Breaking News

ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಆದೇಶ ಯಥಾವತ್ತಾಗಿ ಜಾರಿ

Spread the love

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಆದೇಶ ಯಥಾವತ್ತಾಗಿ ಜಾರಿಯಾಗಿದೆ. ವೀಕೆಂಡ್ ಕರ್ಪ್ಯೂ (Weekend Curfwe) ಹಿನ್ನೆಲೆ ನಿನ್ನೆ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೂ ಬಂದ್ ಘೋಷಿಸಲಾಗಿದೆ. ಅಗತ್ಯ ವಸ್ತುಗಳ‌ ಮಾರಾಟಕ್ಕೆ ಮಾತ್ರ ಅವಕಾಶವಿದ್ದು, ತರಕಾರಿ, ಹೂವು ಹಣ್ಣು, ಹಾಲು, ಮದ್ಯದಂಗಡಿ, ದಿನಸಿ ಅಂಗಡಿ ತೆರೆಯಬಹುದಾಗಿದೆ. ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 2ಗಂಟೆ ವರೆಗೆ ಮಾತ್ರ ಅಗತ್ಯ ಸಾಮಾಗ್ರಿಗಳ ಖರೀದಿಗೆ ಅವಕಾಶ ನೀಡಿದ್ದು, ಉಳಿದಂತೆ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿರಲಿವೆ. ಹೋಟೆಲ್‌ಗಳಲ್ಲಿ ಪಾರ್ಸಲ್‌ಗಳಿಗೆ ಮಾತ್ರ ಅವಕಾಶ ಕೊಡಲಾಗಿದೆ. ಮಹಾರಾಷ್ಟ್ರ ಗಡಿಯಲ್ಲೂ (Border) ಕಟ್ಟುನಿಟ್ಟಿನ ತಪಾಸಣೆ (Check) ನಡೆಸುತ್ತಿದ್ದು, ಬೆಳಗಾವಿ ಜಿಲ್ಲೆಯ 23ಚೆಕ್ ಪೋಸ್ಟ್​ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಆರಂಭವಾಗಿದೆ.

ಕೊಡಗು: ಕೊಡಗು ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಾಗಿದ್ದು, ಬೆಳಗ್ಗೆ 5 ರಿಂದ‌ ಮಧ್ಯಾಹ್ನ 2ರವರೆಗೆ ಕೆಲವು ವಹಿವಾಟಿಗೆ ಅನುಮತಿ ನೀಡಲಾಗಿದೆ. ಹೂವು, ಹಣ್ಣು, ತರಕಾರಿ, ಹಾಲು, ಮದ್ಯದಂಗಡಿ, ದಿನಸಿ ಮಳಿಗೆ ತೆರೆಯಲು ಅವಕಾಶಗಿದೆ. ಅನಿವಾರ್ಯ ಕಾರಣಗಳಿಂದ‌ ಓಡಾಡುವವರಿಗೆ ನಿರ್ಬಂಧ ಇಲ್ಲ ಎಂದು ತಿಳಿಸಿದ್ದಾರೆ. ಆದರೆ, ಪ್ರವಾಸೋದ್ಯಮದ ಬಗ್ಗೆ ಜಿಲ್ಲಾಡಳಿತ ಸ್ಪಷ್ಟನೆ ನೀಡಿಲ್ಲ. ಜಿಲ್ಲೆಯಲ್ಲಿ ಉಳಿದುಕೊಂಡಿರುವ ಸಹಸ್ರಾರು ಪ್ರವಾಸಿಗರನ್ನು ಏನು ಮಾಡುತ್ತಾರೆ ಎಂದು ತಿಳಿದಿಲ್ಲ. ಇನ್ನೊಂದೆಡೆ, ಹೋಮ್​ ಸ್ಟೇ ಲಾಡ್ಜ್, ರೆಸಾರ್ಟ್ ಬುಕ್ಕಿಂಗ್ ಮಾಡಿರುವವರು ಇಂದೂ ಕೂಡ ಲಗ್ಗೆ ಇಡುವ ಸಾಧ್ಯತೆ ಇದೆ. ಆದೇಶದಲ್ಲಿ ಪ್ರವಾಸಿಗರ ಬಗ್ಗೆ ಏನೂ ಹೇಳದ ಕಾರಣ ಪ್ರವಾಸೋದ್ಯಮಿಗಳು ಗೊಂದಲದಲ್ಲಿದ್ದಾರೆ.

ಬೀದರ್: ಮಹಾರಾಷ್ಟ್ರದ ಗಡಿ ಜಿಲ್ಲೆ ಬೀದರ್​ನಲ್ಲಿ ಹೆಸರಿಗೆ ಮಾತ್ರ ವೀಕೆಂಡ್ ಲಾಕ್​ಡೌನ್ ಎಂಬಂತಾಗಿದೆ. ಎಂದಿನಂತೆ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಸಾರಿಗೆ ಬಸ್​ಗಳ ಓಡಾಟವಿದೆ. ತೆಲಂಗಾಣ ಮಹಾರಾಷ್ಟ್ರಕ್ಕೂ ಬಸ್ ಸೇವೆಯಿದ್ದು, ಜನ ಪ್ರಯಾಣಿಸುತ್ತಿದ್ದಾರೆ. ಟಂಟಂ, ಆಟೋ ಓಡಾಟ ಹೊಟೇಲ್, ವೈನ್ ಶಾಪ್, ದಿನಸಿ ಅಂಗಡಿಗಳು ತೆರೆದಿವೆ. ಮಧ್ಯಾಹ್ನ ಎರಡು ಗಂಟೆಯ ನಂತರ ವೈನ್ ಶಾಪ್, ದಿನಸಿ ಅಂಗಡಿಗಳು ಬಂದ್ ಆಗಲಿದ್ದು, ವೀಕೆಂಡ್ ಲಾಕ್​ಡೌನ್ ಹಿನ್ನೆಲೆ ದೇವಸ್ಥಾನ, ಪ್ರವಾಸಿ ಸ್ಥಳಗಳಿಗೆಮ ಪ್ರವೇಶ ನಿಷೇಧಿಸಲಾಗಿದೆ.

ವಿಜಯಪುರ: ಇಂದಿನಿಂದ ಸೋಮವಾರ ಬೆಳಿಗ್ಗೆ 5 ಗಂಟೆವರೆಗೂ ವಿಜಯಪುರ ಜಿಲ್ಲೆಯಲ್ಲಿ ವೀಕೆಂಡ್ ಕರ್ಪ್ಯೂ ಜಾರಿಯಾಗಿದೆ. ಮಹಾರಾಷ್ಟ್ರ ರಾಜ್ಯದ ಗಡಿ ಹಂಚಿಕೊಂಡಿರೋ ಜಿಲ್ಲೆಯಲ್ಲಿ ಹೋಟೆಲ್, ರೆಸ್ಟೋರೆಂಟ್, ಬಾರ್, ರೆಸ್ಟೋರೆಂಟ್, ಅಂಗಡಿ ಮುಗ್ಗಂಟುಗಳಲ್ಲಿ‌ ವ್ಯಾಪಾರ ವಹಿವಾಟಿಗೆ ಬೆಳಗ್ಗೆ 5 ರಿಂದ ಮಧ್ಯಾಹ್ನ 2 ಗಂಟೆವರೆಗೆ ಅವಕಾಶ ನೀಡಲಾಗಿದೆ. ತುರ್ತು ಸೇವೆಗಳಿಗೆ ತಡೆಯಿಲ್ಲ. ಆದರೆ, ಸಭೆ ಸಮಾರಂಭಗಳಲ್ಲಿ ಕೊರೊನಾ ನಿಯಮ ಪಾಲನೆ ಆಗಬೇಕು ಹಾಗೂ ನಿರ್ದಿಷ್ಟ ಸಂಖ್ಯೆಯಲ್ಲಿ ಮಾತ್ರ ಜನ ಸೇರಬೇಕು ಎಂದು ಸೂಚನೆ ನೀಡಲಾಗಿದೆ. ಬೆಳಗ್ಗೆ 5 ರಿಂದ ಮದ್ಯಾಹ್ನ 2 ಗಂಟೆವರೆಗೆ ಸಾರ್ವಜನಿಕರ ಓಡಾಟಕ್ಕೆ ಅನುಮತಿ ಕೊಡಲಾಗಿದೆ. ಸದ್ಯ ಸರ್ಕಾರಿ ಹಾಗೂ ಖಾಸಗಿ ವಾಹನ ಸಂಚಾರಕ್ಕೆ ತಡೆಯಿಲ್ಲ. ವಿವಿಧ ಪರೀಕ್ಷೆಗಳು ಇರುವ ಕಾರಣ ಸಾರಿಗೆ ಅಬಾಧಿತವಾಗಿದ್ದು, ನೆರೆಯ ಮಹಾರಾಷ್ಟ್ರದಿಂದ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಅನಕೂಲ ಮಾಡಿಕೊಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಹಾರಾಷ್ಟ್ರದಿಂದ ಆಗಮಿಸುವ ವಿದ್ಯಾರ್ಥಿಗಳ ಗಂಟಲು ದ್ರವ ಸಂಗ್ರಹ ಮಾಡಿ ಪರೀಕ್ಷೆ ಮಾಡಲು ಕ್ರಮ ತೆಗೆದುಕೊಂಡಿದ್ದು, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ನೌಕರರು ಕಡ್ಡಾಯವಾಗಿ ಗುರುತಿನ ಪತ್ರ ತೋರಿಸಿ ಸಂಚರಿಸಲು ಅವಕಾಶ ನೀಡಲಾಗಿದೆ.

ಮೈಸೂರು: ಕೊವಿಡ್‌ ವೀಕೆಂಡ್‌ ಕರ್ಫ್ಯೂ ಜಾರಿ ಬಗ್ಗೆ ಮಾಹಿತಿ ನೀಡಿರುವ ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಮೈಸೂರು ಜಿಲ್ಲೆಯಲ್ಲಿ ಸರ್ಕಾರದ ಆದೇಶ ಯಥಾವತ್ತಾಗಿ ಜಾರಿಯಾಗುತ್ತಿದೆ ಎಂದು ಹೇಳಿದ್ದಾರೆ. ಜಿಲ್ಲೆಯಲ್ಲಿ ಇಂದಿನಿಂದ (ಶನಿವಾರ) ಸೋಮವಾರ ಮುಂಜಾನೆ 5ರವರೆಗೂ ಕರ್ಫ್ಯೂ ಇರಲಿದೆ. ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ‌ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗುವುದು. ತರಕಾರಿ ಮಾರಾಟಕ್ಕೆ ಬೆಳಗ್ಗೆ 5ರಿಂದ ಮಧ್ಯಾಹ್ನ 2ರವರೆಗೆ ಅವಕಾಶ ಇರುತ್ತದೆ. ಹೋಟೆಲ್‌ಗಳಲ್ಲಿ ಆಹಾರ ಪಾರ್ಸೆಲ್‌ಗೆ


Spread the love

About Laxminews 24x7

Check Also

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..!

Spread the love ಸವದತ್ತಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ