Breaking News

ಈ ಸರ್ಕಾರದ ಆಯಸ್ಸು 7 ತಿಂಗಳು:ಮೈಲಾರ ಶ್ರೀಗಳ ಭವಿಷ್ಯ

Spread the love

ವಿಜಯನಗರ : ಈಗಾಗಲೇ ರಾಜ್ಯ ರಾಜಕೀಯ, ನೆರೆ, ಪ್ರವಾಹ ಕುರಿತಂತೆ ಸ್ಪೋಟ ಭವಿಷ್ಯವನ್ನು ಕೋಡಿ ಮಠದ ಶ್ರೀಗಳು ( Kodi Matt Sri ) ನುಡಿದಿದ್ದಾರೆ. ಇದರ ಬೆನ್ನಲ್ಲೇ, ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ( Karnataka Next CM ) ಕುರಿತಂತೆ ಮೈಲಾರಲಿಂಗೇಶ್ವರ ಭವಿಷ್ಯವಾಣಿ ( Mylaralingeshwar Prediction ) ನುಡಿದಿದೆ.

 

ಈ ಕುರಿತಂತೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರದ ಧರ್ಮಕರ್ತರು, ಇಂದು ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತಂತೆ ಭವಿಷ್ಯವಾಣಿ ನುಡಿದಿದ್ದು, ಈಗ ಮುಖ್ಯಮಂತ್ರಿಯಾಗಿರುವಂತ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಕೇವಲ 6 -7 ತಿಂಗಳು ಮಾತ್ರವೇ ರಾಜ್ಯಭಾರ ಮಾಡಲಿದ್ದಾರೆ ಎಂಬುದಾಗಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

 

ಇನ್ನೂ ಮುಂದುವರೆದು.. ಯಡಿಯೂರಪ್ಪ ರಾಜೀನಾಮೆ ( Yediyurappa Resignation ) ಬಳಿಕ, ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾರೆ. ಅವರು 6 ರಿಂದ 7 ತಿಂಗಳು ಮಾತ್ರವೇ ಮುಖ್ಯಮಂತ್ರಿಯಾಗಿ ಕೆಲಸ ಮಾಡಬಹುದು. ಮಾರ್ಚ್ ವೇಳೆಗೆ ರಾಜ್ಯದಲ್ಲಿ ಗಡ್ಡಧಾರಿ ವ್ಯಕ್ತಿಯೊಬ್ಬರು ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂಬುದಾಗಿ ಭವಿಷ್ಯವಾಣಿ ನುಡಿದ್ದಾರೆ.


Spread the love

About Laxminews 24x7

Check Also

ರೇಣುಕಾಸ್ವಾಮಿ ಕೊಲೆ ಆರೋಪಿಗಳಿಗೆ ಮನೆ ಊಟಕ್ಕೆ ತಡೆ ನೀಡಿದ ಹೈಕೋರ್ಟ್​

Spread the loveಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ಪವಿತ್ರಾ ಗೌಡ, ನಾಗರಾಜ್ ಮತ್ತು ಲಕ್ಷ್ಮಣ್​ಗೆ ವಾರಕ್ಕೊಮ್ಮೆ ಮನೆಯಿಂದ ಊಟ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ