ಗೋಕಾಕ: ಇಲ್ಲಿನ ತಾಪಂ ಕಾರ್ಯಾಲಯದಲ್ಲಿ ಬುಧವಾರ ಗೋಕಾಕ ಹಾಗೂ ಮೂಡಲಗಿ ತಾಲೂಕು ಪಂಚಾಯತಿಗಳ 2020-21ನೇ ಸಾಲಿನ ಜಮಾಬಂದಿ ಸಭೆ ಜರುಗಿತು.
ಜಿಲ್ಲಾ ಪಂಚಾಯತ್ ಉಪ ನಿರ್ದೇಶಕ ಭೀಮಪ್ಪ ಲಾಳಿ ಅವರು ಸಭೆಯಲ್ಲಿ ತಾಲೂಕು ನೋಡಲ್ ಅಧಿಕಾರಿಗಳಾಗಿ ಭಾಗವಹಿಸಿ ಮಾತನಾಡಿ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕೈಗೊಳ್ಳಲು ಸೂಚಿಸಿದರು. 2020-21ನೇ ಸಾಲಿನ ಖರ್ಚುವೆಚ್ಚಗಳ ಬಗ್ಗೆ ಪರಿಶೀಲಿಸಿದರು.
ಗೋಕಾಕ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮುರಳೀಧರ ದೇಶಪಾಂಡೆ, ಗೋಕಾಕ ಹಾಗೂ ಮೂಡಲಗಿ ತಾಲ್ಲೂಕು ವ್ಯಾಪ್ತಿಯ ಅನುಷ್ಠಾನಾಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.
ಎ.ಬಿ. ಮಲಬನ್ನವರ ಸ್ವಾಗತಿಸಿದರು. ಎಂ.ಬಿ. ಜಗದಾಳ ಜಮಾಬಂದಿ ವಿವರ ಮಂಡಿಸಿದರು. ಎಂ.ಎಂ. ಕಮನೂರೆ ವಂದಿಸಿದರು.
Laxmi News 24×7