್ಯ, ಕೂಡಿಟ್ಟ ಲಸಿಕೆ ಖರ್ಚಾಗದ ಕಾರಣ ವಾಪಸ್ ಖರೀದಿಸಿ ಎಂದು ಖಾಸಗಿ ಆಸ್ಪತ್ರೆ ಮನವಿ ಮಾಡುತ್ತಿದೆ.

ಕೇಂದ್ರ ಸರ್ಕಾರ ಉಚಿತ ಲಸಿಕೆ ಕೊಡುತ್ತಿರುವ ಹಿನ್ನೆಲೆ ಖಾಸಗಿ ಆಸ್ಪತ್ರೆ ಕಡೆ ಮುಖಮಾಡದ ಜನ ತಜ್ಞರ ಅಭಿಪ್ರಾಯದ ಪ್ರಕಾರ ಇಷ್ಟೊತ್ತಿಗಾಗಲೇ ಕೊರೊನಾ ಮೂರನೇ ಅಲೆ ಅಪ್ಪಳಿಸಬೇಕಿತ್ತು. ಆದರೆ ಅದೃಷ್ಟವಶಾತ್ ಪರಿಸ್ಥಿತಿ ಹತೋಟಿಯಲ್ಲಿದೆ. ಇದರ ನಡುವೆ ಕೊರೊನಾದಿಂದ ಪರಾಗಲಿರುವ ದೊಡ್ಡ ಅಸ್ತ್ರ ಎಂದರೆ ಅದು ಲಸಿಕೆ ಮಾತ್ರ. ಹೀಗಾಗಿ ಲಸಿಕೆಗೂ ಬೇಡಿಕೆ ಹೆಚ್ಚಾಗಿದೆ. ಆದರೆ ಖಾಸಗಿ ಆಸ್ಪತ್ರೆಗಳು ಲಸಿಕೆ ಶೇಖರಣೆ ಮಾಡಿಟ್ಟುಕೊಂಡು ಜನರು ಬಾರದೆ ಗೋಳಾಡುತ್ತಿವೆ. ಮೊದಲು ಲಸಿಕೆ ಉಚಿತವಾಗಿ ಇರಲಿಲ್ಲ. ಆದರೆ ಸುಪ್ರೀಂ ಕೋರ್ಟ್ ಖಡಕ್ ಪ್ರಶ್ನೆ ಕೇಳಿದ ಪರಿಣಾಮ ಕೇಂದ್ರ ಸರ್ಕಾರ ಎಲ್ಲರಿಗೂ ಉಚಿತ ಲಸಿಕೆ ಘೋಷಿಸಿಕೊಂಡಿತು. ಹೀಗಾಗಿ ಶೇ.75 ಸರ್ಕಾರಿ ಆಸ್ಪತ್ರೆಗಳಿಗೆ ಶೇ.25 ರಷ್ಟು ಲಸಿಕೆ ಖಾಸಗಿ ಆಸ್ಪತ್ರೆಗೆ ಲಸಿಕೆಯನ್ನು ಕೇಂದ್ರ ಸರಬರಾಜು ಮಾಡುತ್ತಿದೆ. ಶೇ.25 ರಷ್ಟು ಲಸಿಕೆ ಮಾತ್ರ ಖಾಸಗಿ ಕ್ಚೇತ್ರಕ್ಕೆ ಸಿಗುತ್ತಿದ್ದರೂ ಅದನ್ನು ಖರ್ಚು ಮಾಡಲಾಗದೆ ಖಾಸಗಿ ಆಸ್ಪತ್ರೆಗಳು ಚಿಂತೆಗೆ ಬಿದ್ದಿದೆ. ಇದಕ್ಕೆ ಕಾರಣ ಸರ್ಕಾರ ಲಸಿಕೆ ಉಚಿತವಾಗಿ ಕೊಡುತ್ತಿರುವ ಹಿನ್ನೆಲೆ ಜನರು ಸರ್ಕಾರಿ ಆಸ್ಪತ್ರೆಯಲ್ಲೇ ಉಚಿತವಾಗಿ ಲಸಿಕೆ ಪಡೆದುಕೊಳ್ಳಲು ಮನಸ್ಸು ಮಾಡುತ್ತಿದ್ದಾರೆ.

 

ಹಿಂದೆ ಸರಿಯುತ್ತಿರುವ ಖಾಸಗಿ ಆಸ್ಪತ್ರೆಗಳು:
ಈಗ ಶೇ.25 ಲಸಿಕೆ ಮಾತ್ರ ಇದ್ದರು ಜನರು ಬಾರದೆ ಖಾಸಗಿ ಆಸ್ಪತ್ರೆಗಳಿಗೆ ತಳಮಳ ಶುರುವಾಗಿದೆ. ಮೂರನೇ ಅಲೆ ಮನಗಂಡು ಸರ್ಕಾರಕ್ಕೆ 15 ಲಕ್ಷ ಡೋಸ್‍ಗೆ ಖಾಸಗಿ ಆಸ್ಪತ್ರೆಗಳು ಬೇಡಿಕೆ ಇಟ್ಟಿತ್ತು. ಆದರೆ ಜನರು ಉಚಿತವಾಗಿ ಲಸಿಕೆ ಪಡೆಯಲು ಮುಂದಾಗಿರುವ ಹಿನ್ನೆಲೆ ಅರ್ಧಕ್ಕರ್ಧ ಲಸಿಕೆ ಅಂದರೆ 7.50 ಲಕ್ಷ ಡೋಸ್ ಮಾತ್ರ ಸಾಕು ಎಂದು ಸರ್ಕಾರಕ್ಕೆ ಖಾಸಗಿ ಆಸ್ಪತ್ರೆಗಳ ಒಕ್ಕೂಟ ಹೇಳಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಶೀಲ್ಡ್‍ಗೆ 630 ರೂ ಹಾಗೂ ಸೇವಾ ಶುಲ್ಕ 150 ಸೇರಿಸಿ ಪ್ರತಿ ಡೋಸ್ ಗೆ 780 ರೂ. ಪಡೆದುಕೊಳ್ಳುತ್ತಿದೆ. ಇದೇ ರೀತಿ ಕೋವ್ಯಾಕ್ಸಿನ್‍ಗೆ 1260 ರೂ. ಹಾಗೂ ಸೇವಾ ಶುಲ್ಕ 150 ಸೇರಿಸಿ 1,410 ರೂ. ಅನ್ನು ಜನರಿಂದ ಪಡೆದುಕೊಳ್ಳುತ್ತಿದೆ. ಕೇಂದ್ರ ಸರ್ಕಾರ ಕೋವಿಶೀಲ್ಡ್‍ಗೆ 630 ರೂ ಮತ್ತು ಕೋವ್ಯಾಕ್ಸಿನ್‍ಗೆ 1260 ರೂ.ಗೆ ಖಾಸಗಿ ಕ್ಷೇತ್ರಕ್ಕೆ ಮಾರಾಟ ಮಾಡುತ್ತಿದೆ. ಆದರೆ ಈಗ ಸರ್ಕಾರದಿಂದ ಕೊಂಡುಕೊಂಡಿರುವ ಲಸಿಕೆ ಖರ್ಚಾಗದೆ ಖಾಸಗಿ ಆಸ್ಪತ್ರೆಗಳು ಕಂಗಾಲಾಗಿ ಕೂತಿದೆ.

 


Spread the love

About Laxminews 24x7

Check Also

ಕುರುಬಗಟ್ಟಿ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಲಾದ ‘ಹಾಲು ಉತ್ಪಾದಕರ ಸಹಕಾರಿ ಸಂಘ’ದ ಉದ್ಘಾಟನಾ

Spread the love ಕುರುಬಗಟ್ಟಿ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಲಾದ ‘ಹಾಲು ಉತ್ಪಾದಕರ ಸಹಕಾರಿ ಸಂಘ’ದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು, ಉದ್ಘಾಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ