Breaking News

ಟೀ ಶರ್ಟ್, ಬರ್ಮುಡಾ ಧರಿಸಿ ಮಧ್ಯರಾತ್ರಿ ಠಾಣೆಗೆ ಬಂದ ಪೊಲೀಸ್ ವರಿಷ್ಠಾಧಿಕಾರಿ; ಗುರುತು ತಿಳಿಯದೇ ಸಿಬ್ಬಂದಿ ತಬ್ಬಿಬ್ಬು

Spread the love

ತುಮಕೂರು: ಟೀ ಶರ್ಟ್, ಬರ್ಮುಡಾ ಧರಿಸಿ ಅಪರಿಚಿತ ದೂರುದಾರರಂತೆ ಪೊಲೀಸ್ ಠಾಣೆಗೆ ತೆರಳಿದ ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್, (Tumkur SP) ಠಾಣೆಯ ಪರಿಶೀಲನೆ ನಡೆಸಿದ್ದಾರೆ. ತುಮಕೂರು ಹೊರವಲಯದ ಮಹಿಳಾ ಠಾಣೆ ಪರಿಶೀಲನೆ ನಡೆಸಿದ ಅವರ ವೇಶ ಭೂಷಣ ಗಮನಿಸಿ ದೂರುದಾರ ಎಂದೇ ಠಾಣೆಯ ಸಿಬ್ಬಂದಿ ಭಾವಿಸಿದ್ದರು. ಆದರೆ ಕೆಲಹೊತ್ತಿನ ಬಳಿಕ ಟೀ ಶರ್ಟ್ ಮತ್ತು ಬರ್ಮುಡಾ ಧರಿಸಿ ಬಂದವರು ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ಎಂದು ತಿಳಿದ ಪೊಲೀಸ್ ಸಿಬ್ಬಂದಿ ತಬ್ಬಿಬ್ಬಾಗಿದ್ದಾರೆ. ಬಳಿಕ ಕೆಲಹೊತ್ತಿನವರೆಗೆ ಠಾಣೆಯಲ್ಲೇ ಇದ್ದು ಎಸ್‌ಪಿ ರಾಹುಲ್ ಕುಮಾರ್ ಪರಿಶೀಲನೆ ನಡೆಸಿದ್ದಾರೆ. ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಯ ವಿಡಿಯೋ ಹಂಚಿಕೊಂಡು ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಬಳಿಕ ದೂರು ನೀಡಲು ಬಂದಿದ್ದ ದೂರುದಾರರನ್ನು ವಿಚಾರಣೆ ನಡೆಸಿ, ಸತತ ಒಂದು ಗಂಟೆಗಳ ಕಾಲ ಮಹಿಳಾ ಠಾಣೆಯಲ್ಲೇ ಇದ್ದು, ಸಿಬ್ಬಂದಿಯ ಕಾರ್ಯ ವೈಖರಿಗಳ ಪರಿಶೀಲನೆ ನಡೆಸಿದ್ದಾರೆ. ಜತೆಗೆ ಸಿಬ್ಬಂದಿಯ ಸಮಸ್ಯೆಗಳನ್ನು ಆಲಿಸಿದ ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್, ಮಧ್ಯರಾತ್ರಿ 2 ಗಂಟೆಗೆ ಮನೆಗೆ ಹಿಂತಿರುಗಿದ್ದಾರೆ.


Spread the love

About Laxminews 24x7

Check Also

ಬ್ಲೇಡ್​ನಿಂದ ಮಹಿಳೆ ಕುತ್ತಿಗೆ ಮೇಲೆ ದಾಳಿ ಮಾಡಿ ಚಿನ್ನಾಭರಣ, ನಗದು ಕದ್ದು ಪರಾರಿ

Spread the loveಕಲಬುರಗಿ: ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಇಜೇರಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಮನೆಯಲ್ಲಿ ಮಲಗಿದ್ದ ಮಹಿಳೆಯ ಕುತ್ತಿಗೆಗೆ ದುಷ್ಕರ್ಮಿಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ