Breaking News

ಕಾಣೆಯಾಗಿದ ಗೋಕಾಕ ಪ್ರತಿಷ್ಠಿತ ಉದ್ಯಮಿ ಶವವಾಗಿ ಪತ್ತೆ

Spread the love

ಗೋಕಾಕ :

ಗೋಕಾಕ್ ನಗರದ  ಶುಕ್ರವಾರ ಸಂಜೆ ಅಪಹರಣಕ್ಕೆ ಒಳಗಾದ ಉದ್ಯಮಿಯ ಶವ ಕೊಲೆಯಲ್ಲಿ ಪರ್ಯವಸನಗೊಂಡಿದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.

ರಾಜು/ಮುನ್ನಾ ಝಂವರ ಎಂಬ ಗೋಕಾಕ ನಗರದ ಉದ್ಯಮಿ ಶುಕ್ರವಾರ ಸಂಜೆ 6:00 ರ ಸುಮಾರಿಗೆ ನಗರದ ಸಿಟಿ ಹೆಲ್ತ್ ಕೇರ್ ವೈದ್ಯ ಸಚಿನ್ ಶಿರಗಾಂವಿ ಜೊತೆ ಸೇರಿ ಮಾತುಕತೆ ನಡೆಸಿದ ನಂತರ ನಾಪತ್ತೆಯಾಗಿದ್ದರು. ಅವರ ಮೊಬೈಲ್ ಸಹಾ ಅಷ್ಟೇ ಹೊತ್ತಿಗೆ ಬಂದ್ ಆಗಿತ್ತು. ಈ ಬಗ್ಗೆ ರಾಜು ಅವರ ಕುಟುಂಬಸ್ಥರು ಗೋಕಾಕ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಪೊಲೀಸರು ತನಿಖೆ ನಡೆಸಿದಾಗ ರಾಜು ಅವರನ್ನು ಕೊಳವಿ ಕಿನಾಲ್ ಗೆ ಹಾಕಿ ಕೊಲೆ ಮಾಡಿರುವ ಅಂಶ ಪ್ರಾಥಮಿಕ ಹಂತದಲ್ಲಿ ಗೊತ್ತಾಗಿದೆ. ಅವರ ಬೈಕ್ ಸಿಟಿ ಹೆಲ್ತ್ ಕೇರ್ ಬಳಿ ನಿಲ್ಲಿಸಿರುವುದು ಸಹಾ ಬೆಳಕಿಗೆ ಬಂದಿದೆ.

 

 

 

ಮೊದಲು ರಾಜು ಮತ್ತು ಸಚಿನ್ ಶಿರಗಾವಿ ನಡುವೆ ವ್ಯಾಪಾರ ವ್ಯವಹಾರ ಆರಂಭವಾಗಿದೆ. ನಂತರ ಅದು ಕೋಟ್ಯಾಂತರ ರುಪಾಯಿ ವ್ಯವಹಾರದವರೆಗೂ ವಿಸ್ತಾರಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಇಬ್ಬರ ನಡುವಿನ ಮನಸ್ತಾಪ ತೀವ್ರಗೊಂಡಿದ್ದು ಕೊಲೆಯವರೆಗೂ ಹೋಗಿದೆ ಎನ್ನಲಾಗಿದೆ.

ಗೋಕಾಕ ಪೊಲೀಸರು ಎರಡು ದಿನಗಳಿಂದ ಎಲ್ಲಾ ಮೂಲಗಳಿಂದ ಮಾಹಿತಿ ಕಲೆಯಾಗುತ್ತಿದ್ದಾರೆ. ಇದೀಗ ಕಿನಾಲ್ ನೀರನ್ನು ತಡೆದು ರಾಜು ಅವರ ಕಳೇಬರ ಶೋಧಕ್ಕೆ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ. ಘಟನೆ ಇಡೀ ಗೋಕಾಕ ನಗರಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇದೀಗ ಸ್ಥಳಕ್ಕೆ ಆಗಮಿಸುತ್ತಿದ್ದಾರೆ.


Spread the love

About Laxminews 24x7

Check Also

ಪರಪ್ಪನ ಅಗ್ರಹಾರ ಜೈಲೋ? ರೆಸಾರ್ಟೋ?

Spread the loveಬೆಂಗಳೂರು, ಅಕ್ಟೋಬರ್​ 09: ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ರೌಡಿ ಶೀಟರ್​ ಗುಬ್ಬಚ್ಚಿ ಸೀನಾ ಹುಟ್ಟುಹಬ್ಬ ಆಚರಣೆಯ ವಿಚಾರ ವ್ಯಾಪಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ