Breaking News

ಸಾರ್ವಜನಿಕ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಉಗುಳಿದ್ದಾರೆ ದಂಡ!

Spread the love

ಬೆಂಗಳೂರು: ಸಾರ್ವಜನಿಕ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಉಗುಳುವುದರಿಂದ ಸಾಂಕ್ರಾಮಿಕ ರೋಗಗಳು ಹರುಡುವುದಲ್ಲದೆ, ಶುಚಿತ್ವಕೂ ಭಂಗ ಉಂಟಾಗಿ ಜನಸಾಮಾನ್ಯರಿಗೆ ಅನಾನುಕೂಲವಾಗುತ್ತದೆ. ನಿಗಮದ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ದಂಡ ವಿಧಿಸುವ ಕ್ರಮ ಜೂನ್ 2020 ರಿಂದ ಜಾರಿಗೆ ತರಲಾಗಿರುತ್ತದೆ. ಜನ ಸಾಮಾನ್ಯರಿಗೆ ಈ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬ್ಯುಟಿಫುಲ್ ಬೆಂಗಳೂರು ಹಾಗೂ ಸಾರಾ ಜಹಾನ್ ಸೆ ಅಚ್ಚಾ ಫುಣೆ ತಂಡಗಳು “ಉಗುಳುವ ನಿಷೇಧದ ಅಭಿಯಾನ” ನಿಗಮದೊಂದಿಗೆ ಸೇರಿ ಹಮ್ಮಿಕೊಂಡಿರುತ್ತಾರೆ.

ಕೊರೋನಾ ಮಹಾಮಾರಿಯು ಪ್ರಪಂಚವನ್ನೇ ತಲ್ಲಣಕ್ಕೆ ಗುರಿಮಾಡಿರುವ ಸಂದರ್ಭದಲ್ಲಿ ಇಂತಹ ಅಭಿಯಾನವನ್ನು ನಾವೆಲ್ಲರೂ ಪ್ರೋತ್ಸಾಹಿಸಬೇಕಾಗಿದೆ. ಈ ಸಂದೇಶವನ್ನು ಎಲ್ಲಾ ಕಡೆಗೂ ಸಾರಬೇಕೆಂದು ಕೆ ಎಸ್ ಆರ್ ಟಿ ಸಿ ಕೆಂಪೇಗೌಡ ಬಸ್ ನಿಲ್ದಾಣದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿರುವ ಎಸ್.ಆರ್. ಚಂದ್ರಶೇಖರ್ ಮನವಿ ಮಾಡಿದ್ದಾರೆ.

ನಿಗಮದ ಪರಿಸರ ಅಧಿಕಾರಿ ಶ್ರೀ ಸತೀಶ್, ಬ್ಯುಟಿಫುಲ್ ಬೆಂಗಳೂರು ತಂಡದ ಸಂಸ್ಥಾಪಕ ಒಡೆಟ್ ಕಾತರಕ್ ಹಾಗೂ ಸಾರಾ ಜಹಾ ಸೆ ಅಚ್ಚಾ ಸಂಸ್ಥಾಪಕ ನಿರ್ದೇಶಕರಾದ ರಾಜಾ ನರಸಿಂಹನ್ ಹಾಗೂ ಪ್ರೀತಿ ರಾಜಾ ಮತ್ತು ರೋಟರಿ ಕ್ಲಬ್ ವತಿಯಿಂದ ಪ್ರಭು ಕಾಶೀನಾಥ್ ನೆರೆದಿರುವ ಜನರಿಗೆ ಜಾಗೃತಿ ಮೂಡಿಸಿದರು. ನಟ ಪುನೀತ್ ರಾಜಕುಮಾರ್ ಅವರ ವಿಡಿಯೋ ಸಂದೇಶವನ್ನು ಪ್ರದರ್ಶಿಸಲಾಯಿತು.
ಪ್ರತಿಜ್ಞೆ ವಿಧಿಯನ್ನು ಬಿ ಬಿ ಎಂ ಪಿ ಮಾರ್ಷಲ್ ಗಳಿಂದ ಬೋಧಿಸಲಾಯಿತು.

ನಿಗಮದ ಬಸ್ ನಿಲ್ದಾಣಗಳು, ಘಟಕ, ಕಾರ್ಯಾಗಾರ ಮತ್ತು ಕಛೇರಿಯ ಪ್ರದೇಶಗಳಲ್ಲಿ ಉಗುಳುವವರಿಗೆ ರೂ.100 ದಂಡವನ್ನು ವಿಧಿಸಲಾಗುತ್ತಿದೆ. ಅದರಂತೆ ಜೂನ್ 2020 ರಿಂದ ಮಾರ್ಚ್ 2021 ರವರೆಗೆ ರೂ. 4,66,500 ದಂಡ ಹಾಗೂ ಏಪ್ರಿಲ್ 2021 ರಿಂದ ಜೂನ್ 2021 ರವರೆಗೆ ರೂ.17,100 ರೂ ದಂಡ ವಿಧಿಸಲಾಗಿರುತ್ತದೆ.


Spread the love

About Laxminews 24x7

Check Also

ಪ್ರತಿ ಟನ್ ಕಬ್ಬಿಗೆ​​ ಹೆಚ್ಚುವರಿ 50 ರೂ. ಕೊಡಲು ಸಾಧ್ಯವಿಲ್ಲ: ಸಕ್ಕರೆ ಮಿಲ್ಸ್ ಸಂಘಟನೆ ಅಧ್ಯಕ್ಷ

Spread the loveಬೆಂಗಳೂರು: ಪ್ರತಿ ಟನ್ ಕಬ್ಬಿಗೆ 3,200 ರೂ.‌ ಕೊಡಲು ಮಾತ್ರ ಸಾಧ್ಯ. 3,250 ರೂ. ಕೊಡುವುದು ಸಾಧ್ಯವಿಲ್ಲ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ