ಹುಬ್ಬಳ್ಳಿ (ಡಿ. 17): ಕೊರೋನಾ ಲಾಕ್ ಡೌನ್ ನಂತರ ದಿನ ಕಳೆದಂತೆ ದೂರ ಮಾರ್ಗದ ಬಸ್ಸುಗಳ ಪ್ರಯಾಣಿಕರ ಸಂಖ್ಯೆಯಲ್ಲಿ ಚೇತರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ಒಂಭತ್ತು ತಿಂಗಳಿಂದ ಸ್ಥಗಿತಗೊಂಡಿದ್ದ ಹೈದರಾಬಾದ್, ಸೊಲ್ಲಾಪುರ, ಮಂಗಳೂರು ಮತ್ತು ಬೆಂಗಳೂರಿಗೆ ಮತ್ತಷ್ಟು ಸ್ಲೀಪರ್, ವೋಲ್ವೊ ಮತ್ತು ರಾಜಹಂಸ ಬಸ್ಸುಗಳ ಸಂಚಾರವನ್ನು ಪುನರಾರಂಭಿಸಲಾಗಿದೆ. ಈ ಬಸ್ಗಳು ಗೋಕುಲ ರಸ್ತೆಯ ಬಸ್ ನಿಲ್ದಾಣದಿಂದ ಹೊರಡುತ್ತವೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ವಿವಿಧ ಸ್ಥಳಗಳಿಗೆ ಹೊರಡುವ ಬಸ್ಸುಗಳ ಸಾರಿಗೆ ವರ್ಗ, ಹೊರಡುವ ಸಮಯ, ಮಾರ್ಗ ಹಾಗೂ ಪ್ರಯಾಣ ದರದ ವಿವರಗಳು ಕೆಳಕಂಡಂತಿದೆಮುಂಗಡ ಬುಕಿಂಗ್, ರಿಯಾಯಿತಿ:
ಈ ಬಸ್ಸುಗಳಿಗೆ ಆನ್ ಲೈನ್, ಮತ್ತು ಮುಂಗಡ ಬುಕಿಂಗ್ ಕೌಂಟರ್ಗಳ ಮೂಲಕ ಮುಂಚಿತವಾಗಿ ಆಸನಗಳನ್ನು ಕಾಯ್ದಿರಿಸುವ ಅವಕಾಶ ಕಲ್ಪಿಸಲಾಗಿದೆ. 4 ಅಥವಾ 4ಕ್ಕಿಂತ ಹೆಚ್ಚು ಆಸನಗಳಿಗೆ ಒಂದೇ ಟಿಕೆಟ್ ಪಡೆದುಕೊಂಡರೆ ಮೂಲ ಪ್ರಯಾಣ ದರದಲ್ಲಿ ಶೇ.5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹೋಗುವ ಮತ್ತು ಬರುವ ಪ್ರಯಾಣಕ್ಕೆ ಒಮ್ಮೆಗೇ ಟಿಕೆಟ್ ಪಡೆದರೆ ಬರುವಾಗಿನ ಪ್ರಯಾಣಕ್ಕೆ ಮೂಲ ಪ್ರಯಾಣ ದರದಲ್ಲಿ ಶೇ.10 ರಷ್ಟು ರಿಯಾಯಿತಿ ಸಿಗುತ್ತದೆ.
ಲಾಕ್ ಡೌನ್ ಪೂರ್ವದಲ್ಲಿ ಹುಬ್ಬಳ್ಳಿಯಿಂದ ನೆರೆಯ ರಾಜ್ಯಗಳಿಗೆ ವೋಲ್ವೊ, ಸ್ಲೀಪರ್, ರಾಜಹಂಸ ಹಾಗೂ ವೇಗದೂತ ಬಸ್ಸುಗಳು ಸೇರಿದಂತೆ ಒಟ್ಟು 65 ಬಸ್ಸುಗಳು ಸಂಚರಿಸುತ್ತಿದ್ದವು. ಲಾಕ್ ಡೌನ್ ನಂತರದಲ್ಲಿ ಹಂತ ಹಂತವಾಗಿ 53 ಬಸ್ಸುಗಳ ಸಂಚಾರವನ್ನು ಮರು ಪ್ರಾರಂಭಿಸಲಾಗಿತ್ತು. ಈಗ ಮತ್ತೆ ಹತ್ತು ಬಸ್ಸುಗಳನ್ನು ಪುನರಾರಂಭಿಸಲಾಗಿದೆ.