Breaking News

ಹಿಡಕಲ್ ಡ್ಯಾಂ ಶೇ 95 ರಷ್ಟು ಭರ್ತಿ:

Spread the love

ಬೆಳಗಾವಿ:  ಹಿಡಕಲ್ ಜಲಾಶಯ ಭಾಗಶಃ ಶೇ. 95 ರಷ್ಟು ಭರ್ತಿಯಾದ ಹಿನ್ನೆಲೆಯಲ್ಲಿ 10 ಕ್ರಸ್ಟ್ ಗೇಟ್ ಗಳ ಮೂಲಕ 5 ಸಾವಿ ಕ್ಯೂಸೆಕ್ ನೀರು ಘಟಪ್ರಭಾ ನದಿಗೆ ಬಿಡುಗಡೆ ಮಾಡಲಾಗಿದೆ.
ಮಹಾರಾಷ್ಟ್ರ ಹಾಗೂ ಕರ್ನಾಟಕ ಜಲಾಯನ ಪ್ರದೇಶದಲ್ಲಿ  ಮತ್ತೆ ಮಳೆ ಆರಂಭವಾದ ಹಿನ್ನೆಲೆಯಲ್ಲಿ ಘಟಪ್ರಭಾ ನದಿ ಒಳ ಹರಿವು ಹೆಚ್ಚಳವಾಗಿದೆ.  ಘಟಪ್ರಭಾ ನದಿಯ ಗೋಕಾಕ ಹಾಗೂ ಹುಕ್ಕೇರಿ ತಾಲೂಕಿನ ಗ್ರಾಮದ ನದಿ ಪಾತ್ರದ ಜನರಿಗೆ ಸುರಕ್ಷಿತ ಇರುವಂತೆ ಸೂಚನೆ ನೀಡಲಾಗಿದೆ.

ಘಟಪ್ರಭಾ ಎಡದಂಡೆ ಕಾಲುವೆ ಮೂಲಕ 2 ಸಾವಿರ ಹಾಗೂ ಪವರ್ ಹೌಸ್ ಮೂಲಕ 2 ಸಾವಿರ ಒಟ್ಟು 9 ಸಾವಿರ ಕ್ಯೂಸೆಕ್ ನೀರನ್ನ ಘಟಪ್ರಭಾ ನದಿಗೆ ಬಿಡಲಾಗುತ್ತಿದೆ. ಸದ್ಯ ಘಟಪ್ರಭಾ ನದಿಗೆ 19 ಸಾವಿರ ಕ್ಯೂಸೆಕ್ ನ ನೀರಿನ ಒಳ ಹರಿವಿದೆ. ಅದರಲ್ಲಿ 9 ಸಾವಿರ ಕ್ಯೂಸೆಕ್ ನೀರನ್ನ ಬಿಡಲಾಗುತ್ತಿದೆ ಪ್ರಭಾರ ಮುಖ್ಯ ಇಂಜಿನಿಯ ಸಿ.ಡಿ.ಪಾಟೀಲ ಮಾಹಿತಿ ನೀಡಿದ್ದಾರೆ. 

 ಕಳೆದ ವರ್ಷ ಇದೇ ಸಮಯದಲ್ಲಿ‌ 90 ಸಾವಿರ ಕ್ಯೂಸೆಕ್ ನೀರು ಬಿಡಲಾಗಿತ್ತು. ಇದರಿಂದ ಗೋಕಾಕ ಸಂಪೂರ್ಣ ಪ್ರವಾಹದಲ್ಲಿ ಸಿಲುಕಿತ್ತು.


Spread the love

About Laxminews 24x7

Check Also

ಖಾನಾಪೂರ ಕೋ ಆಪ್ (ಅರ್ಬನ್ ಬ್ಯಾಂಕ್)ಬ್ಯಾಂಕಿನ ಮತ ಎಣಿಕೆ ಮಂಗಳವಾರ ನಡೆಯುವ ಸಾಧ್ಯತೆ.

Spread the love ಖಾನಾಪೂರ :-ಖಾನಾಪೂರ ಕೋ ಆಪ್ ಬ್ಯಾಂಕ್ (ಅರ್ಬನ್ ಬ್ಯಾಂಕ್) ನ ಚುನಾವಣೆ ನಡೆದು ಹದಿನೈದರಿಂದ ಇಪ್ಪತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ