Breaking News

ಒಂದೇ ಮನೆಯಲ್ಲಿದ್ದರು ಪತ್ನಿ-ಪತಿ-ಸ್ನೇಹಿತ! ಪೊಲೀಸರ ಮುಂದೆ ಬಯಲಾಯ್ತು ಚೆಂದುಳ್ಳಿ ಚೆಲುವೆಯ ಅಸಲಿ ಮುಖ

Spread the love

ಬೆಂಗಳೂರು: ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳಿಬ್ಬರು ಮದುವೆಯಾಗಿ ಹುಟ್ಟೂರು ಬಿಟ್ಟು ಬೆಂಗಳೂರಿಗೆ ಬಂದಿದ್ದರು. ಪ್ರಾಣಕ್ಕೆ ಪ್ರಾಣ ಕೊಡುವಂತಿದ್ದ ಗೆಳೆಯನ ಮನೆಯಲ್ಲೇ ತನ್ನ ಪತ್ನಿ ಜತೆಗೆ ಗಂಡ ತಂಗಿದ್ದ. ಆದರೀಗ ಆತ ದುರಂತ ಅಂತ್ಯಕಂಡಿದ್ದಾನೆ… ಈ ಸಾವಿನ ಜಾಡು ಹಿಡಿದು ಹೊರಟ ಪೊಲೀಸರ ಮುಂದೆ ಬೆಚ್ಚಿಬೀಳಿಸೋ ಚೆಂದುಳ್ಳಿ ಚೆಲುವೆಯ ಅಸಲಿ ಮುಖ ಅನಾವರಣಗೊಂಡಿದೆ.

ಇದು ಲವ್ ಮ್ಯಾರೆಜ್ ಮಾಡಿಕೊಂಡು ಹುಟ್ಟೂರು ಬಿಟ್ಟು ಬೆಂಗಳೂರಿಗೆ ಬಂದವಳ ಎರಡನೇ ಲವ್ ಸ್ಟೋರಿಗೆ ಅಮಾಯಕ ಬಲಿಯಾದ ದುರಂತ ಸ್ಟೋರಿ. ಮಂಡ್ಯದ ಕೀಲಾರ ಮೂದವ ಕಾರ್ತಿಕ್ ಎಂಬಾತ ರಂಜಿತಾಳನ್ನು 5 ವರ್ಷದ ಹಿಂದೆ ಪ್ರೀತಿಸಿ ಮದುವೆ ಮಾಡಿಕೊಂಡಿದ್ದ. ಬದುಕು ಕಟ್ಟಿಕೊಳ್ಳಲೆಂದು ಬೆಂಗಳೂರಿಗೆ ಬಂದಿದ್ದ ಈ ಜೋಡಿ, ಕಾರ್ತಿಕ್​ನ ಸ್ನೇಹಿತ ಸಂಜೀವ್ ಮನೆಯಲ್ಲೇ ಚಾಮರಾಜಪೇಟೆಯ ಬಂಡಿಮಾಕಾಳಮ್ಮ ದೇವಸ್ಥಾನ ಬಳಿ ವಾಸವಿತ್ತು. ಈ ದಂಪತಿಗೆ 4 ವರ್ಷದ ಹೆಣ್ಣು ಮಗು ಕೂಡ ಇದೆ. ಇವರ ಜತೆಯಲ್ಲೇ ಸಂಜೀವ್ ಕೂಡ ವಾಸವಿದ್ದ. ಇವರಿಬ್ಬರೂ ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದರು. ದಿನಕಳೆದಂತೆ ಕಾರ್ತಿಕ್ ಪತ್ನಿಯ ಮೋಹಕ್ಕೆ ಮನಸೋತ ಸಂಜೀವ್, ಆಕೆಯೊಂದಿಗೆ ಗೆಳೆಯನಿಗೆ ಗೊತ್ತಾಗದಂತೆ ಲವ್ವಿಡವ್ವಿ ಶುರು ಮಾಡಿದ್ದ.

ರಂಜಿತಾ ಮತ್ತು ಕಾರ್ತಿಕ್​

ಸಂಜೀವ್​ಗೆ ಈಗಾಗಲೇ ಮದುವೆಯಾಗಿದ್ದು, ವಿಚ್ಛೇದನ ಆಗಿದೆ. ಇಬ್ಬರು ಮಕ್ಕಳು ಇದ್ದಾರೆ ಎನ್ನಲಾಗಿದೆ. ಗಂಡನಿದ್ದರೂ ಪರಪುರುಷನ ಕಾಮದಾಟಕ್ಕೆ ಮನಸೋತ ರಂಜಿತಾ, ಗಂಡನನ್ನು ಮುಗಿಸಲು ಸಂಜೀವ್​ ಜತೆ ಮುಹೂರ್ತ ಇಟ್ಟಿದ್ದಳು. ತಾವು ರೂಪಿಸಿದ್ದ ಪ್ಲಾನ್​ನಂತೆ ಜುಲೈ 29ರಂದು ಕಾರ್ತಿಕ್​ಗೆ ಚಾಮರಾಜಪೇಟೆಯ ಜಿಂಕೆ ಪಾರ್ಕ್​ ಸಮೀಪದ ಬಾರ್​ವೊಂದರಲ್ಲಿ ಕಂಠಪೂರ್ತಿ ಮದ್ಯ ಕುಡಿಸಿದ್ದ ಸಂಜೀವ್​, ತನ್ನ ಮತ್ತೊಬ್ಬ ಸ್ನೇಹಿತ ಸುಬ್ರಹ್ಮಣಿ ಜತೆ ಕಾರ್ತಿಕ್​ನನ್ನು ಆಟೋದಲ್ಲಿ ಚನ್ನಪಟ್ಟಣಕ್ಕೆ ಕರೆದುಕೊಂಡು ಹೋಗಿದ್ದ. ಅಲ್ಲಿ ಕಾರ್ತಿಕ್​ ತಲೆಗೆ ದೊಣ್ಣೆಯಿಂದ ಹೊಡೆದು ಕುತ್ತಿಗೆ ಬಿಗಿದು ಕೊಂದ ಸಂಜೀವ್​ ಮತ್ತು ಸುಬ್ರಹ್ಮಣಿ, ಶವವನ್ನು ಚೀಲದಲ್ಲಿ ತುಂಬಿ ಬೆಂಗಳೂರಿಗೆ ಆಟೋದಲ್ಲಿ ತಂದಿದ್ದರು. ಬಳಿಕ ಕುಂಬಳಗೋಡಿನ ಬಳಿ ವೃಷಭಾವತಿ ನದಿಗೆ ಎಸೆದು‌‌ ಪರಾರಿಯಾಗಿದ್ದರು.

ಸಂಜೀವ್​ ಮತ್ತು ಸುಬ್ರಹ್ಮಣಿ

ಇತ್ತ ಗಂಡನ ಕೊಲೆಗೆ ಪ್ಲಾನ್ ಕೊಟ್ಟು ಆ.1ರಂದು ಕೆಂಪೇಗೌಡನಗರ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದಳು ಪತ್ನಿ ರಂಜಿತಾ. ತನಿಖೆ ಕೈಗೊಂಡ ಪೊಲೀಸರು ರಂಜಿತಾಳ ಮೇಲೆ ಅನುಮಾನಗೊಂಡು ವಿಚಾರಣೆಗೆ ಠಾಣೆಗೆ ಕರೆದಿದ್ದರು. ಈ ವೇಳೆ ರಂಜಿತಾಳ ಜತೆ ಪ್ರಿಯಕರ ಸಂಜೀವ್ ಕೂಡ ಬಂದಿದ್ದ. ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಆರೋಪಿಗಳು ಬಾಯ್ಬಿಟ್ಟ ಮಾಹಿತಿ ಮೇರೆಗೆ ಕೃತ್ಯ ನಡೆದ ಸ್ಥಳ ಪರಿಶೀಲಿಸಿದಾಗ ಕೊಳೆತ ಸ್ಥಿತಿಯಲ್ಲಿ ಕಾರ್ತಿಕ್ ಮೃತದೇಹ ಪತ್ತೆಯಾಗಿದೆ. ಆರೋಪಿಗಳಾದ ರಂಜಿತಾ, ಸಂಜೀವ್, ಸುಬ್ರಮಣಿಯನ್ನು ಪೊಲೀಸರು ಬಂಧಿಸಿದ್ದಾರೆ.

 


Spread the love

About Laxminews 24x7

Check Also

ಸೌಕರ್ಯ, ಸಿಬ್ಬಂದಿ: ಕೊರತೆ ಆಸ್ಪತ್ರೆಗೇ ಬೇಕಿದೆ ಚಿಕಿತ್ಸೆ!

Spread the love ಚಿಕ್ಕೋಡಿ: ಪಟ್ಟಣದ ಹೊರವಲಯದಲ್ಲಿ ₹20 ಕೋಟಿ ವೆಚ್ಚದಲ್ಲಿ ಐದು ಎಕರೆಯಲ್ಲಿ ತಲೆ ಎತ್ತಿರುವ ತಾಯಿ ಮತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ