Breaking News

ಪಪುವಾ ನ್ಯೂಗಿನಿಯಲ್ಲಿ, ಶೇಕಡಾ 70 ರಷ್ಟು ಮಹಿಳೆಯರು ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗುತ್ತಾರೆ.

Spread the love

ನವದೆಹಲಿ: Bizarre Tradition- ಪ್ರಪಂಚದ ವಿವಿಧ ಪ್ರದೇಶಗಳಲ್ಲಿ ಅನೇಕ ರೀತಿಯ ವಿಚಿತ್ರ ಸಂಪ್ರದಾಯಗಳು ಜಾರಿಯಲ್ಲಿದ್ದು, ಅವು ಇಂದಿನ ಕಾಲದಲ್ಲಿ ಮನುಕುಳವನ್ನೇ ಬೆಚ್ಚಿಬೀಳಿಸುತ್ತವೆ. ಇಂತಹ ವಿಚಿತ್ರ ಸಂಪ್ರದಾಯಗಳ ಬಗ್ಗೆ ಆಗಾಗ ಸುದ್ದಿ ಹೊರಬರುತ್ತಲೇ ಇರುತ್ತವೆ. ಸಮಾಜದಲ್ಲಿ ಋತುಚಕ್ರ ಮತ್ತು ಲೈಂಗಿಕತೆಯ ಬಗ್ಗೆ ಅನೇಕ ಅಪನಂಬಿಕೆಗಳು ಮತ್ತು ಮಿಥ್ ಗಳಿವೆ.  ಇಂತಹುದೇ ಒಂದು ಮೈನಡುಕ ಹುಟ್ಟಿಸುವ ವಿಚಿತ್ರ ಸಂಪ್ರದಾಯದ ಕುಳಿತು ತಿಳಿದುಕೊಳ್ಳೋಣ ಬನ್ನಿ.ಶಾರೀರಿಕ ಸಂಬಂಧ ಬೆಳೆಸಲು ಸಂಪ್ರದಾಯ
ಸಮಾಜದಲ್ಲಿ ಋತುಚಕ್ರಕ್ಕೆ ಸಂಬಂಧಿಸಿದಂತೆ ಹಲವು ವಿಚಿತ್ರ ರೂಢಿಗಳು ಕೇಳಿಬರುತ್ತವೆ. ಹಲವೆಡೆ ಈ ಅವಧಿಯಲ್ಲಿ ಯುವತಿಯರ ಮೇಲೆ ಅತ್ಯಾಚಾರ ಎಸಗಲಾಗುತ್ತಿದ್ದರೆ, ಕೆಲ ಕಡೆ ಯುವತಿಯರನ್ನು ಅಸ್ಪೃಶ್ಯರಂತೆ ನೋಡಲಾಗುತ್ತದೆ.

ಆದರೆ ವಿಶ್ವದ ಒಂದು ಭಾಗದಲ್ಲಿ ಶಾರೀರಿಕ ಸಂಬಂಧ ಬೆಸೆಯಲು ವಿಚಿತ್ರ ರೂಢಿಯೊಂದು ಇಂದಿಗೂ ಕೂಡ ಜಾರಿಯಲ್ಲಿದೆ. ಹೌದು ನಾವು ಹೇಳುತ್ತಿರುವುದು ಆಸ್ಟ್ರೇಲಿಯಾದ ಪಪುವಾ ನ್ಯೂ ಗಿನಿಯಾ ಬುಡಕಟ್ಟು ಜನಾಂಗದವರ ಬಗ್ಗೆ. ಇಲ್ಲಿ ಶಾರೀರಿಕ ಸಂಬಂಧಕ್ಕೆ ಸಂಬಂಧಿಸಿದಂತೆ ವಿಚಿತ್ರ ಪರಂಪರೆ (Bizarre Tradition) ರೂಢಿಯಲ್ಲಿದೆ.

Bizarre Tradition: ಮಹಿಳೆಯರ ಪಾಲಿಗೆ ಅತ್ಯಂತ ಅಪಾಯಕಾರಿ ಈ ದೇಶ, ಕಳವಳ ವ್ಯಕ್ತಪಡಿಸಿದ UNICEF

ಶೇ.70 ರಷ್ಟು ಮಹಿಳೆಯರ ಮೇಲೆ ಅತ್ಯಾಚಾರ
ಪಪುವಾ ನ್ಯೂಗಿನಿಯಲ್ಲಿ, ಶೇಕಡಾ 70 ರಷ್ಟು ಮಹಿಳೆಯರು ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗುತ್ತಾರೆ. ಈ ಬುಡಕಟ್ಟು ಜನಾಂಗದವರಲ್ಲಿ ಲೈಂಗಿಕತೆಯ ಬಗ್ಗೆ ವಿಭಿನ್ನ ರೀತಿಯ  ರೂಢಿ ಇಂದಿಗೂ ಕೂಡ ಜಾರಿಯಲ್ಲಿದೆ. ಪುರುಷರು ಬಯಸಿದರೆ, ಅವರು ಇಲ್ಲಿ ಎಲ್ಲಿಯಾದರೂ ಯಾರೊಂದಿಗೂ ಶಾರೀರಿಕ ಸಂಬಂಧ ಬೆಳೆಸುವ ಸ್ವಾತಂತ್ರ್ಯ ಹೊಂದಿದ್ದರೆ. ಇಲ್ಲಿ ಲೈಂಗಿಕತೆಗೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಇಲ್ಲಿ ಯಾವುದೇ ವಯಸ್ಸಿನ ವ್ಯಕ್ತಿಯು ಯಾವುದೇ ವಯಸ್ಸಿನ ಮಹಿಳೆಯೊಂದಿಗೆ ಸಂಬಂಧ ಬೆಳೆಸಬಹುದು.ಈ ಬುಡಕಟ್ಟು ಜನಾಂಗದಲ್ಲಿ  ಮಹಿಳೆಯರ ಮೇಲೆಯೇ ಸಂಪೂರ್ಣ ಜವಾಬ್ದಾರಿ ಇರುತ್ತದೆ. ಲೈಂಗಿಕತೆ ಅಥವಾ ಅತ್ಯಾಚಾರದಿಂದಾಗಿ ಮಹಿಳೆ ಗರ್ಭಿಣಿಯಾಗಿದ್ದರೆ, ಅವಳ ತಂದೆ ಅಥವಾ ಅತ್ಯಾಚಾರಿಗಳು ಅದಕ್ಕೆ ಹೊಣೆಗಾರರಲ್ಲ. ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿ ಮಹಿಳೆಗೆ ಬಿಟ್ಟ ವಿಷಯ. ಸಾಮಾನ್ಯವಾಗಿ, ಮಹಿಳೆಯರ ಋತುಚಕ್ರದ ಅವಧಿಯಲ್ಲಿ ಶಾರೀರಿಕ ಸಂಬಂಧ ಬೆಳೆಸುವುದರ ಮೇಲೆ ನಿಷೇಧವಿರುತ್ತದೆ. ಆದರೆ ಇಲ್ಲಿ ಅದು ಅನ್ವಯಿಸುವುದಿಲ್ಲ . ಇಲ್ಲಿ ಮಹಿಳೆಯ ಸ್ಥಾನ ಏನೇ ಇರಲಿ, ಪುರುಷನು ಆಕೆಯೊಂದಿಗೆ ಕ್ರೂರವಾಗಿ ಶಾರೀರಿಕ ಸಂಬಂಧ ಬೆಳೆಸಬಹುದು.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ