Breaking News

ಯಡಿಯೂರಪ್ಪ ಮುಂದೆ ದೆಹಲಿ ಹೈಕಮಾಂಡ್ ಮಂಡಿಯೂರಿ ಶರಣಾಗಿದೆಯೇ? ಧೃತರಾಷ್ಟ್ರ ಪುತ್ರಪ್ರೇಮವೇ ಕುರುಕ್ಷೇತ್ರಕ್ಕೆ ಕಾರಣ!

Spread the love

ಬೆಂಗಳೂರು: ರಾಜ್ಯದಲ್ಲಿ ಮೊದಲ ಬಾರಿ ಸಿಎಂ ಪುತ್ರನನ್ನು ಸಿಎಂ ಮಾಡಿದ ಹೆಗ್ಗಳಿಕೆಯೊಂದಿಗೆ ಈಗ ಚುನಾಯಿತ ಪ್ರತಿನಿಧಿಯೇ ಅಲ್ಲದ ಬಿವೈ ವಿಜಯೇಂದ್ರ ಅವರನ್ನು ಸಚಿವರನ್ನಾಗಿಸಲು ಬಿಜೆಪಿ ಮುಂದಾಗಿದೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮುಂದೆ ದೆಹಲಿ ಹೈಕಮಾಂಡ್ ಮಂಡಿಯೂರಿ ಶರಣಾಗಿದೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಹಿಂಬಾಗಿಲಲ್ಲಿ ಆಡಳಿತ ನಡೆಸುತ್ತಿದ್ದ ‘ಸೂಪರ್ ಸಿಎಂ’ ವಿಜಯೇಂದ್ರ ಅವರನ್ನು ಮುಂಬಾಗಿಲ ಮೂಲಕ ಕರೆತರಲು ಫ್ಯಾಮಿಲಿ ಜನತಾ ಪಾರ್ಟಿ ಸಜ್ಜಾಗಿದೆ. ವರ್ಗಾವಣೆ ದಂಧೆ, ಆಪರೇಷನ್ ಕಮಲ, ವಿಜಯೇಂದ್ರ ಸರ್ವೀಸ್ ಟ್ಯಾಕ್ಸ್ ಲೂಟಿ, ಭ್ರಷ್ಟಾಚಾರಗಳ ರೂವಾರಿ ಎಂದು ತಮ್ಮದೇ ಪಕ್ಷದವರ ಆರೋಪವಿದ್ದೂ ಸಂಪುಟ ಸೇರುತ್ತಿರುವುದು ಬಿಜೆಪಿಯ ನೈತಿಕ ದಿವಾಳಿತನಕ್ಕೆ ಸಾಕ್ಷಿ ಎಂದದು ಕಾಂಗ್ರೆಸ್ ಹರಿ ಹಾಯ್ದಿದೆ.

ತಾವು ವಿಪಕ್ಷಗಳಿಗೆ ಆರೋಪಿಸುತ್ತಿದ್ದ ಅದೇ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಲು ಬಿಜೆಪಿಗೆ ಬಹಳ ಉತ್ಸಾಹ, ಸಿಎಂ ನಂತರ ಈಗ ವಿಜಯೇಂದ್ರ ಸರದಿ! ಎಂಪಿ, ಎಂಎಲ್‌ಎ, ಎಂಎಲ್‌ಸಿ, ಯಾವುದೇ ಚುನಾಯಿತ ಪ್ರತಿನಿಧಿಯೇ ಅಲ್ಲದ ವಿಜಯೇಂದ್ರ ಅವರಿಗೆ ಸಂಪುಟ ಸ್ಥಾನ, ಯಡಿಯೂರಪ್ಪ ಅವರೇ, ಧೃತರಾಷ್ಟ್ರನ ಪುತ್ರಪ್ರೇಮವೇ ಕುರುಕ್ಷೇತ್ರಕ್ಕೆ ಕಾರಣ ತಿಳಿದಿದೆಯೇ! ಎಂದು ಪ್ರಶ್ನಿಸಿದ್ದಾರೆ.


Spread the love

About Laxminews 24x7

Check Also

ದಾವಣಗೆರೆ, ಬಾಗಲಕೋಟೆ ವಿಧಾನಸಭೆ ಬೈಎಲೆಕ್ಷನ್: ಉಸ್ತುವಾರಿ ಸಮಿತಿ ರಚನೆ; 31 ಜನರಿಗೆ ಜವಾಬ್ದಾರಿ

Spread the loveಬೆಂಗಳೂರು: ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆ  ಹಿನ್ನೆಲೆ  ಎರಡೂ ಕ್ಷೇತ್ರಕ್ಕೆ ಕಾಂಗ್ರೆಸ್ ಉಸ್ತುವಾರಿ ವೀಕ್ಷಕರ ನೇಮಿಸಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ