Breaking News

ಹುಬ್ಬಳ್ಳಿ ಲವ್ ಜಿಹಾದ್ – ಅತ್ಯಾಚಾರ ಬಳಿಕ ಬೆದರಿಕೆಯೊಡ್ಡಿ 70 ಸಾವಿರಕ್ಕೂ ಅಧಿಕ ಹಣ ಪೀಕಿದ್ದ ಸಮೀರ್

Spread the love

ಹುಬ್ಬಳ್ಳಿ: ಲವ್ ಜಿಹಾದ್  ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಮ್ ಟ್ರೈನರ್‌ ಸಮೀರ್ ಅತ್ಯಾಚಾರದ ಬಳಿಕ ಬೆದರಿಕೆಯೊಡ್ಡಿ 70 ಸಾವಿರ ರೂ.ಗೂ ಅಧಿಕ ಹಣ ಪಡೆದಿರುವುದು ಬೆಳಕಿಗೆ ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದು, ಇದೀಗ ಮತ್ತೊಂದು ಇಂಟ್ರೇಸ್ಟಿಂಗ್‌ ವಿಚಾರ ಬಯಲಾಗಿದೆ. ಸಂತ್ರಸ್ತೆಗೆ ಬೆದರಿಕೆಯೊಡ್ಡಿ ಅತ್ಯಾಚಾರ ಮಾಡಿದ ಬಳಿಕ ಹಣಕ್ಕಾಗಿ ಬೇಡಿಕೆಯಿಡುತ್ತಿದ್ದ ಎನ್ನುವುದು ಗೊತ್ತಾಗಿದೆ. ಹಲವು ಬಾರಿ ಅತ್ಯಾಚಾರದ ಬಳಿಕ ಹಣವನ್ನು ಪಡೆದಿದ್ದಾನೆ. 5,000 ರೂ, 20,000 ರೂ, 25,000 ರೂ.ಯಂತೆ 70,000 ಸಾವಿರಕ್ಕೂ ಅಧಿಕ ಹಣವನ್ನು ಸಂತ್ರಸ್ತೆ ಸಮೀರ್‌ಗೆ ಕಳುಹಿಸಿದ್ದಾರೆ. ಇದರ ಸ್ಕ್ರೀನ್‌ಶಾಟ್‌ಗಳು ಇದೀಗ ಪತ್ತೆಯಾಗಿದೆ. 

ಇದಕ್ಕೂ ಮುನ್ನ ಪೊಲೀಸರು ಸಮೀರ್ ಮೊಬೈಲ್‌ನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಕೆಲ ರೋಚಕ ವಿಡಿಯೋಗಳು, ಯುವತಿಯರೊಂದಿಗಿನ ವಾಟ್ಸಪ್ ಚಾಟ್‌ಗಳು ಪತ್ತೆಯಾಗಿತ್ತು. ಮೊಬೈಲ್‌ನಲ್ಲಿ ಸಂತಸ್ತೆ ಗರ್ಭಪಾತದ ಮಾತ್ರೆ ತೆಗೆದುಕೊಳ್ಳುತ್ತಿರುವ ವಿಡಿಯೋ ಕೂಡ ಸಿಕ್ಕಿದ್ದವು.

ಸಮೀರ್ ಪ್ರತಿ ಸಾರಿ ಲೈಂಗಿಕ ದೌರ್ಜನ್ಯ ಎಸಗಿದ ಬಳಿಕ ಗರ್ಭಪಾತ ಮಾತ್ರೆ ಕೊಡಿಸುತ್ತಿದ್ದ. ಒಂದು ವೇಳೆ ನಿರಾಕರಿಸಿದ್ದರೆ ಒತ್ತಡ ಹೇರುತ್ತಿದ್ದ. ಅದಕ್ಕಾಗಿ ಮಾತ್ರೆ ತೆಗೆದುಕೊಳ್ಳುವಾಗ ವಿಡಿಯೋ ಮಾಡಿ ಕಳಿಸುವಂತೆ ಸಂತ್ರಸ್ತೆಗೆ ಸೂಚಿಸಿದ್ದ. ಇದೇ ರೀತಿ 8 ರಿಂದ 10 ಸಾರಿ ಗರ್ಭಪಾತದ ಮಾತ್ರೆ ನೀಡಿದ್ದ ಎನ್ನುವುದು ಮೊಬೈಲ್‌ನಿಂದ ಬಯಲಾಗಿತ್ತು.

ಈಗಾಗಲೇ ಸಂತ್ರಸ್ತ ಯುವತಿ ಹುಬ್ಬಳ್ಳಿ ವಿದ್ಯಾನಗರ ಠಾಣೆಯಲ್ಲಿ ಸಮೀರ್ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸಿದ್ದಾರೆ. ಇನ್ನೂ ಸಮೀರ್ ಕೂಡ ಕಿಡ್ನ್ಯಾಪ್‌ ಕೇಸ್ ದಾಖಲಿಸಿದ್ದಾನೆ.


Spread the love

About Laxminews 24x7

Check Also

ಧಾರವಾಡದಲ್ಲಿ ಬೀದಿಗೆ ಇಳಿದ ಮೆಕ್ಕೆ ಜೋಳ ಬೆಳೆದ ರೈತರು .

Spread the love ಧಾರವಾಡದಲ್ಲಿ ಬೀದಿಗೆ ಇಳಿದ ಮೆಕ್ಕೆ ಜೋಳ ಬೆಳೆದ ರೈತರು …….ಮುಗಿಯದ ಗೋವಿನ ಜೋಳ ಖರೀದಿ ಕೇಂದ್ರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ