ಚಿತ್ರದುರ್ಗ: ರಜೆಯಲ್ಲಿ ಮಕ್ಕಳು ನೀರಿಗಿಳಿದು ಅನಾಹುತ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಮುಂದುವರಿದಿದ್ದು, ಜಮೀನೊಂದರಲ್ಲಿದ್ದ ಕೃಷಿಹೊಂಡಕ್ಕೆ ಎರಡು ಜೀವಗಳು ಬಲಿಯಾಗಿವೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕು ಐಮಂಗಲ ಹೋಬಳಿಯ ವದ್ದಿಕೆರೆ ಗ್ರಾಮದಲ್ಲಿ ಈ ಅವಘಡ ಸಂಭವಿಸಿದೆ. ಜಮೀನಿನ ಕೃಷಿಹೊಂಡಕ್ಕೆ ಬಿದ್ದ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ. ಆರನೇ ತರಗತಿಯ ರಘು (12), ನಾಲ್ಕನೇ ತರಗತಿ ಸಿದ್ಧೇಶ್ (10) ಮೃತಪಟ್ಟವರು.