ಕಲಬುರಗಿ: ಕಟ್ಟಿಗೆಯಿಂದ ಹೊಡೆದು ಪತ್ನಿ ಮತ್ತು ಮಗಳನ್ನ ಕೊಲೆ ಮಾಡಿರುವ ಘಟನೆ ಸೇಡಂ ಪಟ್ಟಣದ ಈಶ್ವರ್ ನಗರದಲ್ಲಿ ನಡೆದಿದೆ.
ದಿಗಂಬರ್ 46 ಅನ್ನೋ ವ್ಯಕ್ತಿಯಿಂದ ಪತ್ನಿ ಮತ್ತು ಮಗಳನ್ನ ಕಗ್ಗೊಲೆ ಮಾಡಿದ್ದಾನೆ. ಜಗದೀಶ್ವರಿ 45, ಪ್ರಿಯಾಂಕಾ 11 ಕೊಲೆಯಾದ ದುರ್ದೈವಿಗಳು. ಮಧ್ಯರಾತ್ರಿ ಮನೆಯಲ್ಲಿ ಜಗಳ ತೆಗೆದು ಕೊಲೆ ಮಾಡಿದ್ದಾರೆ. ಪತ್ನಿ ಶೀಲ ಶಂಕಿಸಿ ಕೊಲೆ ಮಾಡಿರೋ ಶಂಕೆಯನ್ನ ಪೊಲೀಸರು ವ್ಯಕ್ತಪಡಿಸಿದ್ದಾರೆ.
ಆರೋಪಿ ದಿಗಂಬರ್ನನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7