ಬಳ್ಳಾರಿ: ಹೃದಯಾಘಾತದಿಂದ ರಸ್ತೆ ಪಕ್ಕದಲ್ಲಿ ಬಿದ್ದು ಹೊರಳಾಡುತ್ತಿದ್ದ ವ್ಯಕ್ತಿಯನ್ನು ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ಸೇರಿಸುವ ಮೂಲಕ ಬಳ್ಳಾರಿ ಜಿಲ್ಲೆಯ ಕಂಪ್ಲಿ ಕ್ಷೇತ್ರದ ಶಾಸಕ ಸಮಯ ಪ್ರಜ್ಞೆ ಮೆರೆದಿದ್ದಾರೆ.ಕೆಲಸದ ನಿಮಿತ್ತವಾಗಿ ಕಂಪ್ಲಿಯಿಂದ ಕರುಗೋಡ ಕಡೆಗೆ ಪ್ರಯಾಣ ಮಾಡುತ್ತಿದ್ದಾಗ, ಕುರುಗೋಡಿನ ಅಗ್ನಿಶಾಮಕ ದಳ ಕಛೇರಿ ಬಳಿ ಪಕ್ಕಿರಪ್ಪ ಎಂಬ ವ್ಯಕ್ತಿ, ಹೃದಯಾಘಾತವಾಗಿ ರಸ್ತೆ ಪಕ್ಕದಲ್ಲಿ ಬಿದ್ದಿದ್ದರು. ಅದನ್ನು ಗಮನಿಸಿದ ಶಾಸಕ ಗಣೇಶ್ ಕೂಡಲೇ ಅಂಬುಲೆನ್ಸ್ ಕರೆಸಿ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸದ್ಯ ಪಕ್ಕಿರಪ್ಪ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಕ್ಕಿರಪ್ಪ ಕುರಗೋಡ ನಿವಾಸಿಯಾ. ಸ್ಥಳೀಯ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿರುವ ಇವರು, ಸಂಜೆ ವಾಕಿಂಗ್ ಎಂದು ಬಂದಾಗ ಹೃದಯಾಘಾತವಾಗಿದೆ.