ಗೋಕಾಕ ನಗರದ ಎಲ್ಲಾ ಪತ್ರಿಕಾ ಮಾಧ್ಯಮದ ಮಿತ್ರ ರನ್ನ ಶ್ರೀ ಸಂತೋಷ್ ಜಾರಕಿಹೊಳಿ ಅವರು ತಮ್ಮ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ನಲ್ಲಿ ಒಂದು ಔತಣ ಕೂಟಕ್ಕೆ ಕರೆದಿದ್ದರು ಇಲ್ಲಿ ಸುಮಾರು ಜನ ಕೂಡ ಭಾಗ ವಹಿಸಿದ್ದರು, ಗೋಕಾಕ ನಗರದ ಎಲ್ಲಾ ವಾರ ಪತ್ರಿಕೆ,ದಿನ ಪತ್ರಿಕೆ ,ಹಾಗೂ ಯೂಟ್ಯೂಬ್ ಚಾನಲ್ ಗಳ ವರದಿಗಾರರು ಈ ಸಭೆಯಲ್ಲಿ ಭಾಗ ವಹಿಸಿದ್ದರು,
ಸಭೆಯ ಮುಖ್ಯ ಉದ್ದೇಶ ಏನಂದ್ರೆ ಎಲ್ಲರೂ ಒಂದಾಗಿ ಇರಿ ನಿಮ್ಮ , ಒಗ್ಗಟ್ಟು ಈ ಒಂದು ವೇದಿಕೆ ಗೆ ಮುಖ್ಯ, ನೀವು ನಿಮ್ಮಲ್ಲೇ ದ್ವೇಷ ಗಳನ್ನ ಹರಡಿಸಿ ಕೊಳ್ಳಬೇಡಿ, ವದಂತಿ ಗಳಿಗೆ ಕಿವಿ ಗೊಡಬೇಡಿ , ಯಾರು ಎಲ್ಲೆಲ್ಲಿ ಹೋಗಿ ಆಫೀಸ್ ಗಳಿಗೆ ಹೋಗಿ ತೊಂದ್ರೆ ಮಾಡೋದು, ಆಗಿರಲಿ, ನಿಮ್ಮಲ್ಲೇ 10ಗುಂಪು ಮಾಡಿ ನಾನು ಅಧ್ಯಕ್ಷ , ಉಪಾಧ್ಯಕ್ಷ, ಅಂತ ಹೇಳ್ಕೊಂಡು, ಅಲ್ಲಿ ಇಲ್ಲಿ ವಸೂಲಿ ಮಾಡುವುದು, ಬೇರೆ ಏನೋ ರೀತಿಂದ ಜನರಿಗೆ ಅಥವಾ ಅಧಿಕಾರಿಗಳ ಹತ್ತಿರ ಹೋಗಿ ಹಣ ವಸೂಲಿ, ಮಾಡುವುದನ್ನ ಮಾಡಬೇಡಿ.
ಇಂಥ ಸುಮಾರು ಸುದ್ದಿಗಳು ನಮ್ಮ ಕಿವಿಗೆ ಬಿದ್ದಿವೆ ಯಾರ್ ಯಾರು ಏನೇನ್ ಮಾಡ್ತಾರೆ ಅಂತಾ ನಮಗೆ ಎಲ್ಲಾಕಡೆ ಇಂದ ಮಾಹಿತಿ ಬರುತ್ತೆ , ಪತ್ರಿಕೋದ್ಯಮ ಮಾಡೋ ರು, ಮಾಡಿ ಅದರಲ್ಲಿ ರಾಜಕೀಯ ವನ್ನಾ ಮಿಂಗಲ ಮಾಡಬೇಡಿ,
.ರಾಜಕೀಯ ಮಾಡೋರು ರಾಜಕಾರಣ ದಲ್ಲಿ ಮುಂದು ವರೆದರೆ ಉತ್ತಮ
ರಾಜಕೀಯ ಹಾಗೂ ಪತ್ರಿಕೋದ್ಯಮ ವನ್ನಾ ಕೂಡಿಸಿ ನಿಯತ್ತಾಗಿ ಕೆಲ್ಸ ಮಾಡ್ತಿರೋ ಪತ್ರಕರ್ತರ ಹೆಸರನ್ನು ಹಾಳು ಮಾಡಬೇಡಿ,
ನಮ್ಮ ಕುಟುಂಬ ದಲ್ಲಿ ಕೂಡ ಯಾರು ಇದಕ್ಕೆ ಬೆಂಬಲ ಕೊಡಲ್ಲ ಆದ್ರೂ ನಾನು ಇಂಥವರಿಗೆ ಒಂದು ಖಡಕ್ ಎಚ್ಚರಿಕೆ ನೀಡುತ್ತಿದ್ದೇನೆ ಇಲ್ಲಿ ವರೆಗೂ ಎನ್ ಆಗಿದೆ , ಆಗಿ ಹೋಗಿದೆ ಆದರೆ ಅಂಥ ಯಾವದೇ ಘಟನೆ ಗಳು ,ಮತ್ತೆ ಮರುಕಳಿಸಿದರೆ ಸ್ವತಃ ನಾನೇ ಮುಂದೆ ನಿಂತು ಅಂಥವರ ಮೇಲೆ ಕ್ರಮ ಕೈಗೊಳ್ಳುವಂತೆ ಮೆಲಾಧಿ ಕಾರಿ ಗಳಿಗೆ ಹೇಳುತ್ತೇನೆ
ನಿಮ್ಮ ಜೊತೆ ನಾನಿದ್ದಿನಿ ಎಂದು ಶ್ರೀ ಸಂತೋಷ್ ಜಾರಕಿಹೊಳಿ ಅವರು ಹೇಳಿದರು,
ಕೊನೆಯ ದಾಗಿ ಒಂದು ಖಡಕ್ ವಾರ್ನಿಂಗ್ ಕೊಟ್ಟ ಸಂತೋಷ್ ಜಾರಕಿಹೊಳಿ ಅವರು ನಾನು ಪ್ರತಿದಿನ ಎಲ್ಲರ ಬಗ್ಗೆ ಗಮನಿಸುತ್ತಿದೆ, ಇನ್ನೂ ಮುಂದೆ ಯಾವದೇ ರೀತಿ ಹಿಂದೆ ನಡೆದ ಘಟನೆ ಗಳು ನನ್ನ ಗಮನಕ್ಕೆ ಬಂದರೆ ನಾನೇ ಖುದ್ದಾಗಿ ನಿಂತು ಅವರ ಮೇಲೆ ಕ್ರಮ ತೆಗೆದು ಕೊಳ್ಳಬೇಕಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾಧಿಕ್ ಹಲ್ಯಾಳ, ಪ್ರಶಾಂತ ಜೋರಾಪುರ, ಮಲ್ಲಪ್ಪ ದಾಸಪ್ಪನ್ನವರ, ಮನೋಹರ ಮೇಗೇರಿ, ಮಹಾಲಿಂಗ ಕೆಂಚನ್ನವರ ಎಲ್ಲಾ ಪ್ರತಿಕಾ ಮಾಧ್ಯಮದವರು ಉಪಸ್ಥಿತರಿದ್ದರು.