Breaking News

ರಾಜ್ಯದ ಆರು ಪೊಲೀಸರಿಗೆ ರಾಷ್ಟ್ರೀಯ ‘ಶ್ರೇಷ್ಠ ತನಿಖಾ ಪದಕ’

Spread the love

ಬೆಂಗಳೂರು : ರಾಷ್ಟ್ರದಲ್ಲಿ ಅಪರಾಧ ಪ್ರಕರಣಗಳ ತನಿಖೆ ವೇಳೆ ಉತ್ತಮ ಸೇವೆ ಸಲ್ಲಿಸುವ ತನಿಖಾಧಿಕಾರಿಗಳಿಗೆ ಕೇಂದ್ರ ಗೃಹ ಸಚಿವಾಲಯ ನೀಡುವ ಶ್ರೇಷ್ಠ ತನಿಖಾ ಪದಕಕ್ಕೆ ರಾಜ್ಯದ 6 ಪೊಲೀಸ್ ಅಧಿಕಾರಿಗಳು ಭಾಜನರಾಗಿದ್ದಾರೆ.

ಸಿಸಿಬಿ ಎಸಿಪಿ ಎಚ್.ಎನ್.ಧರ್ಮೇಂದ್ರ, ಮಂಗಳೂರು ಉಪವಿಭಾಗದ ಡಿವೈಎಸ್ಪಿ ಪರಮೇಶ್ವರ ಹೆಗಡೆ, ಬಿಡಿಎ ಡಿವೈಎಸ್ಪಿ ಸಿ.ಬಾಲಕೃಷ್ಣ, ಕೆಐಎ ಎಸ್‌ಐಟಿ ಮನೋಜ್ ಎನ್.ಹೂವಳೆ, ದಾವಣಗೆರೆ ಜಿಲ್ಲೆ ಹೊನ್ನಾಳಿ ಇನ್‌ಸ್ಪೆಕ್ಟರ್ ಟಿ.ವಿ.ದೇವರಾಜ್ ಹಾಗೂ ಹಳೇ ಹುಬ್ಬಳ್ಳಿ ಠಾಣೆ ಇನ್‌ಸ್ಪೆಕ್ಟರ್ ಶಿವಪ್ಪ ಶೆಟ್ಟಿಪ್ಪ ಕಮಟಗಿ ಅವರಿಗೆ ಪದಕ ಲಭಿಸಿದೆ.

ದೇಶಾದ್ಯಂತ ಪೊಲೀಸ್ ಇಲಾಖೆ, ಎನ್‌ಐಎ ಮತ್ತು ಸಿಬಿಐ ಸೇರಿದಂತೆ 153 ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಶ್ರೇಷ್ಠ ತನಿಖಾ ಪದಕವನ್ನು ಪ್ರದಾನಿಸಲಾಗಿದೆ.


Spread the love

About Laxminews 24x7

Check Also

ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಕೊಟ್ಟಿರೋ ಸಿಎ ಸೈಟ್ ವಾಪಸ್ ಪಡೆಯಬೇಕು: ಬಿಜೆಪಿ ಆಗ್ರಹ

Spread the love ಬೆಂಗಳೂರು: ಕಾಂಗ್ರೆಸ್ ಭವನಕ್ಕೆ ಕಡಿಮೆ ದರದಲ್ಲಿ ಸಿಎ ನಿವೇಶನಗಳನ್ನು (CA Site) ಕೊಟ್ಟಿರೋ ವಿಚಾರ ವಿಧಾನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ