Breaking News

ಬೇಕಾದ್ರೆ ಅರೆಸ್ಟ್ ಮಾಡಿ.. ಅಂಗಡಿ ಬಂದ್ ಮಾಡೋದಿಲ್ಲ : ರಾಜ್ಯ ಸರ್ಕಾರದ ‘ರೂಲ್ಸ್’ಗೆ ವ್ಯಾಪಾರಿಗಳ ಸೆಡ್ಡು.!

Spread the love

ಮೈಸೂರು : ಜಿಲ್ಲೆಯಲ್ಲಿ ಅವೈಜ್ಞಾನಿಕವಾಗಿ ಕೊರೋನಾ ವೀಕ್ ಎಂಡ್ ರೂಲ್ಸ್ ಅನ್ನು ಜಾರಿಗೊಳಿಸಲಾಗಿದೆ. ಮೈಸೂರು ಪ್ರವಾಸಿಗರ ನಗರ, ಗಡಿ ಭಾಗದಿಂದ ನಗರ ದೂರವೇ ಇದೆ. ಹೀಗಿದ್ದೂ ಕೊರೋನಾ ವೀಕೆಂಡ್ ರೂಲ್ಸ್ ಅನ್ನು ಸರ್ಕಾರ ಜಾರಿಗೊಳಿಸಿದೆ. ಇದಕ್ಕೆ ನಮ್ಮ ವಿರೋಧವಿದೆ. ಬೇಕಾದ್ರೆ.. ನೀವು ನಮ್ಮನ್ನು ಅರೆಸ್ಟ್ ಮಾಡಿ.. ಅಂಗಡಿ ಬಂದ್ ಮಾಡೋದಿಲ್ಲ ಎಂಬುದಾಗಿ ಮೈಸೂರಿನಲ್ಲಿ ರಾಜ್ಯ ಸರ್ಕಾರದ ವಿರುದ್ಧವೇ ವ್ಯಾಪಾರಿಗಳು ಸೆಡ್ಡು ಹೊಡೆದಿದ್ದಾರೆ.

 

 

ಇಂದು ಮೈಸೂರಿನ ಸಂಘ ಸಂಸ್ಥೆಗಳ ಒಕ್ಕೂಟದಿಂದ ನಗರದಲ್ಲಿ ಸಭೆ ನಡೆಸಲಾಗಿದೆ. ಮೈಸೂರು ಪ್ರವಾಸಿಗರ ನಗರವಾಗಿದೆ. ವೀಕೆಂಡ್ ನಲ್ಲಿಯೇ ಹೆಚ್ಚು ವ್ಯಾಪಾರ ಆಗುತ್ತಿದೆ. ಮೈಸೂರು ಕೇರಳ ಗಡಿಭಾಗದಿಂದ ದೂರವೇ ಇದೆ. ಕೇರಳದ ಗಡಿಭಾವೆಂದ್ರೇ.. ಅದು ಚಾಮರಾಜನಗರ ಜಿಲ್ಲೆಯಾಗಿದೆ. ಆದ್ರೇ.. ಮೈಸೂರು ಜಿಲ್ಲೆಯನ್ನು ವೀಕೆಂಡ್ ಕರ್ಪ್ಯೂ ಜಾರಿಗೊಳಿಸಿದೆ. ಇದು ಅವೈಜ್ಞಾನಿಕ ನಿರ್ಧಾರವಾಗಿದೆ ಎಂದು ಕಿಡಿ ಕಾರಿದಂತ ಸಂಘದ ಸದಸ್ಯರು, ನಾಳೆಯಿಂದ ವಾರಾಂತ್ಯದಲ್ಲಿಯೂ ಅಂಗಡಿ ಮುಂಗಟ್ಟು ತೆರೆಯುವಂತ ನಿರ್ಧಾರವನ್ನು ಕೈಗೊಂಡಿದೆ.

 

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಮೈಸೂರು ಸಂಘ ಸಂಸ್ಥೆಗಳ ಅಧ್ಯಕ್ಷ ಪ್ರಶಾಂತ್ ಅವರು, ಕೂಡಲೇ ವೀಕ್ ಎಂಡ್ ಕರ್ಪ್ಯೂ ರದ್ದು ಮಾಡಬೇಕು. ಈಗ 92 – 98 ಕೊರೋನಾ ಸೋಂಕಿನ ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗುತ್ತಿವೆ. ನೈಟ್ ಕರ್ಪ್ಯೂ ಓಕೆ.. ವೀಕೆಂಡ್ ಕರ್ಪ್ಯೂ ಜಿಲ್ಲೆಯಲ್ಲಿ ಯಾಕೆ ಎಂಬುದಾಗಿ ಕಿಡಿಕಾರಿದರು.

 

ಮೈಸೂರು ಪ್ರವಾಸಿಗರ ನಗರವಾಗಿದೆ. ವಾರಾಂತ್ಯದಲ್ಲಿ ಜಿಲ್ಲೆಗೆ ಹೆಚ್ಚು ಹೆಚ್ಚು ಪ್ರವಾಸಿಗರು ಬರ್ತಾ ಇದ್ದಾರೆ. ಆ ಸಂದರ್ಭದಲ್ಲಿಯೇ ನಮಗೆ ವ್ಯವಹಾರ ಮಾಡೋದು. ಈಗಾಗಲೇ ಈ ಹಿಂದಿನ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ವ್ಯಾಪಾರಿಗಳು ಸಿಲುಕಿದ್ದಾರೆ. ಈಗ ವೀಕೆಂಡ್ ಕರ್ಪ್ಯೂ ಜಾರಿಗೊಳಿಸಿ ವ್ಯಾಪಾರಕ್ಕೆ ಅಡ್ಡಿಯುಂಟಾಗಿದೆ. ಇದನ್ನು ರದ್ದು ಪಡಿಸಬೇಕು. ಒಂದು ವೇಳೆ ರದ್ದು ಪಡಿಸದೇ ಇದ್ದರೇ, ನಾಳೆಯಿಂದ ಅಂಗಡಿ ಮುಂಗಟ್ಟುಗಳನ್ನು ತೆರೆಯುತ್ತೇವೆ. ನಮ್ಮನ್ನು ಬಂಧಿಸಿದ್ರೂ ಸರಿಯೇ ಓಪನ್ ಮಾಡೋದಾಗಿ ಹೇಳಿದರು.


Spread the love

About Laxminews 24x7

Check Also

ಕಾರ್ಮಿಕ ಸಂಘಟನೆಗಳಿಂದ ಭಾರತ್ ಬಂದ್‌ಗೆ ಕರೆ – 9 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರೊಟೆಸ್ಟ್

Spread the loveಬೆಂಗಳೂರು: ದೇಶಾದ್ಯಂತ ಹಲವು ಕಾರ್ಮಿಕ ಸಂಘಟನೆಗಳು  ಇಂದು ಭಾರತ್ ಬಂದ್‌ಗೆ  ಕರೆ ಕೊಟ್ಟಿವೆ. ಕೇಂದ್ರ ಸರ್ಕಾರದ ಹೊಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ