Breaking News

ಬೆಳಗಾವಿ: ಸರ್ಕಾರಿ ಕಟ್ಟಡಗಳು ಹಾವು, ಚೇಳುಗಳಿಗೆ ಮೀಸಲು

Spread the love

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಹಲವು ಸರ್ಕಾರಿ ಕಟ್ಟಡಗಳು ಖಾಲಿ ಬಿದ್ದಿವೆ. ಮಾತ್ರವಲ್ಲ; ಹಲವು ಕಟ್ಟಡಗಳು ಹೊಸದಾಗಿ ನಿರ್ಮಿಸಿದ್ದರೂ ಉದ್ಘಾಟನೆ ಕಾಣದೇ ಜೇಡು ತಿನ್ನುತ್ತಿವೆ. ಇದಕ್ಕೆ ತದ್ವಿರುದ್ಧವಾಗಿ ಸರ್ಕಾರಿ ಕಚೇರಿಗಳು, ಶಾಲೆಗಳು, ಗ್ರಂಥಾಲಯ, ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ.

ಸರ್ಕಾರ ಒಂದೆಡೆ ತನ್ನದೇ ಕಟ್ಟಡಗಳನ್ನು ಪಾಳುಗೆಡವಿ ಇನ್ನೊಂದೆಡೆ ಬಾಡಿಗೆ ಕಟ್ಟಡಗಳನ್ನು ಆಶ್ರಯಿಸುತ್ತಿದೆ. ಒಂದೆಡೆ ವ್ಯರ್ಥ, ಇನ್ನೊಂದೆಡೆ ದುಂದುವೆಚ್ಚಕ್ಕೆ ಅಧಿಕಾರಿಗಳು ಕಾರಣವಾಗಿದ್ದಾರೆ.

ಬೆಳಗಾವಿಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಿಸಿದ ಕಲಾ ಮಂದಿರ ಉದ್ಘಾಟನೆಯಾಗಿ 10 ತಿಂಗಳಾದರೂ ಬಳಕೆಗೆ ಮುಕ್ತವಾಗಿಲ್ಲ. ಸುಸಜ್ಜಿತವಾದ ಸೌಕರ್ಯಗಳನ್ನು ಹೊಂದಿರುವ ಈ ಕಟ್ಟಡ ಬಳಕೆಯಾಗದ ಹಿನ್ನೆಲೆಯಲ್ಲಿ ದೂಳು ತಿನ್ನುತ್ತಿದೆ. ಕಟ್ಟಡದ ಆವರಣದಲ್ಲಿ ಕಸ ಬೆಳೆದಿದ್ದು, ಪೀಠೋಪಕರಣಗಳು ತುಕ್ಕು ಹಿಡಿಯುತ್ತಿವೆ. ₹47.83 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ 2025ರ ಏಪ್ರಿಲ್‌ 20ರಂದು ಉದ್ಘಾಟಿಸಿದ್ದರು.

ವಾಣಿಜ್ಯೋದ್ಯಮ ಚಟುವಟಿಕೆ ಜತೆಗೆ, ಸಾಂಸ್ಕೃತಿಕ ಚಟುವಟಿಕೆಗೂ ಉತ್ತೇಜನ ನೀಡುವುದಕ್ಕಾಗಿ ನಿರ್ಮಿಸಿದ ಕಲಾ ಮಂದಿರದ ನೆಲಮಹಡಿಯಲ್ಲಿ 19 ಮಳಿಗೆ, ಒಂದು ವಿಶಾಲವಾದ ಒಳಾಂಗಣ ವ್ಯಾಪಾರಿ ಕೇಂದ್ರವಿದೆ. ಮೊದಲ ಮಹಡಿಯಲ್ಲಿ ಏಳು ಮಳಿಗೆ, ದೊಡ್ಡ ತಿನಿಸು ಮಳಿಗೆ ಸಮುಚ್ಚಯವಿದ್ದು, ಎರಡನೇ ಮಹಡಿಯಲ್ಲಿ ಪ್ರತ್ಯೇಕವಾಗಿ ಎರಡು ಸಭಾಂಗಣಗಳಿವೆ. ಎಸ್ಕಲೇಟರ್‌ ಸೇರಿದಂತೆ ಆಧುನಿಕ ಸೌಕರ್ಯಗಳಿವೆ. ಎಲ್ಲವೂ ವ್ಯರ್ಥವಾಗಿದೆ.

ರಾಮತೀರ್ಥ ನಗರದಲ್ಲಿ ನಿರ್ಮಿಸಿರುವ ಸ್ವಾತಂತ್ರ್ಯ ಹೋರಾಟಗಾರ ಗಂಗಾಧರರಾವ್‌ ದೇಶಪಾಂಡೆ ಸ್ಮಾರಕ ಭವನ ಬಳಕೆಯಾಗದೆ ಧೂಳು ತಿನ್ನುತ್ತಿದೆ. ಮಹಾತ್ಮ ಗಾಂಧೀಜಿ ಅತ್ಯಾಪ್ತರಲ್ಲಿ ತಾಲ್ಲೂಕಿನ ಹುದಲಿಯ ಗಂಗಾಧರರಾವ್ ದೇಶಪಾಂಡೆ ಸಹ ಒಬ್ಬರು. 15 ಗುಂಟೆ ಜಾಗದಲ್ಲಿ ₹1 ಕೋಟಿ ವೆಚ್ಚದಲ್ಲಿ ಸ್ಮಾರಕ ಭವನದ ಕಟ್ಟಡ ನಿರ್ಮಾಣವಾಗಿದೆ.

ತಾಲ್ಲೂಕಿನ ಮಣ್ಣೂರಿನಲ್ಲಿ ಒಂದೇ ಕಡೆ ಡಿ.ಇಡಿ, ಬಿ.ಇಡಿ ಕೋರ್ಸ್‌ಗಳನ್ನು ನಡೆಸುವ ಉದ್ದೇಶದಿಂದ ರಾಜ್ಯ ಸರ್ಕಾರ 10 ಎಕರೆ ಜಾಗ ನೀಡಿತ್ತು. ಈ ಪೈಕಿ ಐದು ಎಕರೆಯಲ್ಲಿ ತಲೆ ಎತ್ತಿದ ಡಯಟ್ ಕಟ್ಟಡ ಬಳಕೆಯಾಗುತ್ತಿದೆ. ಉಳಿದ ಐದು ಎಕರೆಯಲ್ಲಿ ನಿರ್ಮಾಣವಾದ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ (ಸಿಟಿಇ) ಕಟ್ಟಡಗಳು ಪಾಳು ಬಿದ್ದಿವೆ. ಸಂಜೆಯಾಗುತ್ತಲೇ ಕಟ್ಟಡದೊಳಗೆ ಪ್ರವೇಶಿಸುತ್ತಿರುವ ಕಿಡಿಗೇಡಿಗಳು ಅಕ್ರಮ ಚಟುವಟಿಕೆ ನಡೆಸಿದ್ದಾರೆ.

ಪೊಲೀಸರಿಗೂ ಬೇಡ ಈ ಕಟ್ಟಡಗಳು: ಸವದತ್ತಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಾಗಿ ಕಟ್ಟಿಸಿದ ಕಟ್ಟಡದಲ್ಲಿ ಯಾರೂ ಬಾಳುವೆ ಮಾಡುತ್ತಿಲ್ಲ. ಪೊಲೀಸ್ ಕ್ವಾಟರ್ಸ್‌ನಲ್ಲಿರುವ ಕೆಲವು ಕಟ್ಟಡಗಳು, ಬೈಪಾಸ್‌ನಲ್ಲಿರುವ ಪಂಪ್‌ಹೌಸ್ ಕಟ್ಟಡ, ಮಲಪ್ರಭಾ ಡ್ಯಾಮ್ ಸೈಟಿನ ವಸತಿ ಗ್ರಹಗಳು ಹಾಗೂ ಅಲ್ಲಿನ ಹೊರ ಠಾಣಾ ಕಟ್ಟಡ, ಸ್ಥಳೀಯ ಸಿಪಿಐ ಕಟ್ಟಡ, ಸವದತ್ತಿ ಸಮೀಪದ ಉಗರಗೋಳ ಗ್ರಾಮ ಹೊರವಲಯದ ಮಲಪ್ರಭಾ ಎಡದಂಡೆ ಕಾಲುವೆ ನಿಯಂತ್ರಣ ಕಟ್ಟಡಗಳು ಬಳಕೆಯಾಗದೇ ಹಾಗೇ ಬದ್ದಿವೆ.

ಮೂಡಲಗಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ₹30 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ‘ನಾಗರಿಕರ ಸೌಲಭ್ಯಗಳ ಸಂಕೀರ್ಣ’ ಉದ್ಘಾಟನೆಯಾಗಿ 2 ವರ್ಷ ಕಳೆದಿದ್ದರೂ ಸಾರ್ವಜನಿಕರ ಬಳಕೆ ಸಿಕ್ಕಿಲ್ಲ. ಸಂಕೀರ್ಣವು ಉಪಾಹಾರ ಗೃಹ, ಹಾಲು, ಹಣ್ಣಿನ ಮಳಿಗೆಗಳನ್ನು ಒಳಗೊಂಡಿದೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಉಪಯೋಗವಾಗಬೇಕಿದ್ದ ಸಂಕೀರ್ಣ ಪಾಳು ಬಿದ್ದಿದೆ.

ಸುಂದರ ಕಟ್ಟಡ ಹೆಗ್ಗಣಕ್ಕೆ ಮೀಸಲು: ಹುಕ್ಕೇರಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸರ್ಕಾರಿ ಕಾರ್ಯಕ್ರಮ ಆಯೋಜಿಸಲು ‘ಪ್ರಾದೇಶಿಕ ಸುವರ್ಣ ಕರ್ನಾಟಕ ಭವನ’ ನಿರ್ಮಿಸಲಾಗಿದೆ. ಆದರೆ, ಏನು ಪ್ರಯೋಜನ? ಇದೂವರೆಗೆ ಸುಂದರ ಕಟ್ಟಡ ಇಲಿ- ಹೆಗ್ಗಣಗಳ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ₹4 ಕೋಟಿ ಅನುದಾನ ಬಳಸಿಕೊಂಡು ಹಂತ -ಹಂತವಾಗಿ ನಡೆದ ಭವನದ ಕಾಮಗಾರಿ ಈಗ ಪೂರ್ಣಗೊಂಡಿದೆ. 10 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ನೆಲಮಹಡಿ, 3,500 ಚದರ ಅಡಿ ವಿಸ್ತೀರ್ಣದಲ್ಲಿ ಮೊದಲ ಮಹಡಿ ನಿರ್ಮಾಣವಾಗಿದ್ದು, ಎರಡು ರಿಹರ್ಸಲ್‌ ಕೋಣೆ, ವಿಸ್ತಾರವಾದ ವೇದಿಕೆ ಇದೆ. ಎಲ್ಲವೂ ಪಾಳುಬಿದ್ದಿದೆ.

ಒಂದು ಕಾಲದಲ್ಲಿ ಸಾವಿರಾರು ಬಡ ಮಕ್ಕಳಿಗೆ ವಿದ್ಯಾದಾನ ಮಾಡಿದ ಬೈಲಹೊಂಗಲದ ಐತಿಹಾಸಿಕ ಶಾಲೆಯೊಂದು ಮುಚ್ಚಿದ್ದರಿಂದ ಈಗ ಅಲ್ಲಿಯ ಕಟ್ಟಡ ಅಕ್ರಮ ಚಟುವಟಿಕೆಯ ಜಾಗವಾಗಿ ಮಾರ್ಪಟ್ಟಿದೆ. ಪಟ್ಟಣದ ಪುರಸಭೆ 10ನೇ ವಾರ್ಡಿನ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.2ರ ದುಃಸ್ಥಿತಿ ಇದು. ಮಕ್ಕಳ ಹಾಜರಾತಿ ಕಡಿಮೆ ಆಗಿದ್ದರಿಂದ ಮೂರು ವರ್ಷಗಳಿಂದ ಈ ಶಾಲೆಯ ಬಾಗಿಲು ಮುಚ್ಚಿದೆ. ಶಾಲೆಯ ಪಕ್ಕದಲ್ಲೇ ಗೊಲ್ಲರಹಟ್ಟಿ ಇರುವುದರಿಂದ ಹಂದಿ, ನಾಯಿ, ಕುರಿ, ಕೋಳಿ ವಾಸಿಸುವ ತಾಣವಾಗಿದೆ.‌

ಚಿಕ್ಕೋಡಿ ಪಟ್ಟಣದ ಪುರಸಭೆಯ ನೂತನ ಕಟ್ಟಡ ಖಾನಾಪುರ ಪಟ್ಟಣದ ಹಳೆಯ ನ್ಯಾಯಾಲಯ ಕಟ್ಟಡ ಹುಕ್ಕೇರಿ ಹೊರವಲಯದಲ್ಲಿ ನಿರ್ಮಿಸಿದ ‘ಪ್ರಾದೇಶಿಕ ಸುವರ್ಣ ಕರ್ನಾಟಕ ಭವನ’ ಪಾಳುಬಿದ್ದಿದೆ ಬೆಳಗಾವಿಯ ಟಿಳಕವಾಡಿಯ ಮೊದಲ ರೈಲ್ವೆ ಗೇಟ್‌ ಬಳಿ ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಿಸಿದ ಕಲಾ ಮಂದಿರ ಉದ್ಘಾಟನೆಯಾಗಿ ಎಂಟು ತಿಂಗಳಾದರೂ ಬಳಕೆಗೆ ಮುಕ್ತವಾಗಿಲ್ಲರಾಜಶೇಖರ ಮೊದಲಿನವರ ನಿವಾಸಿ ರಾಯಬಾಗಮುಗಳಖೋಡದ ಕೆಲವು ಸರ್ಕಾರಿ ಕಟ್ಟಡಗಳು ಕಳೆದ ಹಲವು ವರ್ಷಗಳಿಂದಲೂ ನಿರುಪಯುಕ್ತವಾಗಿ ನಿಂತಿವೆ. ಆರೋಗ್ಯ ಉಪ ಕೇಂದ್ರ ಕಳೆದ 15 ವರ್ಷಗಳಿಂದ ಮಲ ಮೂತ್ರ ವಿಸರ್ಜನೆಯ ಕೇಂದ್ರವಾಗಿ ಬದಲಾಗಿದೆ. ಇದರ ಪಕ್ಕದಲ್ಲಿಯೇ ಇರುವ ವೃತ್ತಾಕಾರದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವು ಕೂಡ ಕಳೆದ 25 ವರ್ಷಗಳಿಂದ ಅನಾಥವಾಗಿ ನಿಂತಿದೆ. 15 ವರ್ಷಗಳಿಂದ ಶಿಕ್ಷಕರ ವಸತಿ ಗ್ರಹದ ಕಥೆ ಇದಕ್ಕಿಂತ ಭಿನ್ನವೇನಿಲ್ಲ.ಮಹಾಂತೇಶ ಪರಸಗಡ ಖಾಸಗಿ ಉದ್ಯೋಗಿಬೈಲಹೊಂಗಲ ತಹಶೀಲ್ದಾರ ಕಚೇರಿಯ ವಸತಿ ಗೃಹಗಳು ಬಳಕೆಯಾಗಿಲ್ಲ. ಸದ್ಯ ನಾಯಿ- ಹಂದಿಗಳ ವಾಸಕ್ಕೆ ಮೀಸಲಾಗಿವೆ. ಯರಗಟ್ಟಿ ಎಪಿಎಂಸಿ ಆವರಣದಲ್ಲಿರುವ ಕಟ್ಟಡ ಬಳಕೆಯಾಗಿದೆ ಹಾಳು ಬಿದ್ದಿದೆ. ಜನರ ದುಡ್ಡು ವ್ಯರ್ಥವಾಗುತ್ತಿದೆ. ಮಹಾಂತೇಶ ಪರಸಗಡ ಖಾಸಗಿ ಉದ್ಯೋಗಿಬೈಲಹೊಂಗಲ ತಹಶೀಲ್ದಾರ ಕಚೇರಿಯ ವಸತಿ ಗೃಹಗಳು ಬಳಕೆಯಾಗಿಲ್ಲ. ಸದ್ಯ ನಾಯಿ- ಹಂದಿಗಳ ವಾಸಕ್ಕೆ ಮೀಸಲಾಗಿವೆ. ಯರಗಟ್ಟಿ ಎಪಿಎಂಸಿ ಆವರಣದಲ್ಲಿರುವ ಕಟ್ಟಡ ಬಳಕೆಯಾಗಿದೆ ಹಾಳು ಬಿದ್ದಿದೆ. ಜನರ ದುಡ್ಡು ವ್ಯರ್ಥವಾಗುತ್ತಿದೆ. ಆಶಾರಾಣಿ ಕೊಳಚೇರ ಗೃಹಿಣಿಖಾನಾಪುರದ ಹಳೆಯ ನ್ಯಾಯಾಲಯ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಸುತ್ತಮುತ್ತ ಮದ್ಯದಂಗಡಿಗಳಿರುವ ಕಾರಣ ಈ ಕಟ್ಟಡ ಅನಧಿಕೃತ ಬಾರ್‌ ಆಗಿ ಪರಿವರ್ತನೆ ಆಗುತ್ತಿದೆ. ಮಾಂಸದ ಅಂಗಡಿಗಳು ತಲೆ ಎತ್ತುತ್ತವೆ. 20ಕ್ಕೂ ಹೆಚ್ಚು ಅಕ್ರಮ ಮಳಿಗೆಗಳು ನಿರ್ಮಾಣವಾಗಿವೆ.

ಚಿಕ್ಕೋಡಿಯಲ್ಲೂ ಹಲವು ಕಟ್ಟಡ ವ್ಯರ್ಥ

ಚಿಕ್ಕೋಡಿಯ ಕೃಷಿ ಇಲಾಖೆ ಕಚೇರಿ ಹಾಗೂ ಹೆಚ್ಚುವರಿ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಕಾಮಗಾರಿಗಳು ಪೂರ್ಣಗೊಂಡಿದ್ದರೂ ಉದ್ಘಾಟನೆ ಭಾಗ್ಯ ಮಾತ್ರ ಒದಗಿಬಂದಿಲ್ಲ. ₹1.75 ಕೋಟಿ ಅನುದಾನದಲ್ಲಿ ಚಿಕ್ಕೋಡಿ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ₹5.70 ಕೋಟಿ ಮೊತ್ತದಲ್ಲಿ ಹೆಚ್ಚುವರಿ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಇದರೊಂದಿಗೆ ಪುರಸಭೆ ಕಚೇರಿಯ ಕೂಗಳತೆ ದೂರದಲ್ಲಿ ಪುರಸಭೆಯಿಂದ ನಿರ್ಮಿಸಿರುವ ₹98 ಲಕ್ಷ ವೆಚ್ಚದ ವಾಣಿಜ್ಯ ಸಂಕೀರ್ಣವೂ ಉಪಯೋಗವಾಗಿಲ್ಲ.

ಶಾಸಕರಿಗೇ ಬೇಡವಾದ ಕಚೇರಿ

ಖಾನಾಪುರ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಶಾಸಕರ ಸಂಪರ್ಕ ಕಚೇರಿಯನ್ನು ಒದಗಿಸಲಾಗಿದೆ. ಅವರು ಬಳಸದ ಕಾರಣ ಬೀಗ ಜಡಿದ ಸ್ಥಿತಿಯಲ್ಲಿದೆ. ಹಿಂದಿನ ಶಾಸಕರು ಮತ್ತು ಈಗಿನ ಶಾಸಕರು ಈ ಕಚೇರಿಗೆ ಭೇಟಿ ನೀಡದ ಕಾರಣ ಕಚೇರಿ ನಿರ್ವಹಣೆಯತ್ತ ಸಂಬಂಧಪಟ್ಟವರೂ ಗಮನಹರಿಸಿಲ್ಲ. ಇದನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕಚೇರಿಗೆ ನೀಡಲಾಗಿದೆ. ಖಾನಾಪುರ ಸಿಪಿಐ ಕಚೇರಿ ಖಾಲಿ ಬಿದ್ದಿದೆ‌. ಜಾಂಬೋಟಿ ಶಿರೋಲಿ ಅಕ್ರಾಳಿ ಬೇಟಣೆ ಮತ್ತಿತರ ಕಡೆಗಳಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಾಗಿ ಕಟ್ಟಿಸಿದ ವಸತಿಗೃಹಗಳು ಖಾಲಿ ಬಿದ್ದಿವೆ. ಖಾನಾಪುರ ಹಳೆಯ ತಹಶೀಲ್ದಾರ್ ಕಚೇರಿ ಕಟ್ಟಡ ಹಾಳುಬಿದ್ದಿದೆ. ಲೆಕ್ಕಾಚಾರದ ಪ್ರಕಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಕಟ್ಟಡಗಳು ಖಾಲಿ ಬಿದ್ದಿರುವುದು ಖಾನಾಪುರದಲ್ಲೇ.


Spread the love

About Laxminews 24x7

Check Also

ವಿಕಲಚೇತನ ವ್ಯಕ್ತಿಗಳಿಗೆ ಕೌಶಲ್ಯ ತರಬೇತಿ: 100 ವಿಕಲಚೇತನರಿಗೆ ಪದವಿ ಪ್ರಧಾನ

Spread the loveವಿಕಲಚೇತನರನ್ನು ಆರ್ಥಿಕವಾಗಿ ಸ್ವಾಲವಂಬಿಗಳನ್ನಾಗಿ ಮಾಡಲು ಡಿಯಾಜಿಯೊ ಇಂಡಿಯಾ, ಅಂಗವಿಕಲ ವ್ಯಕ್ತಿಗಳ ಕೌಶಲ್ಯ ಮಂಡಳಿ ಸಹಭಾಗಿತ್ವದಲ್ಲಿ ಕೌಶಲ್ಯ ತರಬೇತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ