ಗೋಕಾಕ: ಅಖಿಲ ಭಾರತ ವೀರಶೈವ ಮಹಾಸಭಾ ಗೋಕಾಕ ತಾಲೂಕು ಘಟಕದ ವತಿಯಿಂದ ಡಿ. 19 ರಂದು ಮುಂಜಾನೆ 10 ಘಂಟೆಗೆ ನಗರದ ಕೆ.ಎಲ್.ಇ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಸೋಮಶೇಖರ್ ಮಗದುಮ್ಮ ಹೇಳಿದರು.
ನಗರದ ಕೆಎಲ್ಇ ಶಾಲಾ ಆವರಣದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 90 ರಷ್ಟು ಅಂಕ ಪಡೆದಿರುವ 110 ವಿದ್ಯಾರ್ಥಿಗಳಿಗೆ ಈ ಸಮಾರಂಭದಲ್ಲಿ ಪುರಸ್ಕರಿಸಲಾಗುವದು. ಗದುಗಿನ ಶಿವಾನಂದ ಬೃಹನ್ ಮಠದ ಸದಾಶಿವಾನಂದ ಭಾರತಿ ಮಹಾಸ್ವಾಮಿ ಕಾರ್ಯಕ್ರಮದ ಸಾನಿಧ್ಯ ವಹಿಸುವರು. ಅಧ್ಯಕ್ಷೆತೆಯನ್ನು ಜಿಲ್ಲಾ ಘಟಕದ ಅಧ್ಯಕ್ಷೆ ಶರಣೆ ರತ್ನಪ್ರಭಾ ಬೆಲ್ಲದ, ಮುಖ್ಯ ಅತಿಥಿಗಳಾಗಿ ಪ್ರಭಾಕರ ಕೋರೆ, ಅರುಣಾದೇವಿ ಎಸ್.ವಾಯ್, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಜಯಾನಂದ ಮುನವಳ್ಳಿ, ಚೇತನ ಅಂಗಡಿ, ಜ್ಯೋತಿ ಭಾವಿಕಟ್ಟಿ ಭಾಗವಹಿಸಲಿದ್ದು, ಸಮಾಜ ಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸೋಮಶೇಖರ್ ಮಗದುಮ್ಮ ಮನವಿ ಮಾಡಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಗೋಕಾಕ ತಾಲೂಕು ಘಟಕದ ಗೌರವಾಧ್ಯಕ್ಷ ರಾಜು ಮುನವಳ್ಳಿ ಮಾತನಾಡಿ, ವಿದ್ಯಾರ್ಥಿಗಳಿಗಾಗಿ ಸುಸಜ್ಜಿತ ಗ್ರಂಥಾಲಯವನ್ನು ಪ್ರಾರಂಭಿಸಲಾಗುವುದು. ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ತಾಲೂಕಿನ ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್.ಎಂ ಗಣಾಚಾರಿ, ವ್ಹಿ.ಎಸ್.ಮಗದುಮ್ಮ, ವಿಶ್ವನಾಥ್ ಕಡಕೋಳ, ಪ್ರಕಾಶ ಬಾಗೋಜಿ, ಸಿ.ಬಿ.ಗಿಡನ್ನವರ, ಬಸವರಾಜ ಹುಳ್ಳೇರ, ವಿಶ್ವನಾಥ್ ಬೆಲ್ಲದ,ಮಹಾಂತೇಶ ವಾಲಿ, ಮಹಾಂತೇಶ ತಾಂವಶಿ, ಪ್ರಸಾದ ಸೋಲಾಪೂರಮಠ, ಪಿ.ಎಂ ವಣ್ಣೂರ ಉಪಸ್ಥಿತರಿದ್ದರು.