Breaking News

ಬೆಳಗಾವಿ: ಸಮಸ್ಯೆ ಆಲಿಸಲು ಕಾರಿನಿಂದಿಳಿಯದ ಅಧಿಕಾರಿಗಳು; ಸ್ಥಳೀಯರಿಂದ ಘೇರಾವ್

Spread the love

ಬೆಳಗಾವಿ: ನೆರೆ ಹಾಗೂ ಅತಿವೃಷ್ಟಿಯಿಂದಾದ ಹಾನಿ ಪರಿಶೀಲನೆಗೆ ಬಂದಿದ್ದ ಕೇಂದ್ರ ಅಧ್ಯಯನ ತಂಡಕ್ಕೆ ಸ್ಥಳೀಯರು ಘೇರಾವ್ ಹಾಕಿದ ಘಟನೆ ಗೋಕಾಕ ತಾಲ್ಲೂಕಿನ ಲೋಳಸೂರ ಸೇತುವೆ ಬಳಿ ಮಂಗಳವಾರ ನಡೆಯಿತು.

ಅಧ್ಯಯನ ತಂಡದ ಅಧಿಕಾರಿಗಳ ಎದುರು ಸಮಸ್ಯೆ ಹೇಳಿಕೊಳ್ಳಲು ಮುಂದಾದ ಜಿಲ್ಲಾ ಪಂಚಾಯಿತಿ ಸದಸ್ಯ ಗೋವಿಂದ ಕೊಪ್ಪದ ಹಾಗೂ ಮುಖಂಡರಿಗೆ ಅವಕಾಶ ದೊರೆಯಲಿಲ್ಲ. ಅವರೊಂದಿಗೆ ಮಾತ‌ನಾಡಲು ತಂಡದ ಅಧಿಕಾರಿಗಳು ನಿರಾಕರಿಸಿದರು. ಕಾರಿನಲ್ಲಿ ಹೋಗಿ ಕುಳಿತರು. ಇದರಿಂದಾಗಿ ಸಿಟ್ಟಾದ ಮುಖಂಡರು ಕಾರಿಗೆ ಘೇರಾವ್ ಹಾಕಿ ಪ್ರತಿಭಟನೆ ನಡೆಸಿದರು. ಧಿಕ್ಕಾರ ಕೂಗಿದರು. ಕಾರಿನ ಮುಂದೆ ಧರಣಿ ಕುಳಿತರು. ಮನವೊಲಿಕೆಗೆ ಮುಂದಾದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರನ್ನು ತರಾಟೆಗೆ ತೆಗೆದುಕೊಂಡರು.
ಸಮಸ್ಯೆ ಹೇಳಿಕೊಳ್ಳಲು ಅವಕಾಶ ಕೊಡಿ.

ಅವರಿಗೆ ಕನ್ನಡ ತಿಳಿಯದಿದ್ದರೆ ಹಿಂದಿಯಲ್ಲೇ ಮಾತನಾಡುತ್ತೇವೆ. ಸಂತ್ರಸ್ತರ ಬವಣೆಗಳು ಅವರಿಗೆ ತಿಳಿಯಲಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಇಷ್ಟಾದರೂ ತಂಡದ ಅಧಿಕಾರಿಗಳು ಕಾರಿನಿಂದ ಇಳಿಯಲಿಲ್ಲ.

ಕೊನೆಗೆ ಎಲ್ಲ ವಿಷಯವನ್ನೂ ಗಮನಕ್ಕೆ ತರುತ್ತೇನೆ ಎಂದು ಜಿಲ್ಲಾಧಿಕಾರಿ ನೀಡಿದ ಭರವಸೆ ಮೇರೆಗೆ ಪ್ರತಿಭಟನಾಕಾರರು ಕಾರುಗಳು ಮುಂದೆ ಹೋಗಲು ಬಿಟ್ಟರು.

‘ಹೋದ ವರ್ಷ ಉಂಟಾದ ನೆರೆಯಿಂದ ಸಂಕಷ್ಟಕ್ಕೆ ಒಳಗಾದವರಿಗೆ ಸರಿಯಾಗಿ ಪರಿಹಾರ ಸಿಕ್ಕಿಲ್ಲ. ಮನೆ ಹಾನಿ ಬಗ್ಗೆ ಸಮೀಕ್ಷೆ ಮೇಲೆ ಸಮೀಕ್ಷೆ ನಡೆದಿದೆ. ಆದರೆ, ಬಹಳ ಮಂದಿಗೆ ಹಣ ಬಂದಿಲ್ಲ. ಬೆಳೆ ಹಾನಿ ಪರಿಹಾರದ ಕತೆಯೂ ಹಾಗೆಯೇ ಆಗಿದೆ. ರಸ್ತೆಗಳು ಹಾಳಾಗಿವೆ. ಇದನ್ನು ಕೇಂದ್ರ ತಂಡದ ಎದುರು ಹೇಳಲು ಮುಂದಾದೆವು. ಆದರೆ ಅವರು ಅಳಲು ಆಲಿಸಲು ಸಿದ್ಧವಿರಲಿಲ್ಲ. ಇದು ಖಂಡನೀಯ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಗೋವಿಂದ ಕೊಪ್ಪದ ಮಾಧ್ಯಮ ಪ್ರತಿನಿಧಿಗಳ ಎದುರು ಆಕ್ರೋಶ ವ್ಯಕ್ತಪಡಿಸಿದರು.


ಕೇಂದ್ರ ಅಧ್ಯಯನ ತಂಡಕ್ಕೆ ಸ್ಥಳೀಯರು ಘೇರಾವ್ ಹಾಕಿರುವ ದೃಶ್ಯ


Spread the love

About Laxminews 24x7

Check Also

ಕೊಯಮತ್ತೂರಿನ ಒಂದು ಕಂಪನಿಯು ತಮ್ಮ “ಒಟ್ಟಿಗೆ ನಾವು ಬೆಳೆಯುತ್ತೇವೆ”

Spread the loveಕೊಯಮತ್ತೂರಿನ ಒಂದು ಕಂಪನಿಯು ತಮ್ಮ “ಒಟ್ಟಿಗೆ ನಾವು ಬೆಳೆಯುತ್ತೇವೆ” ಉಪಕ್ರಮದಡಿಯಲ್ಲಿ 140 ಉದ್ಯೋಗಿಗಳಿಗೆ ಒಟ್ಟು 14.5 ಕೋಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ