ಪಣಜಿ : ಕೋವಿಡ್ ಎರಡನೇಯ ಅಲೆಯಿಂದಾಗಿ ಸಂಪೂರ್ಣ ಲಾಕ್ ಆಗಿದ್ದ ಪ್ರಸಿದ್ಧ ಪ್ರವಾಸಿ ತಾಣ ಗೋವಾ ಇದೀಗ ಹಂತ ಹಂತವಾಗಿ ಅನ್ ಲಾಕ್ ಆಗುತ್ತಿದೆ. ಪ್ರವಾಸಿರ ಅಚ್ಚುಮೆಚ್ಚಿನ ತಾಣ ಗೋವಾ ಇದೀಗ ಪ್ರವಾಸಿಗರಿಗೆ ಅನ್‍ಲ ಲಾಕ್ ಗೊಳಿಸಲಾಗಿದೆ. ಕೆಲವು ಷರತ್ತುಗಳ ಮೂಲಕ ಪ್ರವಾಸಿಗರು(ಕೇರಳ ಮತ್ತು ಮಹಾರಾಷ್ಟ್ರ ಪ್ರವಾಸಿಗರು ಹೊರತುಪಡಿಸಿ) ಗೋವಾಕ್ಕೆ ಆಗಮಿಸಲು ಸರ್ಕಾರ ಅನುಮತಿ ನೀಡಿದೆ.
ಗೋವಾದಲ್ಲಿನ ಹಲವು ಪ್ರವಾಸಿ ತಾಣಗಳು, ಬೀಚ್ ಗಳಲ್ಲಿ ಪ್ರವಾಸಿಗರ ಆಗಮನಕ್ಕೆ ಅವಕಾಶ ಕಲ್ಪಿಸಲಾಗಿದೆ. 14 ದಿನಗಳ ಮುನ್ನ ಎರಡೂ ಡೋಸ್ ಲಸಿಕೆ ಪಡೆದಿರುವ ಮತ್ತು ಕೋವಿಡ್ ತಪಾಸಣೆಯ ನೆಗೆಟಿವ್ ವರದಿ ಹೊಂದಿರುವ ಪ್ರವಾಸಿಗರಿಗೆ ಗೋವಾ ಪ್ರವೇಶಾವಕಾಶ ಒದಗಿಸುತ್ತಿದೆ.
ಈ ಕುರಿತು ಟ್ರಾವೆಲ್ ಆಯಂಡ್ ಟೂರಿಸಂ ಆಫ್ ಗೋವಾ ಅಧ್ಯಕ್ಷ ನೀಲೇಶ್ ಶಹಾ ಪ್ರತಿಕ್ರಿಯೆ ನೀಡಿ, ಗೋವಾ ರಾಜ್ಯವು ಪ್ರವಾಸಿಗರನ್ನು ಸ್ವಾಗತಿಸುತ್ತಿದೆ. ಪ್ರವಾಸೋದ್ಯಮ ಉದ್ಯೋಗಕ್ಕಾಗಿ ಸರ್ಕಾರ ಹೊಸ ಮಾರ್ಗಸೂಚಿಯನ್ನೂ ಪ್ರಕಟಿಸಿದೆ. ಇನ್ನು 90 ದಿನಗಳಲ್ಲಿ ಗೋವಾದಲ್ಲಿ ಎಲ್ಲರಿಗೂ ಕೋವಿಡ್ ಎರಡೂ ಲಸಿಕೆ ಪೂರ್ಣಗೊಳ್ಳಲಿದೆ ಎಂದಿದ್ದಾರೆ.
Laxmi News 24×7