Breaking News

ಬಿಜೆಪಿಯಲ್ಲಿ ಕೇವಲ ಭ್ರಷ್ಟಾಚಾರ ಮಾಡುವವರಿಗೆ ಮಾತ್ರ ಅವಕಾಶ : ಸುರ್ಜೆವಾಲಾ

Spread the love

ಮೈಸೂರು : ಬಿಜೆಪಿಯಲ್ಲಿ ಕೇವಲ ಭ್ರಷ್ಟಾಚಾರ ಮಾಡುವವವರಿಗೆ ಮಾತ್ರ ಅವಕಾಶಗಳನ್ನು ನೀಡಲಾಗುತ್ತದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮರು ಸಂಘಟಿಸುವ ಕುರಿತು ಸಭೆ ನಡೆಸಿದ ಅವರು ಬಿಜೆಪಿ ಪಕ್ಷದ ಆಡಳಿತದ ಕುರಿತು ಕಿಡಿಕಾರಿದ್ದಾರೆ.

ಪೋನ್ ದುರ್ಬಳಕೆ ಸ್ಪೈ ಆರೋಪ ವಿಚಾರದಲ್ಲಿ ಮಾತನಾಡಿದ ಅವರು ಚುನಾಯಿತ ಸರ್ಕಾರವನ್ನು ಬೀಳಿಸಲು ಬಳಸಿದೆ ಎಂದು ಆರೋಪಿಸಿದರು, ಸರಕಾರ ಕಳೆದ ಎರಡು ವರ್ಷಗಳಿಂದ ಖಜಾನೆ ಲೂಟಿ ಮಾಡುವುದರಲ್ಲೇ ಕಳೆಯಿತು, ಜನರು ಪ್ರವಾಹದಿಂದ ಸಮಸ್ಯೆಗೆ ಒಳಗಾಗಿದ್ದಾರೆ ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ, ಬೆಳೆ ಹಾನಿಯಾಗಿ ಮನೆಗಳು ಹಾಳಾಗಿವೆ ಇಷ್ಟಾದರೂ ಪ್ರಧಾನಿ ನರೇಂದ್ರ ಮೋದಿ ಒಂದು ಬಾರಿಯಾದರೂ ರಾಜ್ಯಕ್ಕೆ ಬಂದರೆ ಎಂದು ಪ್ರಶ್ನಿಸಿದರು.

ರಾಜ್ಯದ ರೈತರಿಗೆ ಯಾವುದಾದರು ಅನುದಾನ ನೀಡಿದ್ದಾರೆಯೇ ಕೇವಲ ಗುಜರಾತ್ ಮತ್ತು ಬಿಹಾರಕ್ಕೆ ಮಾತ್ರ ಅನುದಾನ ನೀಡುತ್ತಾರೆ ಎಂದು ದೂರಿದರು.

ರಾಜ್ಯದಲ್ಲಿ ಜನರು ಸಾಯುತ್ತಿದ್ದಾರೆ ಆಕ್ಸಿಜನ್ ಸಿಗದೆ ರೆಮಿಡಿಸಿಯರ್ ಸಿಗದ ಜನರ ಸಮಸ್ಯೆಗೆ ಸಿಲುಕಿದ್ದಾರೆ, ಪ್ರಧಾನಿ ಎಲ್ಲಿ ಹೋಗಿದ್ದರು ನಡ್ಡಾ ಎಲ್ಲಿ ಹೋಗಿದ್ದರು ? ಯಡಿಯೂರಪ್ಪ ಬೊಮ್ಮಾಯಿ ಎಲ್ಲಿ ಹೋಗಿದ್ದಾರೆ ? ಅವರಿಗೆಲ್ಲಾ ಅಧಿಕಾರದ ದಾಹ ಅಷ್ಟೇ ಎಂದು ಗುಡುಗಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವುದೇ ನಮ್ಮ ಮೂಲ ಉದ್ದೇಶ ಎಂದು ತಿಳಿಸಿದರು.

ಸಿಬಿಐ ಇಡಿ ಸೇರಿ ಎಲ್ಲದರ ಮೇಲೆ ಬಿಜೆಪಿ ಸ್ಪೈ ಮಾಡುತ್ತಿದೆ, ಸಚಿವರ ಮನೆ ಸೇರಿ ಎಲ್ಲರೂ ಸ್ಪೈನಲ್ಲಿದ್ದಾರೆ, ಬಿಹಾರ ಮಣಿಪುರ ಸೇರಿ ಎಲ್ಲಾ ಕಡೆ ಇದೇ ರೀತಿ ಆಗುತ್ತಿದೆ.

ತಮ್ಮ ನಾಯಕರನ್ನು ಕಡೆಗಣಿಸುವುದರಲ್ಲಿ ಮೋದಿ ಅಮಿತ್ ಷಾ ಎತ್ತಿದ ಕೈ ಹಿರಿಯರನ್ನು ಅವರು ಇಷ್ಟಪಡುವುದಿಲ್ಲ ಯಾರಾದರೂ ತಮ್ಮ ತಂದೆ ತಾಯಿ ತಾತಾ ಅಜ್ಜಿ ಸೇರಿ ಹಿರಿಯರನ್ನು ಮನೆಯಿಂದ ಆಚೆ ಹಾಕುತ್ತಾರಾ ? ಇದಕ್ಕೆ ನಮ್ಮ ಸಂಸ್ಕೃತಿಯಲ್ಲಿ ಏನು ಹೇಳುತ್ತಾರೆ ? ಅದನ್ನು ನಾನು ನನ್ನ ಬಾಯಿಂದ ಹೇಳುವುದಿಲ್ಲ ಅಡ್ವಾಣಿ ಮುರುಳಿ ಮನೋಹರ ಜೋಷಿ ಸೇರಿ ಹಲವು ಹಿರಿಯ ನಾಯಕರ ಉದಾಹರಣೆಯೇ ಸಾಕು ಇದೀಗ ಯಡಿಯೂರಪ್ಪನವರು ಸೇರಿದ್ದಾರೆ ಎಂದರು. ಅವರ ಸಂಸ್ಕೃತಿಯಲ್ಲೇ ಭ್ರಷ್ಟಾಚಾರ ತುಂಬಿಕೊಂಡಿದೆ ಮುಂದೆಯೂ ಇದೆ ರೀತಿ ಮುಂದುವರೆಯುತ್ತದೆ ಹಾಗಾಗಿ ಬಿಜೆಪಿಯಲ್ಲಿ ಭ್ರಷ್ಟಾಚಾರ ಮಾಡುವವರಿಗೆ ಮಾತ್ರ ಅವಕಾಶಗಳು ಸಿಗುತ್ತವೆ ಎಂದು ಕಿಡಿಕಾರಿದ್ದಾರೆ.


Spread the love

About Laxminews 24x7

Check Also

ವಿಜಯಪುರದಲ್ಲಿ ಟ್ರ‍್ಯಾಕರ್, ಜಿಪಿಎಸ್ ಹೊಂದಿದ್ದ ರಣಹದ್ದು ಪತ್ತೆ

Spread the love ವಿಜಯಪುರ: ಜಿಲ್ಲೆಯಲ್ಲಿ ಚಡಚಣ (Chadachana) ತಾಲೂಕಿನ ಗೋಟ್ಯಾಳ ಗ್ರಾಮದ ತೋಟದಲ್ಲಿ ಟ್ರ‍್ಯಾಕರ್, ಜಿಪಿಎಸ್ ಹೊಂದಿದ್ದ ರಣಹದ್ದುವೊಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ