ಬೆಳಗಾವಿ – ಮಹಾರಾಷ್ಟ್ರ ಏಕೀಕರಣ ಸಮಿತಿಯ ಪುಂಡರಿಗೆ ಮಸಿ ಬಳಿದ ಕನ್ನಡ ಕಾರ್ಯಕರ್ತ ಸಂಪತ್ ಕುಮಾರ ದೇಸಾಯಿವಿರುದ್ಧ ಕೊಲೆ ಯತ್ನ (ಸೆ.307) ಪ್ರಕರಣವನ್ನು
ದಾಖಲಿಸಿದ ಪೋಲೀಸರ ವಿರುದ್ಧ ಕ್ರಮಕೈಕೊಳ್ಳಬೇಕು ಹಾಗೂ ಪ್ರಕರಣವನ್ನು
ವಾಪಸ್ ಪಡೆಯಬೇಕೆಂದು ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಆಗ್ರಹಿಸಿದೆ.
ರಾಜ್ಯ ಗೃಹಸಚಿವ ಅರಗ ಙ್ಞಾನೇಂದ್ರ ಅವರನ್ನು ಮಂಗಳವಾರ ರಾತ್ರಿ ಭೇಟಿ ಮಾಡಿದ ಕ್ರಿಯಾ ಸಮಿತಿ ನಿಯೋಗ, ಈ ಸಂಬಂಧ ಮನವಿಯನ್ನು ಸಲ್ಲಿಸಿತು.
ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ಕೊಲೆ ಯತ್ನದ ಪ್ರಕರಣವನ್ನು ದಾಖಲಿಸಿರುವ ಪೋಲೀಸರ ವಿರುದ್ಧ ಕ್ರಮ ಕೈಕೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕನ್ನಡ ಹೋರಾಟಗಾರ ಸಾಗರ್ ಬೋರಗಲ್ಲ, ರಜತ್ ಅಂಕಲೆ,
ಆನಂದ ಹುಲಬತ್ತೆ ಹಾಗೂ ವಿರೇಂದ್ರ ಗೋಬರಿ ಇದ್ದರು.
ಈ ಸಂಬಂಧ ಪರಿಶೀಲಿಸಿ ಕ್ರಮ ಕೈಕೊಳ್ಳುವುದಾಗಿ ಗೃಹಸಚಿವರು ಭರವಸೆ ನೀಡಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕೂಡ ಈ ಸಂದರ್ಭದಲ್ಲಿದ್ದರು.