ಬೆಂಗಳೂರು: ಮಧ್ಯಾಹ್ನ 3 ಗಂಟೆ ನಂತರ ಎಸ್‍ಎಸ್‍ಎಲ್‍ಸಿ ಫಲಿತಾಂಶ ಇಲಾಖೆ ವೆಬ್‍ಸೈಟ್‍ನಲ್ಲಿ ಪ್ರಕರಟವಾಗಲಿದೆ.
ಕೊರೊನಾ ನಡುವೆಯೂ ಯಶಸ್ವಿಯಾಗಿ ಪರೀಕ್ಷೆ ನಡೆಸಿ, ಸರ್ಕಾರ ಸಾಹಸ ಮಾಡಿದಂತಾಗಿತ್ತು. ಇದೀಗ ಸೋಮವಾರ ಮಧ್ಯಾಹ್ನ 3 ಗಂಟೆಗೆ ಸುದ್ದಿಗೋಷ್ಠಿ ನಡೆಸಿ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಫಲಿತಾಂಶ ಪ್ರಕಟಿಸಲಿದ್ದಾರೆ. ಮಧ್ಯಾಹ್ನ 3 ಗಂಟೆ ನಂತರ ಇಲಾಖೆ ವೆಬ್‍ಸೈಟ್ ನಲ್ಲಿ ಫಲಿತಾಂಶ ಲಭ್ಯವಾಗಲಿದೆ. ಅಲ್ಲದೆ ವಿದ್ಯಾರ್ಥಿಗಳ ಪೋಷಕರ ಮೊಬೈಲ್‍ಗೆ ಫಲಿತಾಂಶವನ್ನು ಎಸ್‍ಎಂಎಸ್ ಮಾಡಲು ಸಹ ಎಸ್‍ಎಸ್‍ಎಲ್‍ಸಿ ಬೋರ್ಡ್ ಸಿದ್ಧತೆ ಮಾಡಿಕೊಂಡಿದೆ.
ಫಲಿತಾಂಶ ಲಭ್ಯವಾಗೋ ವೆಬ್ ಸೈಟ್ ವಿವರ www.kseeb.kar.nic.in ಹಾಗೂ www.karresults.nic.in ವೆಬ್‍ಸೈಟ್‍ಗಳಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಫಲಿತಾಂಶ ನೋಡಬಹುದಾಗಿದೆ. ಅಲ್ಲದೆ ಪೋಷಕರ ಮೊಬೈಲ್‍ಗೆ ಫಲಿತಾಂಶದ ಎಸ್‍ಎಂಎಸ್ ಸಹ ಬರಲಿದೆ.
ಜುಲೈ 3ರಂದು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮುಗಿದಿದ್ದು, ಕೊರೊನಾ ಮಧ್ಯೆ ಯಶಸ್ವಿಯಾಗಿ ನಡೆದಿದ್ದ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆ ಮುಗಿಯುತ್ತಿದ್ದಂತೆ ಮೌಲ್ಯಮಾಪನವನ್ನು ಸಹ ಅಷ್ಟೇ ವೇಗವಾಗಿ ಮುಗಿಸಲಾಗಿದೆ. ಸುಮಾರು 8.5 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲರ ಭವಿಷ್ಯ ಸೋಮವಾರ ನಿರ್ಧಾರವಾಗಲಿದೆ.