ಉಡುಪಿ: ರಸ್ತೆಯಲ್ಲಿದ್ದ ಮರಳನ್ನು ಕಾಪುವಿನ ಜನಪ್ರತಿನಿಧಿಗಳು ಮುಂದೆ ನಿಂತು ಸ್ವಚ್ಛಗೊಳಿಸಿದ್ದಾರೆ. ಭಾರೀ ಮಳೆಯಾಗುತ್ತಿರುವುದರಿಂದ ಅರಬ್ಬಿ ಸಮುದ್ರದ ಅಬ್ಬರ ಕೂಡ ಜಾಸ್ತಿಯಾಗಿದೆ. ಕಾಪು ತಾಲೂಕಿನ ಉದ್ಯಾವರ ತೀರದಲ್ಲಿ ಕಡಲು ಕೊರೆತದಿಂದ ರಸ್ತೆ ಸಂಪರ್ಕ ಸಮಸ್ಯೆ ಉಂಟಾಗಿದೆ.ಭಾರಿ ಮಳೆ ಹಿನ್ನೆಲೆ ಕನಕೋಡ ಉದ್ಯಾವರ ಪಡುಕರೆಯಲ್ಲಿ ಕಡಲಬ್ಬರ ಜಾಸ್ತಿಯಾಗಿದ್ದು, ಕಡಲಿನ ಆರ್ಭಟಕ್ಕೆ ರಾಶಿ ರಾಶಿ ಮರಳು ದಡಕ್ಕೆ ಉಕ್ಕಿ ಬರುತ್ತಿದೆ. ಅಲೆಗಳ ಜೊತೆ ಭಾರಿ ಪ್ರಮಾಣದ ಮರಳು ಕೂಡ ಮೀನುಗಾರಿಕಾ ರಸ್ತೆಯನ್ನು ಸೇರುತ್ತಿದೆ. ಕಡಲು ಉಕ್ಕಿದ ಹಿನ್ನಲೆ ಕೈಪುಂಜಾಲು-ಮಲ್ಪೆ ಸಂಪರ್ಕ ರಸ್ತೆ ಮೇಲೆ ಮರಳು ರಾಶಿ ಬಿದ್ದಿದೆ.
ಸಮುದ್ರದ ಮರಳು ತುಂಬಿ ರಸ್ತೆ ಸಂಪರ್ಕಕ್ಕೆ ಸಮಸ್ಯೆ ಉಂಟಾಗಿದ್ದು, ಬಸ್, ರಿಕ್ಷಾ, ಟೆಂಪೋ ಹಾಗೂ ದ್ವಿಚಕ್ರ ವಾಹನ ಸಂಚಾರ ಸ್ಥಗಿತವಾಗಿದೆ. ಇಂದು ಭಾನುವಾರ ಆಗಿರೋದ್ರಿಂದ ಪಂಚಾಯತ್ ನ ಕಾರ್ಮಿಕರು ರಜೆಯಲ್ಲಿದ್ದಾರೆ. ಹೀಗಾಗಿ ಉದ್ಯಾವರ ಗ್ರಾಮ ಪಂಚಾಯತ್ ನ ಸದಸ್ಯರೇ ಜೆಸಿಬಿ ಹಿಡಿದು ರಸ್ತೆಗಿಳಿದಿದ್ದಾರೆ.
ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯ ಕೃಷ್ಣ ಜಿ.ಕೋಟ್ಯಾನ್ ಮತ್ತು ರವಿ ಪಡುಕರೆ ಜೆಸಿಬಿ ಎಲ್ಲಿ ರಸ್ತೆಯಲ್ಲಿ ಬಿದ್ದಿರುವ ಮರಳ ರಾಶಿಯನ್ನು ಸ್ವಚ್ಛ ಮಾಡಿದ್ದಾರೆ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಜನಪ್ರತಿನಿಧಿಗಳಿಂದ ನಡೆದ ರಸ್ತೆ ಸ್ವಚ್ಛತಾ ಕಾರ್ಯ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.
ರವಿ ಮತ್ತು ಕೃಷ್ಣ ಮಾತನಾಡಿ, ಜೆಸಿಬಿ ಚಾಲಕರು ರಜೆಯಲ್ಲಿದ್ದಾರೆ. ರಸ್ತೆ ಸಂಪರ್ಕ ಕಡಿತ ಆಗಿರುವುದರಿಂದ ಓಡಾಟಕ್ಕೆ ಬಹಳ ಕಷ್ಟ ಆಗುತ್ತಿತ್ತು.