ಶಿವಮೊಗ್ಗ: ಟೋಕಿಯೋ ಒಲಿಂಪಿಕ್‌ನ ಜಾವಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಅವರು ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಹಿನ್ನೆಲೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳು ಭಾನುವಾರ ಶಿವಪ್ಪ ನಾಯಕ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಶೂಟರ್ ಅಭಿನವ್ ಬಿಂದ್ರಾ ನಂತರ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಹಿರಿಮೆಗೆ ನೀರಜ್ ಚೋಪ್ರಾ ಭಾಜನರಾಗಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. 140 ಕೋಟಿ ಭಾರತೀಯರ ಹಿರಿಮೆ ಎತ್ತಿಹಿಡಿದ ಸಾಧನೆ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್, ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಚ್.ಪಿ.ಗಿರೀಶ್, ಮುಖಂಡರಾದ ಬಿ.ಲೋಕೇಶ್, ಎಸ್.ಕುಮರೇಶ್, ಟಿ.ವಿ.ರಂಜಿತ್, ಮಧುಸೂದನ್, ಕಾರ್ಯಕರ್ತರಾದ ಎಂ.ರಾಹುಲ್, ಪುಷ್ಪಕ್‌ಕುಮಾರ್, ಅರುಣ್ ನವುಲೆ, ಕೆ.ಎಲ್.ಪವನ್, ರಾಕೇಶ್, ವೆಂಕಟೇಶ್ ಕಲ್ಲೂರು, ವಿನಯ್, ರಾಹುಲ್ ಸೀಗೆಹಟ್ಟಿ, ಚಿನ್ಮಯ್, ಇರ್ಫಾನ್, ಸುಹಾಸ್‌ಗೌಡ ಇದ್ದರು.