ಕಲಬುರಗಿ: ಫಾದರ್ನಿಂದ ಲೈಂಗಿಕ ಕಿರುಕುಳ ಆರೋಪಿಸಿ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ಮಹಿಳೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಲಬುರಗಿ ನಗರದ ಪೊಲೀಸ್ ಕಮೀಷನರ್ ಕಚೇರಿ ಮುಂದೆ ನಡೆದಿದೆ.
ಕಲಬುರಗಿ ನಗರದ ಸೆಂಟ್ ಮೇರಿ ಕ್ಯಾಥೆಡ್ರಲ್ ಚರ್ಚ್ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಸಂತ್ರಸ್ತೆಗೆ ಚರ್ಚ್ನ ಫಾದರ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ಥೆಗೆ ಆರೋಪಿಸಿದ್ದಾರೆ.
ಒಮ್ಮೆ ಚರ್ಚ್ನ ಫಾದರ್ ಕ್ಲೀವನ್ ಎಂಬುವವರು ರೂಂ ಕ್ಲೀನ್ ಮಾಡಲು ಕರೆದು ಸಂತ್ರಸ್ತೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮತ್ತೊಂದಡೆ ಸಿಸ್ಟರ್ ಅಂಥೋನಿ ಮೇರಿ ಅನ್ನೋರು ಬಾಧಿತಳ ಮೇಲೆ ನಕಲಿ ಪೇಸ್ ಬುಕ್ ಖಾತೆ ಸೃಷ್ಟಿಸಿರುವ ಆರೋಪದಡಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಸಿಸಿಎನ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಬಗ್ಗೆ ವಿಚಾರಣೆಗೆ ಸಂತ್ರಸ್ತೆಯನ್ನು ಸಿಸಿಎನ್ ಪೊಲೀಸರು ಕರೆದಿದ್ರು. ಈ ವೇಳೆ ನನಗೆ ನ್ಯಾಯ ಸಿಗುತ್ತಿಲ್ಲ ಅಂತಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಸಂತ್ರಸ್ತೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.