Breaking News

ಕಿತ್ತೂರು ರಾಣಿ ಚೆನ್ನಮ್ಮ ಕನ್ನಡ ನಾಟಕವನ್ನು ಪ್ರದರ್ಶಿಸುವ ಬೃಹತ್ ಯೋಜನೆಯಲ್ಲಿ ರಂಗಾಯಣ ತಂಡ ಕೆಲಸ ಮಾಡುತ್ತಿದೆ.

Spread the love

ಧಾರವಾಡ, ಆಗಸ್ಟ್‌, 12: ಮಹಾಮಾರಿ ಕೊರೊನಾ ಸಂದರ್ಭದಲ್ಲಿ ಹಿನ್ನಡೆ ಅನುಭವಿಸಿದ ಧಾರವಾಡ ರಂಗಾಯಣ ಮತ್ತೆ ಕಾರ್ಯಪ್ರವೃತ್ತವಾಗಿದೆ. 18ನೇ ಶತಮಾನದ ರಾಣಿಯರ ಚಿತ್ರಣವನ್ನು ರಂಗಭೂಮಿ ಮೇಲೆ ತರುವ ಪ್ರಯತ್ನಕ್ಕೆ ಮುಂದಾಗಿದೆ. ಕಿತ್ತೂರು ರಾಣಿ ಚೆನ್ನಮ್ಮ ಕನ್ನಡ ನಾಟಕವನ್ನು ಪ್ರದರ್ಶಿಸುವ ಬೃಹತ್ ಯೋಜನೆಯಲ್ಲಿ ರಂಗಾಯಣ ತಂಡ ಕೆಲಸ ಮಾಡುತ್ತಿದೆ.

 

ನಾಟಕವು ಸ್ವಾತಂತ್ರ್ಯ ಹೋರಾಟ ಮತ್ತು ಚೆನ್ನಮ್ಮನ ಆಡಳಿತದ ದೃಶ್ಯಗಳನ್ನು ಮರುಸೃಷ್ಟಿಸುತ್ತದೆ.

 

ನಿಜವಾದ ಕುದುರೆ, ಆನೆಗಳು ಹಾಗೂ ಸೈನಿಕರನ್ನು ವೀಕ್ಷಕರ ಕಣ್ಣೆದುರು ನಾಟಕದ ಮೂಲಕ ತಂದು ನಿಲ್ಲಿಸುವ ಹೊಸ ಪ್ರಯೋಗಕ್ಕೆ ವಿದ್ಯಾಕಾಶಿಯ ರಂಗಾಯಣ ಸಜ್ಜಾಗಿದೆ. ಮರಾಠಿ ಮೆಗಾ ಡ್ರಾಮಾ ‘ಜನತಾ ರಾಜ’ ಮಾದರಿಯಲ್ಲಿ ಈ ಯೋಜನೆ ಇರಲಿದೆ. ಕುದುರೆ, ಆನೆ, ಒಂಟೆಗಳಲ್ಲದೆ 150 ಕಲಾವಿದರನ್ನು ವೇದಿಕೆಗೆ ಕರೆತರಲಾಗಿದೆ. ಶಿವಶಾಹಿರ್ ಬಾಬಾಸಾಹೇಬ್ ಪುರಂದರೆ ಬರೆದು ನಿರ್ದೇಶಿಸಿದ ‘ಜನತಾ ರಾಜ'(ಬುದ್ಧಿವಂತ ರಾಜ) ಐತಿಹಾಸಿಕ ನಾಟಕವಾಗಿದೆ. ಇದು ರಾಷ್ಟ್ರೀಯ ಐಕಾನ್‌ ಆಗಿರುವ ಛತ್ರಪತಿ ಶಿವಾಜಿ ಅವರ ಜೀವನವನ್ನು ಚಿತ್ರಿಸುತ್ತದೆ.

 

ಮೊದಲ ಪ್ರದರ್ಶನವನ್ನು ಏಪ್ರಿಲ್ 14, 1984ರಂದು ಪುಣೆಯಲ್ಲಿ ಪ್ರದರ್ಶಿಸಲಾಯಿತು. ಇದುವರೆಗೆ ದೇಶಾದ್ಯಂತ 1,550 ಪ್ರದರ್ಶನಗಳನ್ನು ಪ್ರದರ್ಶಿಸಲಾಗಿದೆ. ಅದರ ಯಶಸ್ಸಿನಿಂದ ಪ್ರೇರಿತರಾದ ರಂಗಕರ್ಮಿ ಏಣಗಿ ಬಾಳಪ್ಪ ಅವರ ಪುತ್ರ ನಟರಾಜ್ ಏಣಗಿ ಅವರು ಧಾರವಾಡ ರಂಗಾಯಣ ನಿರ್ದೇಶಕರಾಗಿದ್ದಾಗ, ಇದೇ ರೀತಿಯ ನಾಟಕ ಪ್ರದರ್ಶಿಸುವ ಕನಸು ಕಂಡಿದ್ದರು. ಆದರೆ ಅವರ ಕನಸು ಕನಸಾಗಿಯೇ ಉಳಿಯಿತು ಮತ್ತು ಅವರು ಅನಾರೋಗ್ಯದಿಂದ ನಿಧನರಾದರು.

 

ಇದೀಗ ನಟರಾಜ್ ಅವರ ಕನಸನ್ನು ನನಸು ಮಾಡಲು ಧಾರವಾಡ ರಂಗಾಯಣದ ಹಾಲಿ ನಿರ್ದೇಶಕ ರಮೇಶ ಪರ್ವಿನಾಯ್ಕರ್ ಮುಂದಾಗಿದ್ದಾರೆ. ಪರ್ವಿನಾಯ್ಕರ್ ಅವರ ಮಹತ್ವಾಕಾಂಕ್ಷೆಯ ಯೋಜನೆ‌ ಮೂರು ತಿಂಗಳ ತರಬೇತಿಯನ್ನು ಹೊಂದಿದ್ದು, ಏಣಗಿ ನಟರಾಜ ಅವರ ಕನಸನ್ನು ನನಸು ಮಾಡಲು ಪಣ ತೊಟ್ಟು ನಿಂತಿದ್ದಾರೆ. ಇದೀಗ ಹಣದ ಕೊರತೆ ಉಂಟಾಗಿದ್ದು, ಅವರು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯ ಅಡಿಯಲ್ಲಿ ಆರ್ಥಿಕ ಸಹಾಯವನ್ನು ಬಯಸುತ್ತಿದ್ದಾರೆ.

 

ಡಿಸೆಂಬರ್‌ನಲ್ಲಿ ನಾಟಕವನ್ನು ಪ್ರದರ್ಶಿಸಲು ನಿರ್ಧರಿಸಿದ್ದಾರೆ. ಯೋಜನೆಗೆ ಆರ್ಥಿಕ ನೆರವು ಕೋರಿ ಮನವಿ ಸಲ್ಲಿಸುತ್ತಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉದಾಸೀನ ಧೋರಣೆಗೂ ಪರ್ವಿನಾಯ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಲಾವಿದರಿಗೆ ಸಂಭಾವನೆ ನೀಡಲು ರಂಗಾಯಣ ಪ್ರತಿ ತಿಂಗಳು 26 ಲಕ್ಷ ರೂಪಾಯಿ ವ್ಯಹಿಸಬೇಕಾಗುತ್ತದೆ. ಹಾಗಾಗಿ ಪ್ರಭಾವಿ ರಾಜಕೀಯ ಮುಖಂಡರಿಂದ ಹಣ ಪಡೆಯಲು ಪ್ರಯತ್ನ ನಡೆಸಲಾಗುತ್ತಿದೆ ಎಂದರು.


Spread the love

About Laxminews 24x7

Check Also

ಮಾಜಿ ಕೇಂದ್ರ ಸಚಿವ ಬಿ. ಶಂಕರಾನಂದ 14 ನೇ ಪುಣ್ಯಸ್ಮರಣೆ 7 ಬಾರಿ ಸಂಸದರಾಗಿ ಮಾಡಿದ ಕಾರ್ಯ ಅಮೂಲ್ಯ – ಸಚಿವ ಸತೀಶ್ ಜಾರಕಿಹೊಳಿ

Spread the loveಮಾಜಿ ಕೇಂದ್ರ ಸಚಿವ ಬಿ. ಶಂಕರಾನಂದ 14 ನೇ ಪುಣ್ಯಸ್ಮರಣೆ 7 ಬಾರಿ ಸಂಸದರಾಗಿ ಮಾಡಿದ ಕಾರ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ