ಗೋಕಾಕ : ಮಾನವ ಬಂಧುತ್ವ ವೇದಿಕೆಯ ಡಿ.6ರಂದು ನಡೆಸುವ ಮಹಾ ಪರಿನಿರ್ಮಾಣ ದಿನ ಈ ಬಾರಿ ವಿಶೇಷತೆಯಿಂದ ಕೂಡಿತ್ತು. ಸ್ಮಶಾನ ಭೂಮಿಯಲ್ಲಿ ವಾಹನಕ್ಕೆ ಚಾಲನೆ, ಬರ್ತಡೇ ಆಚರಿಸಿ, ವಿನೂತನ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.
ಶಾಸಕ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ ದಿನವನ್ನು 2014ರಿಂದ ಮೌಢ್ಯ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಪ್ರತಿ ವರ್ಷವೂ ಸಹ ವಿಶೇಷ , ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನರಲ್ಲಿರುವ ಮೂಢನಂಬಿಕೆ ಹೊಗಲಾಡಿಸಲು ಸಮಾರಂಭ ಏರ್ಪಡಿಸಲಾಗಿತ್ತು.
ಕಳೆದ ಬಾರಿ ಸ್ಮಶಾನ ದಲ್ಲಿ ಮದುವೆ ಮಾಡಿಸಿ, ವಿನೂತನ ವಾಗಿ ಆಚರಿಸಲಾಯಿತು. ಅದೇ ರೀತಿ ಈ ಬಾರಿಯೂ ಸಹ ಇಲ್ಲಿನ ಮರಾಠ ರುದ್ರ ಭೂಮಿಯಲ್ಲಿ ಓರ್ವ ಯುವಕ ತನ್ನ ಹೊಸ ದ್ವಿಚಕ್ರ ವಾಹನಕ್ಕೆ ಶಾಸಕ ಸತೀಶ್ ಜಾರಕಿಹೊಳಿ ಅವರ ಅಮೃತ ಹಸ್ತದಿಂದ ಚಾಲನೆ ಕೊಡಿಸಿದನು. ಮತ್ತೋರ್ವ ಯುವಕ ಜನ್ಮ ದಿನವನ್ನು ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬ ಆಚರಿಸಿದನು.
ಮುದೋಳ ತಾಲ್ಲೂಕಿನ ಮಾಚಕನೂರು ಗ್ರಾಮದ ವಾಲ್ಮೀಕಿ ಯುವ ವೇದಿಕೆ ಜಿಲ್ಲಾಧ್ಯಕ್ಷ ಮಂಜುನಾಥ್ ಬಾವಿದಂಡಿ ತನ್ನ ವಾಹನಕ್ಕೆ ಚಾಲನೆ ನೀಡಿದರೆ, ಚಿಕ್ಕಮಂಗಳೂರಿನ ಸುಭಾಷ್ ಗಸ್ತಿ ಎಂಬ ವ್ಯಕ್ತಿ ತನ್ನ ಜನ್ಮ ದಿನ ಆಚರಿದನು. ಮೌಢ್ಯಕ್ಕೆ ಸೆಡ್ಡು ಹೊಡೆದರು.
ರುಚಿಕರ ಊಟದ ವ್ಯವಸ್ಥೆ : ಪರಿನಿರ್ಮಾಣ ಕಾರ್ಯಕ್ರಮಕ್ಕೆ ಆಗಮಿಸಿದ ನೂರಾರು ಜನರಿಗೆ ಊಟದ ವ್ಯವಸ್ಥೆಯನ್ನು ಸ್ಮಶಾನ ಭೂಮಿಯಲ್ಲಿ ಮಾಡಲಾಗಿತ್ತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಜನರು ಪುರಿ, ಚಪಾಯಿ, ಅನ್ನ, ಬದನೆಕಾಯಿ ಪಲ್ಲೇ ಸೇರಿ ರುಚಿಕರ ಊಟ ಸವಿದರು. ಕೊರೊನಾ ಹಿನ್ನೆಲೆ ಈ ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. 2 ಲಕ್ಷಕ್ಕೂ ಹೆಚ್ಚು ಜನರು ಸಾಮಾಜಿಕ ಜಾಲತಾಣದಲ್ಲಿ ವೀಕ್ಷಣೆ ಮಾಡಿದರು.
ಧಿಕ್ಕರಿಸೋಣ ಮೌಢ್ಯತೆಯ ಚಟ್ಟ *: ಸ್ಮಶಾನ ಭೂಮಿಯಲ್ಲಿ ಮೌಢ್ಯದ ವಿರುದ್ಧ ಜಾಗೃತಿ ಮೂಡಿಸುವ ನಾಮ ಫಲಕಗಳನ್ನು ಹಾಕಲಾಗಿತ್ತು. ಇವುಗಳಲ್ಲಿ ” ಬೇಡ ಗರ ದೇವದಾಸಿ ಪಟ್ಟ, ಧಿಕ್ಕರಿಸೋಣ ಮೌಢ್ಯತೆಯ ಚಟ್ಟ” -ಕಣ್ಣು ಮುಚ್ಚಿದ ಕಲ್ಲು ದೇವಿಗೆ ಸೀರೆ ಕುಬ್ಬುಸ, ತೊಡೆಸುವ ಹರಕೆ , ಸದಾ ತಮಗಾಗಿ ಕಣ್ತೆರೆದ ಹಾಲುಣಿಸಿದ ಕರುಣಾಮಯಿ ತಸಯಿಗೆ ಹರಕು ಸೀರೆ ತಪ್ಪಲಿಲ್ಲ ಎಂಬ ವಿವಿಧ ನಾಮಫಲಕ ಜನರ ಗಮನ ಸೆಳೆದವು.
ಒಟ್ಟಿನಲ್ಲಿ ವಿಶೇಷ ಕಾರ್ಯಕ್ರಮಗಳ ಮೂಲಕ ಜನರಲ್ಲಿರುವ ಮೂಢನಂಬಿಕೆ ಹೊಗಲಾಡಿಸುವ ಸಮಾರಂಭ ಯಶಸ್ವಿಯಾಯಿತು.
*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??
*ಸುದ್ದಿ ಮತ್ತು ಜಾಹೀರಾತುಗಳಿಗೆ ಸಂಪರ್ಕಿಸಿರಿ*: 8123967576
*Laxmi News*