ಡಿಜಿಟಲ್ ಡೆಸ್ಕ್: ದೇಶದಲ್ಲಿ ಈಗಾಗ್ಲೇ ಐಪಿಎಲ್ ಜ್ವರ ಶುರುವಾಗಿದೆ. ಇನ್ನು ಪಿಎಲ್ ಟೂರ್ನಿಯ ನೇರಪ್ರಸಾರ ಹಕ್ಕನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಪಡೆದುಕೊಂಡಿರುವುದು. ಬರೋಬ್ಬರಿ 16,347.5 ಕೋಟಿ ರೂಪಾಯಿ ಕೊಟ್ಟು 5 ವರ್ಷಗಳಿಗೆ ಐಪಿಎಲ್ ಪಂದ್ಯಗಳ ನೇರಪ್ರಸಾರ ಹಕ್ಕು ಪಡೆದ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಸಹಿತ ಒಟ್ಟು 8 ಭಾಷೆಗಳಲ್ಲಿ ಐಪಿಎಲ್ ಪಂದ್ಯಗಳ ವೀಕ್ಷಕ ವಿವರಣೆಯನ್ನ ನೀಡಲು ಸಿದ್ಧವಾಗಿದೆ.
ಹಾಗಾಗಿ ತನ್ನ ನೆಟ್‌ವರ್ಕ್‌ನ ಹಲವು ರಾಷ್ಟ್ರೀಯ ಮತ್ತು ಪ್ರಾದೇಶಿಕ ಚಾನಲ್‌ಗಳಲ್ಲೂ ಪಂದ್ಯಗಳನ್ನ ನೇರಪ್ರಸಾರ ಮಾಡಲಿದೆ. ಹಾಗಾದ್ರೆ, ಐಪಿಎಲ್ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಯಾವೆಲ್ಲ ಚಾನಲ್‌ಗಳಲ್ಲಿ ನೇರಪ್ರಸಾರ ಕಾಣಲಿವೆ ಎನ್ನುವ ವಿವರ ಇಲ್ಲಿದೆ ನೋಡಿ.
ಇಂಗ್ಲಿಷ್: ಸ್ಟಾರ್ ಸ್ಪೋರ್ಟ್ಸ್ 1 (ಎಸ್‌ಡಿ, ಎಚ್‌ಡಿ), ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್ (ಎಸ್‌ಡಿ, ಎಚ್‌ಡಿ).
ಕನ್ನಡ: ಸ್ಟಾರ್ ಸ್ಪೋರ್ಟ್ಸ್ ಕನ್ನಡ (ಪ್ರತಿದಿನ), ಸ್ಟಾರ್ ಸುವರ್ಣ-ಎಸ್‌ಡಿ, ಎಚ್‌ಡಿ (ಪ್ರತಿ ಭಾನುವಾರ).
ಹಿಂದಿ: ಸ್ಟಾರ್ ಸ್ಪೋರ್ಟ್ಸ್ ಹಿಂದಿ (ಎಚ್‌ಡಿ, ಎಸ್‌ಡಿ), ಸ್ಟಾರ್ ಸ್ಪೋರ್ಟ್ಸ್ ಫಸ್ಟ್.
ತೆಲುಗು: ಸ್ಟಾರ್ ಸ್ಪೋರ್ಟ್ಸ್ ತೆಲುಗು (ಪ್ರತಿದಿನ), ಮಾ ಮೂವಿಸ್-ಎಸ್‌ಡಿ, ಎಚ್‌ಡಿ (ಪ್ರತಿ ಭಾನುವಾರ).
ಬೆಂಗಾಲಿ: ಸ್ಟಾರ್ ಸ್ಪೋರ್ಟ್ಸ್ ಬಾಂಗ್ಲಾ (ಪ್ರತಿದಿನ), ಜಲ್ಶಾ ಮೂವೀಸ್-ಎಸ್‌ಡಿ, ಎಚ್‌ಡಿ (ಪ್ರತಿ ಭಾನುವಾರ).
ತಮಿಳು: ಸ್ಟಾರ್ ಸ್ಪೋರ್ಟ್ಸ್ ತಮಿಳ್ (ಪ್ರತಿದಿನ), ವಿಜಯ್ ಸೂಪರ್-ಎಸ್‌ಡಿ (ಪ್ರತಿ ಭಾನುವಾರ).
ಮಲಯಾಳಂ: ಏಷ್ಯಾನೆಟ್ ಪ್ಲಸ್-ಎಸ್‌ಡಿ (ಪ್ರತಿ ಭಾನುವಾರ).
ಮರಾಠಿ: ಸ್ಟಾರ್ ಪ್ರವಾಹ್-ಎಸ್‌ಡಿ, ಎಚ್‌ಡಿ (ಪ್ರತಿ ಭಾನುವಾರ).
ಲೈವ್ ಸ್ಟ್ರೀಮಿಂಗ್: ಡಿಸ್ನಿ+ ಹಾಟ್‌ಸ್ಟಾರ್.